ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಹಿಂದಿ ಸಿನಿಮಾರಂಗದ ಮೊದಲ ಸೂಪರ್‌ಸ್ಟಾರ್ ಸೈಗಲ್

ಪೋಸ್ಟ್ ಶೇರ್ ಮಾಡಿ

ಕುಂದನ್ ಲಾಲ್ ಸೈಗಲ್ ಹಿಂದಿ ಸಿನಿಮಾ ಜಗತ್ತಿನಲ್ಲಿ ಕೆ.ಎಲ್.ಸೈಗಲ್ ಎಂದೇ ಹೆಸರಾಗಿದ್ದಾರೆ. ಹಿಂದಿ ಸಿನಿಮಾ ಕೊಲ್ಕೊತ್ತಾದಲ್ಲಿ ನೆಲೆ ನಿಂತಿದ್ದ ಮೂವತ್ತರ ದಶಕದಲ್ಲಿ ಸೈಗಲ್ ಸ್ಟಾರ್ ಹೀರೋ ಮತ್ತು ಗಾಯಕ ಎಂದು ಕರೆಸಿಕೊಂಡಿದ್ದರು. ‘ಕೊಲ್ಕತ್ತಾ ನ್ಯೂ ಥಿಯೇಟರ್ಸ್’ಮಾಲೀಕ ಬಿ.ಎನ್. ಸರ್ಕಾರ್ ಅವರು ಮೂವತ್ತರ ದಶಕದ ಆರಂಭದಲ್ಲಿ ಸೈಗಲ್‌ರನ್ನು ಗಾಯಕ, ನಟನಾಗಿ ಪರಿಚಯಿಸಿದರು. ‘ಮೊಹಬ್ಬತ್ ಕೆ ಆನ್ಸೂ’ ನಟನಾಗಿ ಅವರ ಚೊಚ್ಚಲ ಸಿನಿಮಾ.

‘ಯಹೂದಿ ಕಿ ಲಡ್ಕೀ’ (1933) ಚಿತ್ರದ ಯಶಸ್ಸಿನೊಂದಿಗೆ ಸೈಗಲ್ ಹಿಂದಿ ಚಿತ್ರರಂಗದ ಜನಪ್ರಿಯ ನಟ, ಗಾಯಕನಾದರು. ಪಿ.ಸಿ.ಬರುವಾ ನಿರ್ದೇಶನದಲ್ಲಿ ಸೈಗಲ್ ನಟಿಸಿದ ‘ದೇವದಾಸ್‌’ ಹಿಂದಿ ಸಿನಿಮಾ ದೊಡ್ಡ ಯಶಸ್ಸು ಕಂಡಿತು. ಪ್ರೆಸಿಡೆಂಟ್‌, ಧರ್ತಿ ಮಾತಾ, ಸ್ಟ್ರೀಟ್‌ ಸಿಂಗರ್‌, ದುಶ್ಮನ್, ಜೀವನ್ ಮರಣ್‌, ಜಿಂದಗಿ… ಅವರ ಕೆಲವು ಪ್ರಮುಖ ಚಿತ್ರಗಳು. ‘ಶೆಹನ್ಶಾ ಎ ಮ್ಯೂಸಿಕಿ’, ‘ಸಂಗೀತ್ ಸಾಮ್ರಾಟ್’ಎಂದು ಕರೆಸಿಕೊಂಡಿದ್ದ ಸೈಗಲ್ ಹದಿನೈದು ವರ್ಷಗಳ ವೃತ್ತಿ ಬದುಕಿನಲ್ಲಿ 35ಕ್ಕೂ ಹೆಚ್ಚು ಹಿಂದಿ, ಬೆಂಗಾಲಿ ಚಿತ್ರಗಳಲ್ಲಿ ನಟಿಸಿದ್ದು, 180ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ.

ಕೆ.ಎಲ್‌.ಸೈಗಲ್‌ | ಜನನ: 11/04/1904 | ನಿಧನ: 18/01/1947

‘ಪ್ರೆಸಿಡೆಂಟ್‌’ ಹಿಂದಿ ಚಿತ್ರದಲ್ಲಿ ಸೈಗಲ್‌

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಅಕಾಲಿಕವಾಗಿ ಅಗಲಿದ ನಟ ರಂಗಾ

ಬೆಂಗಳೂರು ಮೂಲದ ರಂಗಾ ಎಸ್ಸೆಸ್ಸೆಲ್ಸಿ ಓದಿದ ನಂತರ ಸರ್ಕಾರದ ಹೌಸಿಂಗ್‌ ಬೋರ್ಡ್‌ನಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದರು. ಆಗಿನ್ನೂ ಅವರಿಗೆ 19