ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಬಹುಭಾಷಾ ತಾರೆ ಚಂದ್ರಕಲಾ

ನಟಿ
ಪೋಸ್ಟ್ ಶೇರ್ ಮಾಡಿ

ಚಿತ್ರನಿರ್ಮಾಪಕ, ಹಂಚಿಕೆದಾರರಾಗಿದ್ದ ಎಂ.ಎಸ್.ನಾಯಕ್‌ ಅವರ ಪುತ್ರಿ ನಟಿ ಚಂದ್ರಕಲಾ. ಮಂಗಳೂರು ಮೂಲದ ಅವರ ಮಾತೃಭಾಷೆ ಕೊಂಕಣಿ. ವಾಣಿಜ್ಯೋದ್ಯಮಿಯಾಗಿದ್ದ ನಾಯಕ್‌ ಅವರು ಕಾರ್ಯನಿಮಿತ್ತ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ನೆಲೆಸಿದ್ದರು. ಆಂಧ್ರದಲ್ಲಿ ಜನಿಸಿದ ಚಂದ್ರಕಲಾ ಬೆಳೆದದ್ದು ಮದರಾಸಿನಲ್ಲಿ. ಚಿಕ್ಕಂದಿನಲ್ಲೇ ಭರತನಾಟ್ಯ, ಕೂಚುಪುಡಿ ನೃತ್ಯ ಕಲಿತ ಚಂದ್ರಕಲಾ ಪ್ರಮುಖ ನೃತ್ಯಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿ ಗಮನ ಸೆಳೆದವರು.

ತಂದೆಯಿಂದಾಗಿ ಚಿತ್ರರಂಗದ ಸಂಪರ್ಕ ಸುಲಭವಾಯ್ತು. ‘ಶ್ರೀ ರಾಮಾಂಜನೇಯ ಯುದ್ಧ’ (1963) ಚಿತ್ರದಲ್ಲಿ ಬಾಲನಟಿಯಾಗಿ ಚಂದ್ರಕಲಾ ಬೆಳ್ಳಿತೆರೆಗೆ ಪರಿಚಯವಾದರು. ಮುಂದಿನದ್ದು ‘ಜೀವನ ತರಂಗ’ದಲ್ಲಿ ನಟ ರಾಜಕುಮಾರ್ ಅವರ ತಂಗಿಯ ಪಾತ್ರ. ಇದಾದ ಮೇಲೆ ಬೇರೆ ನಿರ್ಮಾಪಕರ ಒಂದೆರೆಡು ಚಿತ್ರಗಳಲ್ಲಿ ನಟಿಸಿದ ಅವರು ತಂದೆ ನಿರ್ಮಿಸಿದ ‘ಒಂದೇ ಬಳ್ಳಿಯ ಹೂಗಳು’ ಚಿತ್ರದಲ್ಲಿ ನಾಯಕಿಯಾದರು. ಚಿತ್ರ ಶತದಿನೋತ್ಸವ ಆಚರಿಸಿತು.

‘ಪಾರ್ವತಿ ಕಲ್ಯಾಣ’ ಚಿತ್ರದಲ್ಲಿ ರಾಜಕುಮಾರ್ ಅವರೊಂದಿಗೆ ಚಂದ್ರಕಲಾ (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಮುಂದೆ ರಾಜಕುಮಾರ್ ಅವರ ‘ಮಾರ್ಗದರ್ಶಿ’ ಚಿತ್ರದಲ್ಲಿ ಅವಕಾಶ ಸಿಕ್ಕಿತು. ನಂತರ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ಎನ್‌ಟಿಆರ್‌, ನಾಗೇಶ್ವರರಾವ್‌, ಕೃಷ್ಣ, ಶೋಬನ್ ಬಾಬು, ಎಂಜಿಆರ್‌, ಶಿವಾಜಿ ಗಣೇಶನ್ ಮುಂತಾದ ಪ್ರಮುಖ ನಾಯಕನಟರಿಗೆ ಜೋಡಿಯಾಗಿ ನಟಿಸಿದ್ದು ವಿಶೇಷ. ‘ಆಡಪಡಚು’, ‘ಸಂಪೂರ್ಣ ರಾಮಾಯಣಂ’ ಇವರ ಪ್ರಮುಖ ತೆಲುಗು ಸಿನಿಮಾಗಳು. ಜೇನುಗೂಡು, ಬೇಡಿಬಂದವಳು, ಮನೆ ಬೆಳಕು, ಮಗ ಮೊಮ್ಮಗ, ಸುಬ್ಬಾಶಾಸ್ತ್ರಿ, ಪಾರ್ವತಿ ಕಲ್ಯಾಣ, ಬೀದಿ ಬಸವಣ್ಣ, ರೌಡಿ ರಂಗಣ್ಣ, ಒಂದೇ ರೂಪ ಎರಡು ಗುಣ, ಸುಳಿ… ಅವರ ಪ್ರಮುಖ ಕನ್ನಡ ಚಿತ್ರಗಳು. ನಾಯಕಿಯಾಗಿ ಬೇಡಿಕೆ ಇದ್ದಾಗಲೇ ದುಬೈ ಮೂಲದ ವಾಣಿಜ್ಯೋದ್ಯಮಿಯನ್ನು ಮದುವೆಯಾದರು ಚಂದ್ರಕಲಾ. ಕೆಲ ವರ್ಷಗಳ ನಂತರ ಭಾರತಕ್ಕೆ ಹಿಂತಿರುಗಿ ಮದರಾಸಿನಲ್ಲಿ ನೆಲೆಸಿದ್ದ ಅವರು ಕ್ಯಾನ್ಸರ್‌ನಿಂದಾಗಿ 50ನೇ ವಯಸ್ಸಿನಲ್ಲಿ 1999, ಜೂನ್‌ 22ರಂದು ಅಗಲಿದರು.

ಚಂದ್ರಕಲಾ | ಜನನ: 25/12/1949 | ನಿಧನ: 22/06/1999

ನೆನಪು ಸಾಧನೆ - ಸ್ಫೂರ್ತಿ

ಅಪರೂಪದ ಸಾಧಕ ವೀರಾಸ್ವಾಮಿ

ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ `ಡ್ರೀಮ್‍ಲ್ಯಾಂಡ್’ ಸಿನಿಮಾ ಹಂಚಿಕೆ ಕಚೇರಿ ನಡೆಸುತ್ತಿದ್ದರು. ಅವರಲ್ಲಿ

ಮಹಾನಟಿ ಮನೋರಮ

‘ಮಾಳಯಿಟ್ಟ ಮಂಗೈ’ (1958) ತಮಿಳು ಚಿತ್ರದೊಂದಿಗೆ ಮನೋರಮ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. 1985ರಲ್ಲಿ

ಜನಪ್ರಿಯ ಪೋಸ್ಟ್ ಗಳು

ಹಾಡೋ ಸುಸ್ವರಗಳ ಸಂಗೀತ

ಸಂಗೀತ ಸಂಯೋಜಕರಾದ ರಾಜನ್‌ – ನಾಗೇಂದ್ರ ಕನ್ನಡದ 218 ಚಿತ್ರಗಳೂ ಸೇರಿದಂತೆ ಸುಮಾರು 450 ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಇಂದು

ಚಿ.ಸದಾಶಿವಯ್ಯ

ಚಿಟ್ನಹಳ್ಳಿ ಸದಾಶಿವಯ್ಯನವರು ಕನ್ನಡ ಚಿತ್ರಸಾಹಿತ್ಯ ಕ್ಷೇತ್ರದಲ್ಲಿ ಚಿ.ಸದಾಶಿವಯ್ಯ ಎಂದೇ ಗುರುತಿಸಿಕೊಂಡಿದ್ದಾರೆ. ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್‍ನಲ್ಲಿ ಶಿಕ್ಷಕರಾಗಿದ್ದ ಅವರಿಗೆ ಸಿನಿಮಾ ಬಗ್ಗೆ

ಕನ್ನಡಕ್ಕೊಬ್ಬರೇ ಬಾಲಣ್ಣ

ಬಾಲಣ್ಣ ತೀರಿಹೋಗಿ 26 ವರ್ಷ ಆಗಿದ್ದರೂ ಅವರಿಗೆ ಅವರ ಪಾತ್ರಗಳಿಗೆ ಸರಿಸಾಟಿ ಯಾರಿದ್ದಾರೆ? ಬಾಲಣ್ಣನವರಿಗೆ ಸರಿಸಾಟಿಯಾಗಿ ನಿಲ್ಲುವವರು ಬಾಲಣ್ಣನವರು ಮಾತ್ರ.

ಸಿನಿಮಾ – ಕ್ಯಾಸೆಟ್ ಲೋಕದಲ್ಲಿ ಮಿಂಚಿದ ಧೀರೇಂದ್ರ ಗೋಪಾಲ್

ಕನ್ನಡ ಚಿತ್ರರಂಗ ಕಂಡ ವಿಶಿಷ್ಟ ಕಲಾವಿದ ಧೀರೇಂದ್ರ ಗೋಪಾಲ್ ಹುಟ್ಟೂರು ಹಾಸನಜಿಲ್ಲೆ ಹೊಳೆನರಸೀಪುರ ತಾಲೂಕಿನ ಜೋಡಿಗುಬ್ಬಿ. ಚಿಕ್ಕಂದಿನಿಂದಲೇ ಏಕಪಾತ್ರಾಭಿನಯ, ಹಾಡು,