ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ನಜೀರ್

ಕಲಾನಿರ್ದೇಶಕ
ಪೋಸ್ಟ್ ಶೇರ್ ಮಾಡಿ

ಶಿರಸಿ ಮೂಲದ ನಜೀರ್ ಕಲಿತದ್ದು ಚಿತ್ರಕಲೆ. ನಂತರ ಮದರಾಸಿನ ಫಿಲ್ಮ್ ಸೆಂಟರ್ ಸ್ಟುಡಿಯೋದಲ್ಲಿ ಕೆಲಸ ಮಾಡಿದರು. ಇವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರು ನಿರ್ದೇಶಕ ಸಿದ್ದಲಿಂಗಯ್ಯ ಮತ್ತು ನಿರ್ಮಾಪಕ ಆರ್.ಲಕ್ಷ್ಮಣ್‌. ಸಿದ್ದಲಿಂಗಯ್ಯ ನಿರ್ದೇಶನದ `ದೂರದ ಬೆಟ್ಟ’ ಚಿತ್ರದ ಕಲಾನಿರ್ದೇಶಕರಾಗಿ ನಜೀರ್ ಚಿತ್ರರಂಗ ಪ್ರವೇಶಿಸಿದರು. `ಬೂತಯ್ಯನ ಮಗ ಅಯ್ಯು’ ಸಿನಿಮಾದ ಅದ್ಭುತ ಕ್ಲೈಮ್ಯಾಕ್ಸ್ ರೂಪುಗೊಳ್ಳುವಲ್ಲಿ ನಜೀರ್ ಕೈಚಳಕವೂ ಇದೆ. `ಬಂಗಾರದ ಪಂಜರ’, `ಜೀವನ ಚಕ್ರ’, `ಬಂಧನ’, `ರಣಧೀರ’, `ಹೇಮಾವತಿ’, `ಜೀವನ ಚೈತ್ರ’ ಇವರ ಕಲಾ ನಿರ್ದೇಶನದ ಪ್ರಮುಖ ಸಿನಿಮಾಗಳು. `ಸಿಪಾಯಿ’ ಚಿತ್ರದಲ್ಲಿನ ಅತ್ಯುತ್ತಮ ಕಲಾ ನಿರ್ದೇಶನಕ್ಕಾಗಿ ನಜೀರ್ ರಾಜ್ಯ ಪ್ರಶಸ್ತಿ (1995-96) ಪಡೆದಿದ್ದರು. ಕನ್ನಡ ಚಿತ್ರರಂಗದ ಮತ್ತೊಬ್ಬ ಪ್ರಮುಖ ಕಲಾನಿರ್ದೇಶಕ ಇಸ್ಮಾಯಿಲ್ ಅವರೊಂದಿಗೆ ನಜೀರ್ ಈ ಪ್ರಶಸ್ತಿ ಹಂಚಿಕೊಂಡಿದ್ದರು.

ಸಿದ್ದಲಿಂಗಯ್ಯ ನಿರ್ದೇಶನದ `ಬಿಳಿಗಿರಿಯ ಬನದಲ್ಲಿ’ (1980) ಚಿತ್ರಕ್ಕಾಗಿ ಕಲಾ ನಿರ್ದೇಶಕ ನಜೀರ್ ವಿನ್ಯಾಸಗೊಳಿಸಿದ್ದ ಗೆಸ್ಟ್ ಹೌಸ್ ಸೆಟ್ ಇದು. ಜೋಗ್ ಫಾಲ್ಸ್ ಸಮೀಪ ರಸ್ತೆಯ ತಿರುವೊಂದರಲ್ಲಿ ಈ ಸುಂದರ ಸೆಟ್ ಹಾಕಲಾಗಿತ್ತು.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಮೀನಾ ಕುಮಾರಿ

ಹಣೆಯ ಮೇಲೆ ಮುಂಗುರುಳು, ಒಡಲಾಳದ ನೋವನ್ನು ಹೊರಹಾಕುವಂಥ ದನಿ.. ದುರಂತ ನಾಯಕಿಯ ಚಿತ್ರಣದ ಇಮೇಜ್‍ಗೆ ಮೀನಾಕುಮಾರಿ ಒಗ್ಗಿಹೋಗಿದ್ದರು. ಹಿಂದಿ ಚಿತ್ರರಂಗದ

ಅಪ್ಪಟ ಸಿನಿಮಾ ತಂತ್ರಜ್ಞ ಬಾಲು ಮಹೇಂದ್ರ

ಮಹೇಂದ್ರರ ಪಾತ್ರ ಸೃಷ್ಟಿ, ಕಥಾ ಸಂವಿಧಾನ, ಪಾತ್ರಗಳಿಗೆ ಕಲಾವಿದರ ಆಯ್ಕೆಯಲ್ಲಿ ತೋರಿಸುತ್ತಿದ್ದ ಸೂಕ್ಷ್ಮತೆ, ಕಥೆಯನ್ನು ’ಹೇಳು’ತ್ತಿದ್ದ ರೀತಿ, ಇಳಯರಾಜಾರನ್ನು ಬಳಸಿಕೊಂಡ

ಅಪ್ಪಟ ತಂತ್ರಜ್ಞ ಪುಟ್ಟಣ್ಣ

ದಕ್ಷಿಣ ಭಾರತದ ಇತರೆ ಚಿತ್ರರಂಗಗಳು ಮಾತ್ರವಲ್ಲ ಬಾಲಿವುಡ್‌ನವರೂ ಕನ್ನಡ ಸಿನಿಮಾದತ್ತ ಹೊರಳಿ ನೋಡುವಂಥ ಚಿತ್ರಗಳನ್ನು ರೂಪಿಸಿದವರು ಪುಟ್ಟಣ್ಣ ಕಣಗಾಲ್. ಅವರು

Exit mobile version