
ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ
ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ ದಿನಗಳಲ್ಲಿ ವಿಕ್ರಂ ಸ್ಟುಡಿಯೋ ಸ್ಥಾಪಿಸಿ, ಕನ್ನಡ ಚಿತ್ರಗಳ ನಿರ್ಮಾಣ, ನಿರ್ದೇಶನದೊಂದಿಗೆ ತಾಯ್ನೆಲದಲ್ಲಿ ಚಿತ್ರರಂಗ ನೆಲೆಯೂರುವಲ್ಲಿ ನೆರವಾದ ತಂತ್ರಜ್ಞರಲ್ಲೊಬ್ಬರು. ಕಾಲೇಜು ದಿನಗಳಲ್ಲೇ