ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

‘ಲಾರೆಲ್ & ಹಾರ್ಡಿ’ ನೆನಪಿಸುವ ಗೋಪ್

ಹಿಂದಿ ಹಾಸ್ಯನಟ
ಪೋಸ್ಟ್ ಶೇರ್ ಮಾಡಿ

ಹೈದರಾಬಾದ್ ಮೂಲದ ಗೋಪ್‌ 40, 50ರ ದಶಕಗಳ ಜನಪ್ರಿಯ ಹಿಂದಿ ಹಾಸ್ಯನಟ. ಹಿಂದಿ ಚಿತ್ರರಂಗದ ಮತ್ತೊಬ್ಬ ಹಾಸ್ಯನಟ ಯಾಕುಬ್ ಮತ್ತು ಗೋಪ್‌ ಹಾಸ್ಯಜೋಡಿ ಹಿಂದಿ ಚಿತ್ರಗಳಲ್ಲಿ ಹೆಸರು ಮಾಡಿತ್ತು. ಈ ಜೋಡಿ ಹಿಂದಿ ಚಿತ್ರರಸಿಕರಿಗೆ ಹಾಲಿವುಡ್‌ನ ‘ಲಾರೆಲ್‌ ಮತ್ತು ಹಾರ್ಡಿ’ ಕಾಮಿಡಿ ಜೋಡಿಯನ್ನು ನೆನಪಿಸುತ್ತಿತ್ತು. ಮೋತಿ ಗಿದ್ವಾನಿ ನಿರ್ದೇಶನದ ‘ಇನ್ಸಾನ್‌ ಯಾ ಶೈತಾನ್‌’ (1933) ಚಿತ್ರದ ಪುಟ್ಟ ಪಾತ್ರದೊಂದಿಗೆ ಅವರು ಬೆಳ್ಳಿತೆರೆಗೆ ಪರಿಚಯವಾದರು. ಮುಂದೆ ಹಾಸ್ಯನಟನಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿತ್ತು.

‘ಚೋರಿ ಚೋರಿ’ ಚಿತ್ರದಲ್ಲಿ ನರ್ಗಿಸ್ ಜೊತೆ ಗೋಪ್‌

ಪತಂಗ, ಬಜಾರ್, ಬೇಕಸೂರ್‌, ಸಗಾಯ್‌.. ಮುಂತಾದ ಚಿತ್ರಗಳಲ್ಲಿ ಗೋಪ್‌ ಮತ್ತು ಯಾಕುಬ್ ಜೋಡಿ ಹಾಸ್ಯದ ಸನ್ನಿವೇಶಗಳಿಂದ ಖ್ಯಾತಿ ಪಡೆದಿತ್ತು. ಹಿಂದೂಸ್ತಾನ್ ಹಮಾರಾ, ಚೋರಿ ಚೋರಿ… ಚಿತ್ರಗಳಲ್ಲಿ ಗೋಪ್‌ ಪಾತ್ರಗಳಿಗೆ ಹೆಚ್ಚಿನ ಮನ್ನಣೆಯಿದೆ. ಕೆಲವು ಚಿತ್ರಗಳಲ್ಲಿ ಅವರು ಖಳಛಾಯೆಯಲ್ಲೂ ಕಾಣಿಸಿಕೊಂಡಿದ್ದಾರೆ. ದಿಲೀಪ್ ಕುಮಾರ್ – ಮಧುಬಾಲಾ ಜೋಡಿಯ ‘ತಾರಾನಾ’ದಲ್ಲಿ ಅವರ ಕಾಮಿಡಿ ವಿಲನ್‌ ಪಾತ್ರವನ್ನು ಪ್ರೇಕ್ಷಕರು ಮೆಚ್ಚಿದ್ದರು. ‘ಗೋಪ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಡಿ ಸಿನಿಮಾಗಳನ್ನು ನಿರ್ಮಿಸಿದ ಅವರು ನಟಿ ಲತಿಕಾ ಅವರನ್ನು ವರಿಸಿದ್ದರು. ಇಪ್ಪತ್ನಾಲ್ಕು ವರ್ಷಗಳ ವೃತ್ತಿಬದುಕಿನಲ್ಲಿ ಗೋಪ್‌ 140ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಗೋಪ್‌ | ಜನನ: 11/04/1913 | ನಿಧನ: 1957

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಕನ್ನಡ ಚಿತ್ರರಂಗದ ಕಲ್ಪವೃಕ್ಷ ಕು.ರ.ಸೀತಾರಾಮ ಶಾಸ್ತ್ರಿ

(ಬರಹ: ಎನ್.ಎಸ್.ಶ್ರೀಧರ ಮೂರ್ತಿ) ಕನ್ನಡ ಚಿತ್ರರಂಗಕ್ಕೆ ಬಹುಮುಖೀ ಕೊಡುಗೆಯನ್ನು ನೀಡಿದ ಕು.ರ.ಸೀತಾರಾಮ ಶಾಸ್ತ್ರಿಗಳ ಪೂರ್ವಿಕರದ್ದು ತಲೆತಲಾಂತರಗಳಿಂದ ವೇದ ವೇದಾಂತಗಳನ್ನು ಅಧ್ಯಯನ

ಮೆಥೆಡ್ ಆಕ್ಟರ್ ಎಸ್‌ವಿಆರ್

ಪಾತ್ರಗಳ ಆಯ್ಕೆಯಲ್ಲಿ ಎಸ್‌ವಿಆರ್‌ ಅವರದ್ದು ವೃತ್ತಿ ಬದುಕಿನ ಆರಂಭದ ದಿನಗಳಿಂದಲೂ ಎಚ್ಚರಿಕೆಯ ನಡೆ. ಅವರಿಗೆ ನಾಯಕನಟನಾಗುವ ಸಾಕಷ್ಟು ಅವಕಾಶಗಳಿದ್ದವು. ಆದರೆ

ಸದಭಿರುಚಿಯ ಚಿತ್ರಗಳ ನಿರ್ದೇಶಕ ವಿ.ಸೋಮಶೇಖರ್

ದೇವನಹಳ್ಳಿ ತಾಲೂಕಿನ ಚಿಕ್ಕನಹಳ್ಳಿ ವಿ.ಸೋಮಶೇಖರ್‌ ಅವರ ಹುಟ್ಟೂರು. ಅನುಕೂಲಸ್ಥ ಕುಟುಂಬದಲ್ಲಿ ಜನಿಸಿದ ಅವರಿಗೆ ಶಾಲೆ ಓದುತ್ತಿದ್ದಾಗಲೇ ಸಿನಿಮಾದೆಡೆ ವ್ಯಾಮೋಹ ಶುರುವಾಗಿತ್ತು.