ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಪರ್ವೀನ್ ಬಾಬಿ

ನಟಿ
ಪೋಸ್ಟ್ ಶೇರ್ ಮಾಡಿ

ಎಪ್ಪತ್ತರ ದಶಕದಲ್ಲಿ ಹಿಂದಿ ಚಿತ್ರರಂಗದ ಯಶಸ್ವೀ ನಾಯಕನಟಿ ಎಂದು ಕರೆಸಿಕೊಂಡವರು ಪರ್ವೀನ್ ಬಾಬಿ. ಸಮಾಜದ ಸಂಪ್ರದಾಯಗಳನ್ನು ಧಿಕ್ಕರಿಸುವ ಆಧುನಿಕ ಯುವತಿ ಪಾತ್ರಗಳಲ್ಲೇ ಆಕೆ ಹೆಚ್ಚಾಗಿ ಕಾಣಿಸಿಕೊಂಡರು ಎನ್ನುವುದು ವಿಶೇಷ.ಹುಟ್ಟಿದ್ದು ಗುಜರಾತ್‌ನ ಜುನಾಘಡದಲ್ಲಿ (1949, ಏಪ್ರಿಲ್ 4). ಔರಂಗಾಬಾದ್‌ನಲ್ಲಿ ಶಾಲೆ ವಿದ್ಯಾಭ್ಯಾಸ ನಡೆಸಿದ ಅವರು ಅಹಮದಾಬಾದ್‌ನಲ್ಲಿ ಕಾಲೇಜು ವ್ಯಾಸಂಗ ಮಾಡಿದರು. ಪರ್ವೀನ್ ತಂದೆ ವಾಲಿ ಮೊಹಮ್ಮದ್ ಬಾಬಿ ಜುನಾಘಡದ ನವಾಬನ ಕಚೇರಿಯಲ್ಲಿ ಆಡಳಿತಾಧಿಕಾರಿಯಾಗಿದ್ದರು. ವಾಲಿ ದಂಪತಿ ಮದುವೆಯಾಗಿ 14 ವಷಗಳ ನಂತರ ಹುಟ್ಟಿದವರು ಪರ್ವೀನ್.

‘ಕಾಲಾ ಪತ್ಥರ್‌’ ಚಿತ್ರದಲ್ಲಿ ಶಶಿಕಪೂರ್ ಜೊತೆ

ಬಿ.ಆರ್‌.ಇಶಾರಾ ನಿರ್ದೇಶನದ ಚಿತ್ರದೊಂದಿಗೆ ಪರ್ವೀನ್ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಆ ಕಾಲದ ಅತ್ಯಂತ ವಿವಾದಾತ್ಮಕ ನಿರ್ದೇಶಕ ಎಂದೇ ಕರೆಸಿಕೊಂಡಿದ್ದವರು ಇಶಾರಾ. ‘ಚರಿತಾ’ ಶೀರ್ಷಿಕೆಯ ಈ ಚಿತ್ರದೊಂದಿಗೆ ಕ್ರಿಕೆಟಿಗ ಸಲೀಂ ದುರಾನಿ ಕೂಡ ಬೆಳ್ಳಿತೆರೆಗೆ ಪರಿಚಯವಾದರು. 13 ವರ್ಷಗಳ ತಮ್ಮ ಸಿನಿಮಾ ಜೀವನದಲ್ಲಿ ಪರ್ವೀನ್ ಸಮಕಾಲೀನ ಶ್ರೇಷ್ಠ ಹೀರೋಗಳು, ನಿರ್ದೇಶಕರ ಚಿತ್ರಗಳಲ್ಲಿ ನಟಿಸಿದರು. ‘ಮಜಬೂರ್’, ‘ಅಮರ್ ಅಕ್ಬರ್ ಆ್ಯಂಥೋನಿ’, ‘ದೀವಾರ್’, ‘ಕಾಲಾ ಪತ್ಥರ್’, ‘ಕ್ರಾಂತಿ’, ‘ಕಾಲಿಯಾ’ ಹೆಸರಿಸಬಹುದಾದ ಅವರ ಕೆಲವು ಪ್ರಮುಖ ಚಿತ್ರಗಳು.

‘ಖುದ್ ದಾರ್‌’ ಚಿತ್ರದಲ್ಲಿ ಅಮಿತಾಭ್ ಬಚ್ಚನ್‌ ಜೋಡಿಯಾಗಿ ಪರ್ವೀನ್ ಬಾಬಿ

ನಾಯಕಪ್ರಧಾನ ಚಿತ್ರಗಳಲ್ಲಿ ನಟಿಸಿದರೂ ಪರ್ವೀನ್ ಉತ್ತಮ ಅಭಿನಯದಿಂದ ಪ್ರೇಕ್ಷಕರ ಗಮನ ಸೆಳೆದಿದ್ದರು. ಅಮಿತಾಭ್ ಬಚ್ಚನ್ ಜೊತೆಗಿನ ಅವರ ಹಲವು ಚಿತ್ರಗಳು ದೊಡ್ಡ ಯಶಸ್ಸು ಕಂಡಿವೆ. ವಿನೋದ್ ಪಾಂಡೆ ನಿರ್ದೇಶನದ ‘ಯೆಹ್ ನಜ್ದೀಕಿಯಾ’ ಹೊಸ ಅಲೆಯ ಚಿತ್ರದಲ್ಲೂ ಪರ್ವೀನ್ ನಟಿಸಿದ್ದರು. ಪ್ರತಿಷ್ಠಿತ ಟೈಮ್ಸ್‌ ಮ್ಯಾಗಜೀನ್ ಕವರ್‌ಪೇಜ್‌ನಲ್ಲಿ (1975)   ಕಾಣಿಸಿಕೊಂಡ ಮೊದಲ ಭಾರತೀಯ ನಟಿ ಎನ್ನುವ ಖ್ಯಾತಿ ಅವರದಾಗಿದೆ. ಪರ್ವೀನ್ ಮದುವೆಯಾಗಲಿಲ್ಲ. ಆದರೆ ನಿರ್ದೇಶಕ ಮಹೇಶ್‌ಭಟ್‌ ಮತ್ತು ನಟರಾದ ಕಬೀರ್ ಬೇಡಿ, ಡ್ಯಾನಿ ಡೆನ್ಜೋಂಗ್ಪಾ ಜೊತೆಗೆ ಪರ್ವೀನ್‌ಗೆ ಅಫೇರ್ ಇದ್ದ ವದಂತಿ ಹರಿದಾಡುತ್ತಿದ್ದವು. ನಟ ಕಬೀರ್ ಬೇಡಿ ಜೊತೆ ಆಕೆ ಕೆಲಕಾಲ ಇಟಲಿಯಲ್ಲಿದ್ದು ಬಂದಿದ್ದರು. ತಮ್ಮ ಪ್ರೀತಿ, ಪ್ರಣಯದ ಕುರಿತು ಪರ್ವೀನ್ ಕೂಡ ಎಗ್ಗಿಲ್ಲದೆ ಹೇಳಿಕೊಳ್ಳುತ್ತಿದ್ದರು.

ಶತ್ರುಘ್ನಾ ಸಿನ್ಹಾ ಜೊತೆ

ಹೊಳಪಿನ ನೋಟ, ಆಕರ್ಷಕ ಮೈಮಾಟದಿಂದ ಪರ್ವೀನ್ 1970ರವರೆಗೆ ಚಿತ್ರರಂಗದ ಕಣ್ಮಣಿಯಾಗಿದ್ದರು. 80ರ ದಶಕದ ಮಧ್ಯದ ಹೊತ್ತಿಗೆ ಆಕೆಯ ಜನಪ್ರಿಯತೆ ಸಂಪೂರ್ಣ ಕುಸಿದಿತ್ತು. ಖ್ಯಾತ ತತ್ವಜ್ಞಾನಿ ಯು.ಜಿ.ಕೃಷ್ಣಮೂರ್ತಿ ಅವರ ಅನುಯಾಯಿಯಾಗಿ 1983ರಲ್ಲಿ ಆಕೆ ನ್ಯೂಯಾರ್ಕ್‌ಗೆ ತೆರಳಿದರು. ಮತ್ತೆ ಅವರು ಮುಂಬಯಿಗೆ ಮರಳಿದ್ದು 2002ರಲ್ಲಿ. ಆ ವೇಳೆಗಾಗಲೇ ಸಾಕಷ್ಟು ಮೈತೂಕ ಹೆಚ್ಚಿಸಿಕೊಂಡಿದ್ದ ಪರ್ವೀನ್ ಉದ್ಯಮದ ಅವಕೃಪೆಗೀಡಾದರು. ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದ ಆಕೆ ಅಪಾರ್ಟ್‌ಮೆಂಟ್‌ವೊಂದರಲ್ಲಿ ಏಕಾಂಗಿಯಾಗಿ ಬದುಕುತ್ತಿದ್ದರು. 2005, ಜನವರಿ 22ರಂದು ಅಪಾರ್ಟ್‌ಮೆಂಟ್‌ನಲ್ಲಿ ಪರ್ವೀನ್ ಮೃತದೇಹ ಪತ್ತೆಯಾಯ್ತು. ಸಿನಿಮಾರಂಗದ ವರ್ಣರಂಜಿತ ಬದುಕಿನ ನಾಯಕಿಯೊಬ್ಬರು ಕಣ್ಮರೆಯಾದರು.

ಪರ್ವೀನ್ ಬಾಬಿ | ಜನನ: 04/04/1949 | ನಿಧನ: 22/01/2005

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಸಾಮಾಜಿಕ ಕಳಕಳಿಯ ನಟ ವಿವೇಕ್

ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ವಿವೇಕ್‌. 220ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರು ಸಾಮಾಜಿಕ ಕಳಕಳಿ ಹೊಂದಿದ್ದ ಕಲಾವಿದ. 40,50ರ

ಟಿ.ಎಂ.ಸೌಂದರರಾಜನ್

ಭಾರತೀಯ ಚಿತ್ರರಂಗ ಕಂಡ ಪ್ರಮುಖ ಹಿನ್ನೆಲೆ ಗಾಯಕ ಟಿ.ಎಂ.ಸೌಂದರರಾಜನ್‌. ಕರ್ನಾಟಕ ಶಾಸ್ತ್ರೀಯ ಸಂಗೀತಗಾರ. ಆತ್ಮೀಯರಿಂದ ‘ಟಿಎಂಎಸ್‌’ ಎಂದೇ ಕರೆಸಿಕೊಳ್ಳುತ್ತಿದ್ದ ಅವರು