ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಜಾಗತಿಕ ಸಿನಿಮಾರಂಗ ಪ್ರಭಾವಿಸಿದ ನಿರ್ದೇಶಕ ಬರ್ಗ್‌ಮನ್‌

ಪೋಸ್ಟ್ ಶೇರ್ ಮಾಡಿ
ಜಿ.ಎಸ್‌.ಭಾಸ್ಕರ್‌
ಛಾಯಾಗ್ರಾಹಕ

’ಮೆಟಾಫಿಸಿಕಲ್‌ ಪ್ರಶ್ನೆಗಳು ಇಂಗ್ಮರ್‌ ಬರ್ಗ್‌ಮನ್ ಸಿನಿಮಾಗಳ ಹಾಲ್‌ಮಾರ್ಕ್‌’ ಎಂದು ಗುರುತಿಸುತ್ತಾರೆ ಕನ್ನಡದ ಹಿರಿಯ ಛಾಯಾಗ್ರಾಹಕ ಜಿ.ಎಸ್.ಭಾಸ್ಕರ್‌. ಇಂದು (ಜುಲೈ 14) ಬರ್ಗ್‌ಮನ್‌ ಜನ್ಮದಿನ. ಛಾಯಾಗ್ರಾಹಕ ಭಾಸ್ಕರ್ ಮೇರು ನಿರ್ದೇಶಕನನ್ನು ಸ್ಮರಿಸಿದ್ದಾರೆ.

ಅರವತ್ತರ ದಶಕದಲ್ಲಿ ಜಾಗತಿಕ ಸಿನಿಮಾ ಜಗತ್ತನ್ನು ಪ್ರಭಾವಿಸಿದ ಪ್ರಮುಖ ನಿರ್ದೇಶಕ ಇಂಗ್ಮರ್‌ ಬರ್ಗ್‌ಮನ್‌. ಪಾದ್ರಿಯ ಮಗನಾದ ಬರ್ಗ್‌ಮನ್‌ಗೆ ಕ್ರಿಶ್ಚಿಯಾನಿಟಿಯ ಅತೀವ ಪ್ರಭಾವವಿತ್ತು. ದಟ್ಟ ರಂಗಭೂಮಿ ಹಿನ್ನೆಲೆಯ ವ್ಯಕ್ತಿ. ಈ ಎರಡು ಸಂಗತಿಗಳ ಹಿನ್ನೆಲೆಯಲ್ಲಿ ಬರ್ಗ್‌ಮನ್‌ರ ಥಿಂಕಿಂಗ್, ಪ್ರೆಸೆಂಟೇಷನ್‌ ಮತ್ತು ಕಮ್ಯುನಿಕೇಷನ್‌ ರೂಪುಗೊಂಡಿತು. ಸಿನಿಮಾದೆಡೆಗಿನ ಬರ್ಗ್‌ಮನ್‌ ಪ್ಯಾಸಿನೇಷನ್‌ ಶುರುವಾಗೋದು ಮ್ಯಾಜಿಕ್‌ ಲ್ಯಾಂಟರ್ನ್‌ ಪ್ರೊಜೆಕ್ಟರ್‌ನಿಂದ (‘ಮ್ಯಾಜಿಕ್ ಲ್ಯಾಂಟರ್ನ್’‌ ಅವರ ಆತ್ಮಕತೆಯ ಶೀರ್ಷಿಕೆಯೂ ಹೌದು). ಅಲ್ಲಿ ಶುರುವಾದ ನಿರ್ದೇಶನದ ಆಸಕ್ತಿ ರಂಗಭೂಮಿಯಲ್ಲಿ ಮುಂದುವರಿಯುತ್ತದೆ. ಮುಂದೆ ರಂಗಭೂಮಿಯಲ್ಲಿನ ಪ್ರಯೋಗಗಳನ್ನು ಬರ್ಗ್‌ಮನ್‌ ಸಿನಿಮಾಗಳಲ್ಲಿ ಪ್ರಸೆಂಟ್ ಮಾಡುತ್ತಾ ಹೋಗುತ್ತಾರೆ. ಮೆಟಾಫಿಸಿಕಲ್‌ ಪ್ರಶ್ನೆಗಳು ಬರ್ಗ್‌ಮನ್‌ರ ಹಾಲ್‌ಮಾರ್ಕ್‌. ನಾವು ಆಧ್ಯಾತ್ಮ ಅಂತೇನು ಕರೆಯುತ್ತೇವೆಯೋ, ಅದಕ್ಕೆ ಬರ್ಗ್‌ಮನ್‌ ಉಪದೇಶದ ಚೌಕಟ್ಟು ಕೊಡಲಿಲ್ಲ. ಬದಲಿಗೆ ಅದನ್ನು ನಾವು ಪ್ರಾಕ್ಟಿಕಲ್‌ ಆಗಿ ಬದುಕಿನಲ್ಲಿ ಅಳವಡಿಸಿಕೊಂಡಾಗ ಯಾವ ರೀತಿ ದೃಷ್ಟಿಕೋನಗಳು ಸಿಗುತ್ತವೆ ಅನ್ನೋದನ್ನು ಸಿನಿಮಾಗಳಲ್ಲಿ ನಿರೂಪಿಸುತ್ತಾ ಹೋದರು.

‘ವೈಲ್ಡ್ ಸ್ಟ್ರಾಬೆರೀಸ್‌’

ಮಹತ್ವದ ಯೂರೋಪಿಯನ್‌ ಸಿನಿಮಾಗಳ ಸಂದರ್ಭದಲ್ಲಿ ಬರ್ಗ್‌ಮನ್‌ರ ‘ವೈಲ್ಡ್‌ ಸ್ಟ್ರಾಬೆರೀಸ್‌’ ಅತ್ಯಂತ ಪ್ರಮುಖ ಸಿನಿಮಾ. ಅವರ ‘ದಿ ಸೈಲನ್ಸ್‌’, ದಿ ಸೆವೆಂಥ್‌ ಸೀಲ್‌’, ‘ಸಮ್ಮರ್ ವಿಥ್‌ ಮೋನಿಕಾ’, ‘ಫ್ಯಾನಿ ಅಂಡ್‌ ಅಲೆಕ್ಸಾಂಡರ್‌’ ಚಿತ್ರಗಳು ಬಹುಮುಖ್ಯವಾಗುತ್ತವೆ. ‘ವೈಲ್ಡ್‌ ಸ್ಟ್ರಾಬೆರೀಸ್‌’ನಲ್ಲಿ 78 ವರ್ಷದ ವೈದ್ಯನೊಬ್ಬನ ಮೂಲಕ ನಿರ್ದೇಶಕರು ಹಲವು ಪ್ರತಿಮೆಗಳನ್ನು ಕಟ್ಟಿಕೊಡುತ್ತಾರೆ. ವೈದ್ಯ ಇಸಾಕ್‌ ಬೋರ್ಗ್‌‌ಗೆ ಇಳಿವಯಸ್ಸಿನಲ್ಲೊಂದು ಪ್ರಮುಖ ಪ್ರಶಸ್ತಿ ಘೋಷಣೆಯಾಗುತ್ತದೆ. ಅದನ್ನು ಪಡೆಯಲು ತೆರಳುವ ಆತನ ಜರ್ನೀ ಚಿತ್ರದ ಕಥಾವಸ್ತು. ಮುಂಜಾನೆ ಎದ್ದಾಗ ಆತನಿಗೊಂದು ಕನಸು ಬೀಳುತ್ತದೆ. ಆತ ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ ಎದುರಿಗೆ ಕುದುರೆ ಗಾಡಿಯೊಂದು ಬರುತ್ತದೆ. ಅಡ್ಡಾದಿಡ್ಡಿಯಾಗಿ ಬರುವ ಕುದುರೆ ಗಾಡಿ ಕಂಬಕ್ಕೆ ಢಿಕ್ಕಿಯಾಗಿ ಅದರಲ್ಲಿದ್ದ ಕಾಫಿನ್‌ ಕೆಳಗೆ ಬೀಳುತ್ತದೆ. ಇಸಾಕ್‌ ಅತ್ತ ತೆರಳಿ ಕಾಫಿನ್‌ ಮುಚ್ಚುಳ ತೆಗೆದು ನೋಡಿದಾಗ, ಅದರಲ್ಲಿ ಇವನೇ ಇರುತ್ತಾನೆ. ಈ ಥರದ ಒಂದು ಇಮೇಜನ್ನು ಮೊದಲ ಬಾರಿಗೆ ಸಿನಿಮಾಗೆ ತೆಗೆದುಕೊಂಡುಬಂದಿದ್ದು ಬರ್ಗ್‌ಮನ್‌.

‘ವಿಂಟರ್ ಲೈಟ್‌’

ಜರ್ನೀ ಸಾಗುತ್ತಿದ್ದಂತೆ ಇಸಾಕ್‌ನ ಸಹಾಯಕಿಯೊಬ್ಬಳು, “ಆರ್‌ ಯು ನಾಟ್‌ ವೆಲ್‌ ಟುಡೇ?” ಎಂದು ಪ್ರಶ್ನಿಸುತ್ತಾಳೆ. ಇಸಾಕ್‌ ಕಸಿವಿಸಿಗೊಳ್ಳುತ್ತಾನೆ. ಇಂಥ ಸನ್ನಿವೇಶಗಳು ಸಾಮಾನ್ಯವಾಗಿ ಎಲ್ಲರಿಗೂ ಎದುರಾಗುತ್ತವೆ. ನಮ್ಮ ಆತ್ಮಸಾಕ್ಷಿ ನಮ್ಮನ್ನು ಕಾಡಿದಾಗ ನಮಗೆ ಕಸಿವಿಸಿಯಾಗುವುದು ಸಹಜ. ಸಮಾಜದೆದುರು ಮುಖವಾಡ ಹಾಕಿಕೊಂಡು ಜೀವಿಸುವ ನಮಗೆ ಆತ್ಮಸಾಕ್ಷಿ ಕಾಡತೊಡಗಿದಾಗ ತುಂಬಾ ಕಷ್ಟವಾಗುತ್ತದೆ. ಮುಂದೆ ಜರ್ನೀಯಲ್ಲಿ ಇಸಾಕ್‌ ಗಾಡಿಗೆ ಇಬ್ಬರು ಪುಟ್ಟ ಮಕ್ಕಳು ಹತ್ತುತ್ತಾರೆ. ಇವು ಲೈವ್ಲೀ, ಬಬ್ಲೀ ಕ್ಯಾರಕ್ಟರ್ಸ್‌. ಈ ಮಧ್ಯೆ ಸೊಸೆ, ಮಗನನ್ನು ಇಸಾಕ್‌ ನಡೆಸಿಕೊಂಡ ರೀತಿ ಸಿನಿಮಾದಲ್ಲಿ ಬಿಡಿಸಿಕೊಳ್ಳುತ್ತದೆ. ತಾಯಿಯನ್ನು ಭೇಟಿ ಮಾಡಲು ಹೋಗುವ ಇಸಾಕ್‌ ತಾನು ಬೆಳೆದ ಚಿಕ್ಕ ಮನೆಯ ಕಿಟಕಿಯೊಳಗೆ ನೋಡುತ್ತಾನೆ. ಅದರಲ್ಲಿ ಅವನ ಬಾಲ್ಯ ಅನಾವರಣಗೊಳ್ಳುತ್ತದೆ. ಇದನ್ನು ನಾವು ಸಾಮಾನ್ಯವಾಗಿ ಸಾಹಿತ್ಯದಲ್ಲಿ ಓದಿದ್ದೇವೆ. ಅದನ್ನು ಮೊದಲ ಬಾರಿಗೆ ಸಿನಿಮಾದಲ್ಲಿ ಸಾಕಾರಗೊಳಿಸಿದ್ದು ಬರ್ಗ್‌ಮನ್‌. ಇಂತಹ ಹಲವು ಪ್ರತಿಮೆಗಳಿಂದಾಗಿ ‘ವೈಲ್ಡ್‌ ಸ್ಟ್ರಾಬೆರೀಸ್‌’ ಜಾಗತಿಕ ಸಿನಿಮಾ ನೆಲೆಯಲ್ಲಿ ಪ್ರಮುಖ ಚಿತ್ರವಾಗಿ ಉಳಿದಿದೆ.

‘ಪರ್ಸೋನಾ’

ಬರ್ಗ್‌ಮನ್‌ರ ಸಿನಿಮಾಗಳಲ್ಲಿನ ಮೆಟಾಫಿಸಿಕಲ್ ಟ್ರೆಂಡ್‌ ಹಲವು ನಿರ್ದೇಶಕರಿಗೆ ಮಾದರಿಯಾಗುತ್ತದೆ. ರಂಗಭೂಮಿಯ ಕತೆಗಳನ್ನು ಆತ ವಿಶಿಷ್ಟವಾಗಿ ಸಿನಿಮಾಗೆ ಅಳವಡಿಸುತ್ತಾರೆ. ಅದೇ ರೀತಿ ‘ವಿಂಟರ್‌ ಲೈಟ್‌’ ಸಿನಿಮಾದಲ್ಲೊಂದು ಅಪರೂಪದ ಕತೆಯಿದೆ. ಸಂಕಷ್ಟಕ್ಕೀಡಾದ ರೈತನೊಬ್ಬನಿಗೆ ಪಾದ್ರಿ ಸಾಂತ್ವನ ಹೇಳುವ ಪ್ರಯತ್ನ ನಡೆಸುತ್ತಾನೆ. ರೈತನ ನಂಬಿಕೆಗಳನ್ನು ಪಾದ್ರಿ ಒಡೆಯಲು ಸಾಧ್ಯವೇ ಆಗುವುದಿಲ್ಲ. ಪಾದ್ರಿಯ ಸಾಂತ್ವನ ಉಪದೇಶದ ಲೆವೆಲ್‌ನಲ್ಲೇ ಉಳಿದುಹೋಗುತ್ತದೆ. ಕೊನೆಗೆ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಬರ್ಗ್‌ಮನ್‌ರ ‘ಪರ್ಸೋನಾ’ ಮತ್ತೊಂದು ಮೇಜರ್‌ ಸಿನಿಮಾ. ಅಲ್ಲಿ ನಿರ್ದೇಶಕ ವ್ಯಕ್ತಿಯ ಮನಸಿನ ವ್ಯಾಪಾರದ ಬಗ್ಗೆ ಚರ್ಚಿಸುತ್ತಾರೆ. ಅಲ್ಲಿ ಬರೋದು ಎರಡೇ ಪಾತ್ರಗಳು. ಇವುಗಳ ಪೈಕಿ ಒಂದು ಪಾತ್ರ ಮಾತೇ ಆಡೋಲ್ಲ. ಈ ಸಿನಿಮಾದಲ್ಲಿ ಬರ್ಗ್‌ಮನ್‌ ಹೇಳುವ ಸೆಲ್ಫ್‌ ಅನಾಲಿಸಿಸ್‌ ತುಂಬಾ ಪ್ರಭಾವಶಾಲಿಯಾಗಿದೆ. ಹೀಗೆ, ತಮ್ಮ ಹತ್ತಾರು ಸಿನಿಮಾಗಳ ಮೂಲಕ ಸಿನಿಮಾ ವಿದ್ಯಾರ್ಥಿಗಳಿಗೆ, ಸಿನಿಪ್ರೇಮಿಗಳಿಗೆ ಇಂಗ್ಮರ್‌ ಬರ್ಗ್‌ಮನ್ (1918, ಜುಲೈ14 -‌ 2007, ಜುಲೈ 30) ಮಾದರಿಯಾಗುತ್ತಾರೆ.

ಬರ್ಗ್‌ಮನ್‌

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಭಕ್ತವತ್ಸಲಂ

ಆತ್ಮೀಯರಿಂದ ‘ಭಕ್ತ’ ಎಂದೇ ಕರೆಸಿಕೊಳ್ಳುತ್ತಿದ್ದ ಭಕ್ತವತ್ಸಲಂ ಅವರದ್ದು ವ್ಯಾಕರಣಬದ್ಧ ಸಂಕಲನ. ಸಿನಿಮಾದ ಛಾಯಾಗ್ರಹಣ, ನಿರ್ದೇಶನದಲ್ಲಿ ತಪ್ಪುಗಳಾಗಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಅವರು ಸಂಬಂಧಿಸಿದವರನ್ನು