ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕೆ.ಎಸ್.ಅಶ್ವಥ್

ನಟ
ಪೋಸ್ಟ್ ಶೇರ್ ಮಾಡಿ

ಕರಗನಹಳ್ಳಿ ಸುಬ್ಬರಾಯ ಅಶ್ವಥ ನಾರಾಯಣ ಅವರು ಸಿನಿಮಾರಂಗದಲ್ಲಿ ಕೆ ಎಸ್ ಅಶ್ವಥ್‌ಎಂದೇ ಹೆಸರಾಗಿದ್ದಾರೆ. ಆರಂಭದಲ್ಲಿ ಆಕಾಶವಾಣಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದ ಅವರು ಸಮಾನಮನಸ್ಕರು ಕಟ್ಟಿದ ‘ಹವ್ಯಾಸಿ ಕಲಾವಿದರು’ ತಂಡದ ಸಕ್ರಿಯ ಸದಸ್ಯರಾಗಿದ್ದರು. ‘ಸ್ತ್ರೀರತ್ನ’ (1955) ಚಿತ್ರದ ನಾಯಕನಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಅವರಿಗೆ ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳುವುದು ಸುಗಮವೇನೂ ಆಗಿರಲಿಲ್ಲ. ನಟನೆಯನ್ನು ನಂಬಿ ಫುಡ್‌ ಇನ್ಸ್‌ಪೆಕ್ಟರ್‌ ಸರ್ಕಾರಿ ಕೆಲಸ ಬಿಟ್ಟಿದ್ದ ಅಶ್ವಥ್‌ ಜೀವನೋಪಾಯಕ್ಕಾಗಿ ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ನಾಟಕಗಳಲ್ಲಿ ಅಭಿನಯಿಸಿದರು.

ಕ್ರಮೇಣ ಸಿನಿಮಾಗಳಲ್ಲಿ ಅವಕಾಶ ಪಡೆಯುತ್ತಾ ಹೋದ ಅವರು ಪ್ರಮುಖ ಪೋಷಕ ನಟನಾಗಿ ಗುರುತಿಸಿಕೊಂಡರು. ಸಾಮಾಜಿಕ, ಕೌಟುಂಬಿಕ, ಪೌರಾಣಿಕ ಭಕ್ತಿ ಪ್ರಧಾನ ಎಲ್ಲಾ ಮಾದರಿಯ ಮುನ್ನೂರಕ್ಕೂ ಹೆಚ್ಚು ಸಿನಿಮಾಗಳ ವೈವಿಧ್ಯಮಯ ಪಾತ್ರಗಳಲ್ಲಿ ಅಶ್ವಥ್ ಅಭಿನಯಿಸಿದ್ದಾರೆ. ‘ನಮ್ಮ ಮಕ್ಕಳು’, ‘ನಾಗರಹಾವು’, ‘ಮುತ್ತಿನ ಹಾರ’ ಸಿನಿಮಾಗಳ ಉತ್ತಮ ನಟನೆಗೆ ಅತ್ಯುತ್ತಮ ಪೋಷಕ ನಟ ರಾಜ್ಯಪ್ರಶಸ್ತಿ ಪಡೆದಿದ್ದಾರೆ. ಮಧ್ಯಮ ವರ್ಗದ ತಂದೆಯ ಪಾತ್ರಗಳಲ್ಲಿನ ಅವರ ಸಹಜಾಭಿನಯಕ್ಕೆ ಮನಸೋಲದವರಿಲ್ಲ. .ರಾಜಕುಮಾರ್ ಅವರೊಂದಿಗೆ 94 ಚಿತ್ರಗಳಲ್ಲಿ ನಟಿಸಿರುವುದು ವಿಶೇಷ.

ಕೆ.ಎಸ್.ಅಶ್ವಥ್‌ | ಜನನ: 25/03/1925 | ನಿಧನ: 18/01/2010

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಕನ್ನಡ ಚಿತ್ರರಂಗದ ಕಲ್ಪವೃಕ್ಷ ಕು.ರ.ಸೀತಾರಾಮ ಶಾಸ್ತ್ರಿ

(ಬರಹ: ಎನ್.ಎಸ್.ಶ್ರೀಧರ ಮೂರ್ತಿ) ಕನ್ನಡ ಚಿತ್ರರಂಗಕ್ಕೆ ಬಹುಮುಖೀ ಕೊಡುಗೆಯನ್ನು ನೀಡಿದ ಕು.ರ.ಸೀತಾರಾಮ ಶಾಸ್ತ್ರಿಗಳ ಪೂರ್ವಿಕರದ್ದು ತಲೆತಲಾಂತರಗಳಿಂದ ವೇದ ವೇದಾಂತಗಳನ್ನು ಅಧ್ಯಯನ

ಚಿತ್ರನಿರ್ಮಾಣಕ್ಕೆ ಸ್ಥಿರತೆ ತಂದುಕೊಟ್ಟವರು ಪಾರ್ವತಮ್ಮ ರಾಜಕುಮಾರ್

ಚಿತ್ರನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅಗಲಿ ಇಂದಿಗೆ (ಮೇ 31) ನಾಲ್ಕು ವರ್ಷ. ಸದಭಿರುಚಿಯ ಚಿತ್ರಗಳ ನಿರ್ಮಾಣದೊಂದಿಗೆ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ,

ಮುಸುರಿ ಕೃಷ್ಣಮೂರ್ತಿ

ಮುಸುರಿ ಕೃಷ್ಣಮೂರ್ತಿ ಅವರ ತಂದೆ-ತಾಯಿ ಇಬ್ಬರೂ ಸಂಗೀತ ಪ್ರೇಮಿಗಳು. ಮನೆಯಲ್ಲಿ ಸಂಗೀತ ವಾತಾವರಣ ಇದ್ದುದರಿಂದ ಬಾಲ್ಯದಲ್ಲೇ ಕೃಷ್ಣಮೂರ್ತಿ ಅವರಿಗೆ ಹಾಡುಗಾರಿಕೆ