ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಬಹುಭಾಷಾ ತಾರೆ ಚಂದ್ರಕಲಾ

ನಟಿ
ಪೋಸ್ಟ್ ಶೇರ್ ಮಾಡಿ

ಚಿತ್ರನಿರ್ಮಾಪಕ, ಹಂಚಿಕೆದಾರರಾಗಿದ್ದ ಎಂ.ಎಸ್.ನಾಯಕ್‌ ಅವರ ಪುತ್ರಿ ನಟಿ ಚಂದ್ರಕಲಾ. ಮಂಗಳೂರು ಮೂಲದ ಅವರ ಮಾತೃಭಾಷೆ ಕೊಂಕಣಿ. ವಾಣಿಜ್ಯೋದ್ಯಮಿಯಾಗಿದ್ದ ನಾಯಕ್‌ ಅವರು ಕಾರ್ಯನಿಮಿತ್ತ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ನೆಲೆಸಿದ್ದರು. ಆಂಧ್ರದಲ್ಲಿ ಜನಿಸಿದ ಚಂದ್ರಕಲಾ ಬೆಳೆದದ್ದು ಮದರಾಸಿನಲ್ಲಿ. ಚಿಕ್ಕಂದಿನಲ್ಲೇ ಭರತನಾಟ್ಯ, ಕೂಚುಪುಡಿ ನೃತ್ಯ ಕಲಿತ ಚಂದ್ರಕಲಾ ಪ್ರಮುಖ ನೃತ್ಯಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿ ಗಮನ ಸೆಳೆದವರು.

ತಂದೆಯಿಂದಾಗಿ ಚಿತ್ರರಂಗದ ಸಂಪರ್ಕ ಸುಲಭವಾಯ್ತು. ‘ಶ್ರೀ ರಾಮಾಂಜನೇಯ ಯುದ್ಧ’ (1963) ಚಿತ್ರದಲ್ಲಿ ಬಾಲನಟಿಯಾಗಿ ಚಂದ್ರಕಲಾ ಬೆಳ್ಳಿತೆರೆಗೆ ಪರಿಚಯವಾದರು. ಮುಂದಿನದ್ದು ‘ಜೀವನ ತರಂಗ’ದಲ್ಲಿ ನಟ ರಾಜಕುಮಾರ್ ಅವರ ತಂಗಿಯ ಪಾತ್ರ. ಇದಾದ ಮೇಲೆ ಬೇರೆ ನಿರ್ಮಾಪಕರ ಒಂದೆರೆಡು ಚಿತ್ರಗಳಲ್ಲಿ ನಟಿಸಿದ ಅವರು ತಂದೆ ನಿರ್ಮಿಸಿದ ‘ಒಂದೇ ಬಳ್ಳಿಯ ಹೂಗಳು’ ಚಿತ್ರದಲ್ಲಿ ನಾಯಕಿಯಾದರು. ಚಿತ್ರ ಶತದಿನೋತ್ಸವ ಆಚರಿಸಿತು.

‘ಪಾರ್ವತಿ ಕಲ್ಯಾಣ’ ಚಿತ್ರದಲ್ಲಿ ರಾಜಕುಮಾರ್ ಅವರೊಂದಿಗೆ ಚಂದ್ರಕಲಾ (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಮುಂದೆ ರಾಜಕುಮಾರ್ ಅವರ ‘ಮಾರ್ಗದರ್ಶಿ’ ಚಿತ್ರದಲ್ಲಿ ಅವಕಾಶ ಸಿಕ್ಕಿತು. ನಂತರ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ಎನ್‌ಟಿಆರ್‌, ನಾಗೇಶ್ವರರಾವ್‌, ಕೃಷ್ಣ, ಶೋಬನ್ ಬಾಬು, ಎಂಜಿಆರ್‌, ಶಿವಾಜಿ ಗಣೇಶನ್ ಮುಂತಾದ ಪ್ರಮುಖ ನಾಯಕನಟರಿಗೆ ಜೋಡಿಯಾಗಿ ನಟಿಸಿದ್ದು ವಿಶೇಷ. ‘ಆಡಪಡಚು’, ‘ಸಂಪೂರ್ಣ ರಾಮಾಯಣಂ’ ಇವರ ಪ್ರಮುಖ ತೆಲುಗು ಸಿನಿಮಾಗಳು. ಜೇನುಗೂಡು, ಬೇಡಿಬಂದವಳು, ಮನೆ ಬೆಳಕು, ಮಗ ಮೊಮ್ಮಗ, ಸುಬ್ಬಾಶಾಸ್ತ್ರಿ, ಪಾರ್ವತಿ ಕಲ್ಯಾಣ, ಬೀದಿ ಬಸವಣ್ಣ, ರೌಡಿ ರಂಗಣ್ಣ, ಒಂದೇ ರೂಪ ಎರಡು ಗುಣ, ಸುಳಿ… ಅವರ ಪ್ರಮುಖ ಕನ್ನಡ ಚಿತ್ರಗಳು. ನಾಯಕಿಯಾಗಿ ಬೇಡಿಕೆ ಇದ್ದಾಗಲೇ ದುಬೈ ಮೂಲದ ವಾಣಿಜ್ಯೋದ್ಯಮಿಯನ್ನು ಮದುವೆಯಾದರು ಚಂದ್ರಕಲಾ. ಕೆಲ ವರ್ಷಗಳ ನಂತರ ಭಾರತಕ್ಕೆ ಹಿಂತಿರುಗಿ ಮದರಾಸಿನಲ್ಲಿ ನೆಲೆಸಿದ್ದ ಅವರು ಕ್ಯಾನ್ಸರ್‌ನಿಂದಾಗಿ 50ನೇ ವಯಸ್ಸಿನಲ್ಲಿ 1999, ಜೂನ್‌ 22ರಂದು ಅಗಲಿದರು.

ಚಂದ್ರಕಲಾ | ಜನನ: 25/12/1949 | ನಿಧನ: 22/06/1999

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಸಿನಿಮಾ ಮಾಹಿತಿ ಭಂಡಾರ ಆರ್.ಲಕ್ಷ್ಮಣ್

ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಶ್ರಮಿಸಿದ ಹಲವರಲ್ಲಿ ಆರ್‌.ಲಕ್ಷ್ಮಣ್ ಹೆಸರೂ ಪ್ರಸ್ತಾಪವಾಗುತ್ತದೆ. ಚಿತ್ರನಿರ್ಮಾಪಕ, ವಿತರಕರಾಗಿ ಅಷ್ಟೇ ಅಲ್ಲ ಕನ್ನಡ ಸಿನಿಮಾಗೆ

ಬಹುಭಾಷಾ ತಾರೆ ಚಂದ್ರಕಲಾ

ಚಿತ್ರನಿರ್ಮಾಪಕ, ಹಂಚಿಕೆದಾರರಾಗಿದ್ದ ಎಂ.ಎಸ್.ನಾಯಕ್‌ ಅವರ ಪುತ್ರಿ ನಟಿ ಚಂದ್ರಕಲಾ. ಮಂಗಳೂರು ಮೂಲದ ಅವರ ಮಾತೃಭಾಷೆ ಕೊಂಕಣಿ. ವಾಣಿಜ್ಯೋದ್ಯಮಿಯಾಗಿದ್ದ ನಾಯಕ್‌ ಅವರು

ಬಿ.ಎನ್.ಹರಿದಾಸ್

ಬೆಂಗಳೂರು ಮೂಲದ ಹರಿದಾಸ್ ಕನ್ನಡ, ತಮಿಳಿನ ಅರವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. `ಫಲಿತಾಂಶ’ ಸೇರಿದಂತೆ ಪುಟ್ಟಣ್ಣನವರ `ಬಿಳಿ

ಚಿನ್ನದ ಕಂಠದ ಗಾಯಕ ಮನ್ನಾಡೇ

ಭಾರತೀಯ ಸಿನಿಮಾರಂಗದ ಮೇರು ಗಾಯಕ ಮನ್ನಾಡೇ ಜನ್ಮದಿನವಿಂದು (ಮೇ 1). ಶ್ರೇಷ್ಠ ಹಿನ್ನೆಲೆ ಗಾಯನದ ಮೂಲಕ ಅವರು ಚಿತ್ರರಸಿಕರ ಮನಸ್ಸಿನಲ್ಲಿ

Exit mobile version