ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ರಂಗಭೂಮಿ, ಸಿನಿಮಾ ನಟ ಡಿಕ್ಕಿ ಮಾದವರಾವ್

ಪೋಸ್ಟ್ ಶೇರ್ ಮಾಡಿ

‘ಸಂಸಾರನೌಕ’ ವೃತ್ತಿರಂಗಭೂಮಿಯಲ್ಲಿ ದೊಡ್ಡ ಯಶಸ್ಸು ಕಂಡ ಮೊದಲ ಸಾಮಾಜಿಕ ನಾಟಕ. ಇದು ಚಲನಚಿತ್ರವಾಗಿಯೂ ಯಶಸ್ಸು ಕಂಡಿತು. ಇದರಲ್ಲಿ ಡಿಕ್ಕಿ ಪಾತ್ರದಲ್ಲಿ ನಟಿಸಿದ್ದ ಮಾಧವರಾವ್‌ ಮುಂದೆ ‘ಡಿಕ್ಕಿ ಮಾಧವರಾವ್‌’ ಎಂದೇ ಹೆಸರಾದರು. ಮೂಲತಃ ಮೈಸೂರಿನ ಮಾಧವರಾವ್‌ ಶಾಲೆಯಲ್ಲಿ ಓದುತ್ತಿದ್ದಾಗಲೇ ನಾಟಕಗಳಲ್ಲಿ ಪಾತ್ರಗಳನ್ನು ಮಾಡುತ್ತಿದ್ದರು. ಶಾಲೆಯ ವಾರ್ಷಿಕೋತ್ಸವದಲ್ಲಿ ರಂಗಕರ್ಮಿ ವರದಾಚಾರ್ಯರು ಇವರನ್ನು ಗುರುತಿಸಿ ತಮ್ಮ ‘ರತ್ನಾವಳಿ’ ತಂಡದಲ್ಲಿ ನಟಿಸುವ ಅವಕಾಶ ಕಲ್ಪಿಸಿದರು. ಅಲ್ಲಿಗೆ ಮಾಧವರಾವ್‌ ಓದು ಕೊನೆಗೊಂಡಿತು.

ಮುಂದೆ ಶ್ರೀ ಚಾಮುಂಡೇಶ್ವರಿ ನಾಟಕ ಸಭಾ, ಗುಬ್ಬಿ ಕಂಪನಿ, ಪೀರ್‌ರವರ ಚಂದ್ರಕಲಾ ಸಂಸ್ಥೆಗಳಲ್ಲಿ ಮಾಧವರಾವ್‌ ಪಾತ್ರಗಳನ್ನು ಮಾಡುತ್ತಾ ಬೆಳೆದರು. ಹತ್ತಾರು ನಾಟಕಗಳ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುತ್ತಾ ಬಂದ ಅವರಿಗೆ ‘ಸಂಸಾರನೌಕ’ ಸಿನಿಮಾ ಬೆಳ್ಳಿತೆರೆಯ ಬಾಗಿಲು ತೆರೆಯಿತು. ಪಂತುಲು ಅವರಿಗೆ ಅತ್ಯಂತ ಆತ್ಮೀಯರಾಗಿದ್ದ ಮಾಧವರಾವ್‌ ಅವರು ಪಂತುಲು ಅವರ ‘ಪದ್ಮಿನಿ ಪಿಕ್ಚರ್ಸ್‌’ ಸಂಸ್ಥೆಯ ಬಹುತೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಮಧ್ಯೆ ಸ್ವಂತ ನಾಟಕ ಕಂಪನಿ ಕಟ್ಟಿ ಕೆಲವರ್ಷ ನಡೆಸಿದರು.

‘ಸಂಸಾರನೌಕ’ ಚಿತ್ರಕ್ಕೆ ಸಂಗೀತ ನೀಡಿರುವುದು ಡಿಕ್ಕಿ ಮಾಧವರಾವ್ ಎನ್ನುವ ವಿಷಯ ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. ‘ಮೊದಲ ತೇದಿ’ ಚಿತ್ರದ ಜನಪ್ರಿಯ ಗೀತೆ ‘ತೇದಿ ಒಂದರಿಂದ 21ರವರೆಗೂ’ ಹಾಡಿರುವುದು ಇವರೇ. ರಾಧಾರಮಣ, ವಾಣಿ, ಕೃಷ್ಣಲೀಲಾ, ಶಿವಪಾರ್ವತಿ, ಮೊದಲ ತೇದಿ, ಪಂಚರತ್ನ, ಶ್ರೀಶೈಲ ಮಹಾತ್ಮೆ, ರತ್ನಗಿರಿ ರಹಸ್ಯ, ಸ್ಕೂಲ್ ಮಾಸ್ಟರ್‌ ಸೇರಿದಂತೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಡಿಕ್ಕಿ ಮಾಧವರಾವ್‌ ಅಭಿನಯಿಸಿದ್ದಾರೆ.

ಡಿಕ್ಕಿ ಮಾಧವರಾವ್‌ | ಜನನ: 15/01/1919 | ನಿಧನ: 14/07/1985

(ಮಾಹಿತಿ ಕೃಪೆ: ರುಕ್ಕೋಜಿ ಅವರ ‘ಡಾ.ರಾಜಕುಮಾರ್‌ ಸಮಗ್ರ ಚರಿತ್ರೆ’ ಕೃತಿ) (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಚಿತ್ರಸಾಹಿತಿ ಗೋಪಾಲ ವಾಜಪೇಯಿ

ಕವಿ, ಪತ್ರಕರ್ತ, ನಾಟಕಕಾರ ಗೋಪಾಲ ವಾಜಪೇಯಿ (01/06/1951 – 20/09/2016) ಚಿತ್ರಸಾಹಿತ್ಯಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಇಂದು (ಸೆಪ್ಟೆಂಬರ್‌ 20)

ಹಾಸ್ಯನಟ ರತ್ನಾಕರ್ ಚಿತ್ರನಿರ್ದೇಶಕರೂ ಹೌದು

ಕನ್ನಡ ಚಿತ್ರರಂಗ ಕಂಡ ಪ್ರಮುಖ ಹಾಸ್ಯಕಲಾವಿದರಲ್ಲೊಬ್ಬರು ರತ್ನಾಕರ್. ಅವರು ಜನಿಸಿದ್ದು ಕೊಲ್ಲೂರಿನಲ್ಲಿ. ಓದಿದ್ದು ನಾಲ್ಕನೇ ತರಗತಿಯಷ್ಟೆ. ಕಾರಣಾಂತರಗಳಿಂದ ಚಿಕ್ಕಂದಿನಲ್ಲೇ ಅವರು

ಕಂಚಿನಕಂಠದ ನಟ ಅರಸ್

ಕನ್ನಡ ಚಿತ್ರರಂಗದ ಕಂಚಿನಕಂಠದ ನಟ ಸುಂದರ ಕೃಷ್ಣ ಅರಸ್. ಚಾಮರಾಜನಗರ ಸಮೀಪದ ಉತ್ತವಳ್ಳಿ ಹುಟ್ಟೂರು. ಯಳಂದೂರಿನಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿದ