ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮೊದಲ ಸಾಮಾಜಿಕ ಚಿತ್ರದ ಹರಿಕಾರ ಎಚ್.ಎಲ್.ಎನ್.ಸಿಂಹ

ಪೋಸ್ಟ್ ಶೇರ್ ಮಾಡಿ
ಪ್ರಗತಿ ಅಶ್ವತ್ಥ ನಾರಾಯಣ
ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ

ಕನ್ನಡ ಚಿತ್ರವೊಂದನ್ನು ನಿರ್ದೇಶನ ಮಾಡಿದ ಮೊದಲ ಕನ್ನಡಿಗ ಎಚ್‌.ಎಲ್‌.ಎನ್‌.ಸಿಂಹ. ‘ಸಂಸಾರ ನೌಕ’ 1936ರಲ್ಲಿ ಬಿಡುಗಡೆಯಾದ ಮೊದಲ ಸಾಮಾಜಿಕ ಚಿತ್ರ. ಇದಕ್ಕೂ ಮೊದಲು ಬಿಡುಗಡೆಯಾದ 3 ಕನ್ನಡ ಚಿತ್ರಗಳನ್ನು ಕನ್ನಡೇತರ ನಿರ್ದೇಶಕರು ನಿರ್ದೇಶಿಸಿದ್ದರು.

ಎಚ್.ಎಲ್.ಎನ್.ಸಿಂಹ ಅವರ ಪೂರ್ಣ ಹೆಸರು ಎಚ್.ಲಕ್ಷ್ಮೀನರಸಿಂಹ. ತಂದೆಯ ಊರು ನಂಜನಗೂಡು. ಜನಿಸಿದ್ದು ಜನಿಸಿದ್ದು ಮಳವಳ್ಳಿ ಸಮೀಪದ ಮಾರೇಹಳ್ಳಿಯಲ್ಲಿ. ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ `ಡೆಸ್ಟಿನಿ ರೂಲ್ಸ್ ಹ್ಯೂಮ್ಯಾನಿಟಿ’ ಇಂಗ್ಲಿಷ್ ನಾಟಕದೊಂದಿಗೆ ನಟ, ನಿರ್ದೇಶಕರಾಗಿ ರಂಗಪ್ರವೇಶ ಮಾಡಿದರು. ಭಾರತ ಜನಮನೋಲ್ಲಾಸಿನಿ ನಾಟಕ ಸಂಸ್ಥೆ ಮೂಲಕ ರಂಗಭೂಮಿ ಪ್ರವೇಶಿಸಿ ಗುಬ್ಬಿ ಕಂಪನಿ, ಮಹಮದ್ ಪೀರ್‍ರವರ ಚಂದ್ರಕಲಾ ನಾಟಕ ಮಂಡಲಿ ಸೇರಿದರು. ಪೀರ್ ಕಂಪನಿಗಾಗಿ ಅವರು ರಚಿಸಿದ್ದ `ಸಂಸಾರ ನೌಕ’ ಸಾಮಾಜಿಕ ನಾಟಕ ದೊಡ್ಡ ಯಶಸ್ಸು ಕಂಡಿತು. ಮುಂದೆ ತಮ್ಮದೇ `ಸಿಂಹಾಸ್ ಸೆಲೆಕ್ಟ್ ಆರ್ಟಿಸ್ಟ್ಸ್’ ನಾಟಕ ಸಂಸ್ಥೆ ಹುಟ್ಟುಹಾಕಿದರು. ಗುಬ್ಬಿ ವೀರಣ್ಣನವರು ನಿರ್ದೇಶಿಸಿದ `ಹಿಸ್ ಲವ್ ಅಫೇರ್’ ಮೂಕಿಚಿತ್ರದಲ್ಲಿ ಸಿಂಹ ಅಭಿನಯಿಸಿದ್ದಲ್ಲದೆ ಈ ಚಿತ್ರದ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದರು.

`ಸಂಸಾರ ನೌಕ’ (1936) ಚಿತ್ರದ ನಿರ್ದೇಶನದೊಂದಿಗೆ ಸಿಂಹ ಬೆಳ್ಳಿತೆರೆ ಪ್ರವೇಶಿಸಿದರು. ಕನ್ನಡ ಚಿತ್ರವೊಂದನ್ನು ನಿರ್ದೇಶನ ಮಾಡಿದ ಮೊದಲ ಕನ್ನಡಿಗ. ‘ಸಂಸಾರ ನೌಕ’ 1936ರಲ್ಲಿ ಬಿಡುಗಡೆಯಾದ ಮೊದಲ ಸಾಮಾಜಿಕ ಚಿತ್ರ. ಇದಕ್ಕೂ ಮೊದಲು ಬಿಡುಗಡೆಯಾದ 3 ಕನ್ನಡ ಚಿತ್ರಗಳನ್ನು ಕನ್ನಡೇತರ ನಿರ್ದೇಶಕರು ನಿರ್ದೇಶನ ಮಾಡಿದ್ದರು. ಸಿಂಹ ನಿರ್ದೇಶನದ `ಬೇಡರ ಕಣ್ಣಪ್ಪ’ (1954) ಚಿತ್ರದೊಂದಿಗೆ ಮುತ್ತುರಾಜು, `ರಾಜಕುಮಾರ್’ ಹೆಸರಿನೊಂದಿಗೆ ನಾಯಕನಟನಾಗಿ ಪರಿಚಯವಾದರು. ಡಾ.ರಾಜ್ ಮುಂದೆ ಮೇರು ತಾರೆಯಾಗಿ ಬೆಳಗಿದ್ದು ಇತಿಹಾಸ. ಈ ಚಿತ್ರದ ತೆಲುಗು ಅವತರಣಿಕೆ ‘ಕಾಳಹಸ್ತಿ ಮಹಾತ್ಮ್ಯಂ’ (1955) ಚಿತ್ರವನ್ನೂ ಸಿಂಹ ಅವರೇ ನಿರ್ದೇಶಿಸಿದರು. ವರನಟ ಡಾ.ರಾಜಕುಮಾರ್ ಅಭಿನಯಿಸಿದ ಏಕೈಕ ಪರಭಾಷಾ ಚಿತ್ರವಿದು.

`ಗುಣಸಾಗರಿ’, `ಅಬ್ಬಾ ಆ ಹುಡುಗಿ’, ನಟಿ ಪಂಢರೀಬಾಯಿ ನಿರ್ಮಾಣದ `ತೇಜಸ್ವಿನಿ’ ಅವರು ನಿರ್ದೇಶಿಸಿದ ಇತರೆ ಸಿನಿಮಾಗಳು. ನಿರ್ದೇಶನದ ಜತೆ ಚಿತ್ರಸಾಹಿತಿಯಾಗಿಯೂ ಸಿಂಹ ಕನ್ನಡ ಚಿತ್ರರಂಗಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ. ಹಲವಾರು ಯಶಸ್ವೀ ನಾಟಕ, ಚಿತ್ರಗೀತೆಗಳನ್ನು ರಚಿಸಿರುವ ಸಿಂಹ ಅವರು ಪ್ರತಿಭಾವಂತ ಸಾಹಿತಿಯೂ ಆಗಿದ್ದರು. ಸಿಂಹರವರು ನಿರ್ದೇಶನ ಮಾಡಿದ್ದು ಆರು ಚಿತ್ರಗಳನ್ನು ಮಾತ್ರ. ಆದರೆ ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಮರೆಯಲು ಸಾದ್ಯವಿಲ್ಲ. 1972ರಂದು ತಮ್ಮ 68ನೇ ವಯಸ್ಸಿನಲ್ಲಿ ಅವರು ನಮ್ಮನ್ನಗಲಿದರು.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ನೆಲದ ಸೊಗಡಿನ ನಿರ್ದೇಶಕ

ಕನ್ನಡ ಚಿತ್ರರಂಗ ಕಂಡ ಪ್ರಮುಖ ಚಿತ್ರಸಾಹಿತಿ ಮತ್ತು ಅಪ್ಪಟ ನೆಲದ ಸೊಗಡಿನ ನಿರ್ದೇಶಕ ಗೀತಪ್ರಿಯ. ನೂರಾರು ಮಧುರ ಗೀತೆಗಳ ಕತೃ.