ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದರು ಅಲ್ಲಾ ರಖಾ

Share this post

ಖ್ಯಾತ ಹಿಂದೂಸ್ತಾನಿ ಸಂಗೀತಗಾರ, ತಬಲಾ ವಾದಕ ಅಲ್ಲಾ ರಖಾ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿರುವ ವಿಷಯ ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. 1943ರಿಂದ 1958ರ ಅವಧಿಯಲ್ಲಿ ಹಿಂದಿ ಮತ್ತು ಪಂಜಾಬಿ ಭಾಷೆಯ 25ಕ್ಕೂ ಹೆಚ್ಚು ಚಿತ್ರಗಳಿಗೆ ಅವರು ಸಂಗೀತ ಸಂಯೋಜಿಸಿದ್ದಾರೆ. ಯಾದ್ಗಾರ್, ಆಂಧಿಯಾನ್‌, ಹಮ್‌ಸಫರ್‌, ಹತೀಮ್ತಾಯ್‌ ಕಿ ಭೇಟಿ, ಲೈಲಾ, ಖಾಂದಾನ್‌, ಬೇವಫಾ… ಅಲ್ಲಾ ರಖಾ ಸಂಗೀತ ಸಂಯೋಜನೆಯ ಕೆಲವು ಪ್ರಮುಖ ಹಿಂದಿ ಚಿತ್ರಗಳು.

ಅಲ್ಲಾ ರಖಾ ಅವರ ಸಮಕಾಲೀನ ಸಂಗೀತ ದಿಗ್ಗಜರನೇಕರು ಕೂಡ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಉಸ್ತಾದ್ ಅಲಿ ಅಕ್ಬರ್ ಖಾನ್‌, ಪಂಡಿತ್ ರವಿಶಂಕರ್‌, ಉಸ್ತಾದ್ ವಿಲಾಯತ್ ಖಾನ್‌, ಶಿವ್‌ಹರಿ, ಕಿಶೋರಿ ಅಮೋನ್‌ಕರ್‌ ಇವರೆಲ್ಲರ ಹೆಸರು ಸಿನಿಮಾ ಸಂಗೀತದಲ್ಲಿ ಕೇಳಿಬರುತ್ತದೆ. ಆದರೆ ಇವರೆಲ್ಲರ ಪೈಕಿ ಸಿನಿಮಾ ಸಂಗೀತದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದು ಪಂಡಿತ್‌ ರವಿಶಂಕರ್ ಮತ್ತು ಉಸ್ತಾದ್ ವಿಲಾಯತ್ ಖಾನ್‌ ಅವರು.

ಅಲ್ಲಾ ರಖಾ ಅವರು ಸಂಗೀತ ಸಂಯೋಜನೆ ಮಾತ್ರವಲ್ಲದೆ ನಟ ಪೃಥ್ವಿರಾಜ್ ಕಪೂರ್ ಸಿನಿಮಾಗಳಿಗೆ ಗಾಯಕರೂ ಹೌದು. ಉಸ್ತಾದ್ ಅಲಿ ಅಕ್ಬರ್ ಖಾನ್‌ ಸಂಗೀತ ಸಂಯೋಜನೆಯ ‘ದಿ ಹೌಸ್ ಹೋಲ್ಡರ್‌’, ‘ದೇವಿ’, ‘ಕ್ಷುದಿತೊ ಪಶಾನ್‌’ ಚಿತ್ರಗಳಿಗೆ ತಬಲಾ ನುಡಿಸಿದ್ದಾರೆ. ಸಂಗೀತ ಸಂಯೋಜಕರಾದ ಆರ್‌.ಡಿ.ಬರ್ಮನ್ ಮತ್ತು ಜೈದೇವ್ ಅವರಿಗೆ ಗುರುವೂ ಹೌದು. ಆದರೆ ಅಲ್ಲಾ ರಖಾ ಅವರ ಸಂಯೋಜನೆಯ ಬಹುಪಾಲು ಗೀತೆಗಳು ನಾಶವಾಗಿವೆ. ಹಾಗಾಗಿ ಅಲ್ಲಾ ರಖಾ ಸಿನಿಮಾ ಸಂಗೀತದ ಬಗ್ಗೆ ಹೆಚ್ಚು ಪ್ರಸ್ತಾಪವಾಗುವುದಿಲ್ಲ.

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ಬೇಡರ ಕಣ್ಣಪ್ಪ

`ಬೇಡರ ಕಣ್ಣಪ್ಪ’ (1954) ಚಿತ್ರದೊಂದಿಗೆ ರಾಜಕುಮಾರ್‌ ನಾಯಕನಟರಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದು ಗೊತ್ತಿರುವಂಥದ್ದೆ. ಈ

'ಅಪ್ಪು ಕಪ್ ಸೀಸನ್ 4'ಗೆ ಚಾಲನೆ

‘ಅಪ್ಪು ಕಪ್ ಸೀಸನ್ 4’ಗೆ ಚಾಲನೆ

ಅಪ್ಪು ಕಪ್‌ ಸೀಸನ್‌ 4 ಬ್ಯಾಡ್ಮಿಂಟನ್‌ ಟೂರ್ನಿಗೆ ಚಾಲನೆ ಸಿಕ್ಕಿದೆ. ಪಂದ್ಯಾವಳಿಯ ಪೂರ್ವಭಾವಿಯಾಗಿ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಇದೇ ಜುಲೈ 24,

ಹಾಲಿವುಡ್ ಚಿತ್ರೋತ್ಸವಕ್ಕೆ 'ಮಹಾಕವಿ'

ಹಾಲಿವುಡ್ ಚಿತ್ರೋತ್ಸವಕ್ಕೆ ‘ಮಹಾಕವಿ’

ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಮಹಾಕವಿ’ ಸಿನಿಮಾ ಹಾಲಿವುಡ್‌ ಗೋಲ್ಡ್ನ್‌ ಏಜ್‌ ಅಂತರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಪ್ರವೇಶ ಪಡೆದಿದೆ. ಬಹುಭಾಷಾ