ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ರಂಗಭೂಮಿ – ಸಿನಿಮಾ ನಟಿ ಶಾಂತಮ್ಮ

ಪೋಸ್ಟ್ ಶೇರ್ ಮಾಡಿ

ಕನ್ನಡ ಚಿತ್ರರಂಗದ ಆರಂಭದ ದಿನಗಳು, ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದ ಕಲಾವಿದೆ ಶಾಂತಮ್ಮ. ಅವರ ಪತಿ ಬಿ.ಅನಿಲ್ ಕುಮಾರ್ ವೃತ್ತಿರಂಗಭೂಮಿ ನಟ ಮತ್ತು ನೃತ್ಯ ನಿರ್ದೇಶಕ. ಅನಿಲ್ ಕುಮಾರ್ ಅವರು ರಂಗನಟಿ ಬಿ.ಜಯಮ್ಮ ಅವರ ಸಹೋದರ. ಅನಿಲ್ ಕುಮಾರ್ ಅವರನ್ನು ವಿವಾಹವಾದ ನಂತರ ನಟನೆ ಆರಂಭಿಸಿದ ಶಾಂತಮ್ಮ ಆರಂಭದಲ್ಲಿ ಗೋಕಾಕ್ ಮತ್ತು ಗುಬ್ಬಿ ಕಂಪನಿಗಳ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ‘ಹರಿಭಕ್ತ’ (1956) ಅವರ ಚೊಚ್ಚಲ ಸಿನಿಮಾ. ವರನಟ ರಾಜಕುಮಾರ್ ಅವರಿಗೆ ಇದು ನಾಲ್ಕನೇ ಸಿನಿಮಾ. ‘ಹರಿಭಕ್ತ’ ಚಿತ್ರದೊಂದಿಗೆ ಆರಂಭವಾದ ಅವರ ಸಿನಿಮಾ ನಂಟು ಕೊನೆಯ ದಿನಗಳವರೆಗೂ ಜಾರಿಯಲ್ಲಿತ್ತು. ಕನ್ನಡ ಮತ್ತು ತಮಿಳಿನ ಕೆಲವು ಸಿನಿಮಾಗಳು ಸೇರಿದಂತೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಕಿರುತೆರೆ ಧಾರಾವಾಹಿಗಳಲ್ಲೂ ನಟಿಸಿರುವ ಅವರು ಕೆಲವು ಜಾಹೀರಾತುಗಳಲ್ಲೂ ಕಾಣಿಸಿಕೊಂಡಿರುವುದು ವಿಶೇಷ.

ರಾಜಕುಮಾರ್ ಅವರ ಬಹಳಷ್ಟು ಸಿನಿಮಾಗಳಲ್ಲಿ ಶಾಂತಮ್ಮ ಅಭಿನಯಿಸಿದ್ದು, ಅವರ ಕುಟುಂಬಕ್ಕೆ ನಿಕಟವರ್ತಿಯಾಗಿದ್ದವರು. ಕನ್ನಡ ಚಿತ್ರರಂಗ ಕಂಡ ಖ್ಯಾತನಾಮ ನಾಯಕನಟರಿಗೆ ತಾಯಿಯಾಗಿ ಕಾಣಿಸಿಕೊಂಡಿರುವ ಶಾಂತಮ್ಮ ಮೂರು ತಲೆಮಾರಿನ ಕಲಾವಿದರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಚಂದವಳ್ಳಿಯ ತೋಟ, ರಣಧೀರ ಕಂಠೀರವ, ಸನಾದಿ ಅಪ್ಪಣ್ಣ, ಕಾಮನಬಿಲ್ಲು, ಕೆರಳಿದ ಸಿಂಹ, ಹೊಸ ತೀರ್ಪು, ಲಾರಿ ಡ್ರೈವರ್, ಲವ್ ಮಾಡಿ ನೋಡು, ರಾಣಿ ಮಹಾರಾಣಿ, ಅಣ್ಣಯ್ಯ, ಮನೆದೇವ್ರು, ಜೈಲರ್ ಜಗನ್ನಾಥ್, ಬೇಡಕೃಷ್ಣ ರಂಗಿನಾಟ, ಶುಭಲಗ್ನ, ಸೌಭಾಗ್ಯ ದೇವತೆ, ಕೊಟ್ರೇಶಿ ಕನಸು, ಕೆಂಡದ ಮಳೆ, ಹುಡುಗ್ರು, ಅವರ ಕೆಲವು ಪ್ರಮುಖ ಸಿನಿಮಾಗಳು. ಶಾಂತಮ್ಮಅವರ ಪುತ್ರ ನಂದಕುಮಾರ್ ಮತ್ತು ಪುತ್ರಿ ಸುಮಾ ಬಾಲಕಲಾವಿದರಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಾ ಮುಂದೆ ಕನ್ನಡ, ತೆಲುಗು, ಮಲಯಾಳಂ ಚಿತ್ರಗಳ ಪ್ರಮುಖ ಪಾತ್ರಗಳಲ್ಲಿ ನಟಿಸಿದರು. ಮತ್ತೊಬ್ಬ ಮಗಳು ಸುನಂದಾ ಅವರು ಕೂಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ರಾಜ್ಯ ಸರ್ಕಾರ ಶಾಂತಮ್ಮ ಅವರಿಗೆ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಿದೆ.

(ಫೋಟೋ: ಪ್ರಗತಿ ಅಶ್ವತ್ಥ ನಾರಾಯಣ)

‘ಕೊಟ್ರೇಶಿ ಕನಸು’ ಚಿತ್ರದಲ್ಲಿ ಶಾಂತಮ್ಮ, ವಿಜಯ ರಾಘವೇಂದ್ರ

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಚಿತ್ರಸಾಹಿತಿ ಗೋಪಾಲ ವಾಜಪೇಯಿ

ಕವಿ, ಪತ್ರಕರ್ತ, ನಾಟಕಕಾರ ಗೋಪಾಲ ವಾಜಪೇಯಿ (01/06/1951 – 20/09/2016) ಚಿತ್ರಸಾಹಿತ್ಯಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಇಂದು (ಸೆಪ್ಟೆಂಬರ್‌ 20)

ಹಾಸ್ಯನಟ ರತ್ನಾಕರ್ ಚಿತ್ರನಿರ್ದೇಶಕರೂ ಹೌದು

ಕನ್ನಡ ಚಿತ್ರರಂಗ ಕಂಡ ಪ್ರಮುಖ ಹಾಸ್ಯಕಲಾವಿದರಲ್ಲೊಬ್ಬರು ರತ್ನಾಕರ್. ಅವರು ಜನಿಸಿದ್ದು ಕೊಲ್ಲೂರಿನಲ್ಲಿ. ಓದಿದ್ದು ನಾಲ್ಕನೇ ತರಗತಿಯಷ್ಟೆ. ಕಾರಣಾಂತರಗಳಿಂದ ಚಿಕ್ಕಂದಿನಲ್ಲೇ ಅವರು

ಕಂಚಿನಕಂಠದ ನಟ ಅರಸ್

ಕನ್ನಡ ಚಿತ್ರರಂಗದ ಕಂಚಿನಕಂಠದ ನಟ ಸುಂದರ ಕೃಷ್ಣ ಅರಸ್. ಚಾಮರಾಜನಗರ ಸಮೀಪದ ಉತ್ತವಳ್ಳಿ ಹುಟ್ಟೂರು. ಯಳಂದೂರಿನಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿದ