ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಹಾಡು ನಟಿ ಸುರಯ್ಯಾ

ಪೋಸ್ಟ್ ಶೇರ್ ಮಾಡಿ

ನಲವತ್ತು, ಐವತ್ತರ ದಶಕದ ಹಿಂದಿ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಸುರಯ್ಯಾ ಪ್ರಮುಖರು. ಸಿನಿಮಾಗಳಲ್ಲಿ ನಟಿಯರೇ ಹಾಡುತ್ತಿದ್ದ ದಿನಗಳವು. ಗಾಯಕಿ – ನಾಯಕಿಯಾಗಿ ಸುರಯ್ಯಾ ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರು.  ಸುರಯ್ಯಾ ಅವರ ಪೂರ್ಣ ಹೆಸರು ಸುರಯ್ಯಾ ಜಮಾಲ್ ಶೇಖ್. ಹುಟ್ಟಿದ್ದು ಪಂಜಾಬ್‍ನ ಗುಜ್ರಾನ್‍ವಾಲಾದಲ್ಲಿ (ಇದೀಗ ಪಾಕಿಸ್ತಾನದಲ್ಲಿದೆ) 1929, ಜೂನ್ 5ರಂದು. ಏಕಮಾತ್ರ ಪುತ್ರಿಯಾದ ಸುರಯ್ಯಾ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದು ಮುಂಬೈನಲ್ಲಿ. ಇದೇ ಅವಧಿಯಲ್ಲಿ ಆಕೆ ಪರ್ಷಿಯನ್ ಭಾಷೆಯಲ್ಲಿ ಪರಿಣತಿ ಪಡೆದರು. ಸುರಯ್ಯಾ ಚಿತ್ರರಂಗಕ್ಕೆ ಬರಲು ಕಾರಣವಾಗಿದ್ದು ಆಕೆಯ ಚಿಕ್ಕಪ್ಪ ಜಹೂರ್. ಅವರು ಸಿನಿಮಾಗಳಲ್ಲಿ ಆಗ ಖಳಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು. `ಉಸ್ನೇ ಕ್ಯಾ ಸೋಚಾ’ (1937) ಚಿತ್ರದೊಂದಿಗೆ ಸುರಯ್ಯಾ ಬಾಲನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾದರು.

1937ರಿಂದ 1941ರ ಅವಧಿಯಲ್ಲಿ ಸುರಯ್ಯಾ ಕೆಲವು ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದರು. ಶಾಲಾ ರಜೆಯಲ್ಲಿ ಅದೊಂದು ದಿನ (1941) ಸುರಯ್ಯಾ ತನ್ನ ಚಿಕ್ಕಪ್ಪ ಜಹೂರ್ ಅವರೊಂದಿಗೆ ಮೋಹನ್ ಸ್ಟುಡಿಯೋಗೆ ಹೋಗಿದ್ದರು. ಅಲ್ಲಿ ಆಗ `ತಾಜ್‍ಮಹಲ್’ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಹನ್ನೆರೆಡರ ಹರೆಯದ ಸುರಯ್ಯಾ, ಚಿತ್ರದ ನಿರ್ದೇಶಕ ನಾನೂಭಾಯ್ ವಕೀಲ್ ಅವರ ಗಮನ ಸೆಳೆದಳು. ಅವರು ಸುರಯ್ಯಾಗೆ ತಮ್ಮ ಚಿತ್ರದಲ್ಲಿ ಚಿಕ್ಕವಯಸ್ಸಿನ ಮುಮ್ತಾಜ್ ಪಾತ್ರದಲ್ಲಿ ನಟಿಸುವ ಅವಕಾಶ ಮಾಡಿಕೊಟ್ಟರು. ಇದೇ ಸಮಯದಲ್ಲಿ ಸುರಯ್ಯಾ ರೇಡಿಯೋದಲ್ಲಿ ಮಕ್ಕಳ ಕಾರ್ಯಕ್ರಮವೊಂದಕ್ಕೆ ಹಾಡಿದ್ದರು. ಅದೃಷ್ಟವತಾಶ್ ಆಕೆಯ ಗಾಯನ ಸಂಗೀತ ಸಂಯೋಜಕ ನೌಷಾದ್ ಅವರ ಕಿವಿಗೆ ಬಿತ್ತು. ಅವರು ತಮ್ಮ `ಶಾರ್ದಾ’ (1942) ಚಿತ್ರದಲ್ಲಿ ಆಕೆಗೆ ಹಾಡುವ ಅವಕಾಶ ಕಲ್ಪಿಸಿದರು. ಹೀಗೆ ಏಕಕಾಲಕ್ಕೆ ಸುರಯ್ಯಾ ನಟನೆ, ಗಾಯನದಲ್ಲಿ ಉತ್ತಮ ಅವಕಾಶ ಪಡೆಯುವಂತಾಯಿತು.

‘ಮಿರ್ಝಾ ಗಾಲಿಬ್’ ಹಿಂದಿ ಚಿತ್ರದಲ್ಲಿ ಭರತ್ ಭೂಷಣ್, ಸುರಯ್ಯಾ

ಸುರಯ್ಯಾ ಆರಂಭದ ಕೆಲವು ಸಿನಿಮಾಗಳಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡರು. ಕೆ.ಆಸಿಫ್‍ರ `ಫೂಲ್’ (1944), ಮೆಹಬೂಬ್ ಖಾನ್‍ರ `ಅನ್ಮೋಲ್ ಘಡಿ’ (1946), `ದರ್ದ್’ (1947) ಕೆಲವು ಉದಾಹರಣೆ. `ತದ್ಬೀರ್’ (1945) ಚಿತ್ರದ ನಾಯಕಿಯ ಪಾತ್ರ ಅವರಿಗೆ ಹೆಸರು ತಂದುಕೊಟ್ಟಿತು. ಮುಂದೆ ಸೈಗಲ್ ಜತೆ ನಾಯಕಿಯಾಗಿ ಅವರು `ಒಮರ್ ಖಯ್ಯಾಂ’ (1946), `ಪರ್ವಾನಾ’ (1947) ಚಿತ್ರಗಳಲ್ಲಿ ಅಭಿನಯಿಸಿದರು. ಆಗ ಮುಂಚೂಣಿಯಲ್ಲಿದ್ದ ನಾಯಕಿಯರೆಂದರೆ ನೂರ್ ಜಹಾನ್ ಮತ್ತು ಖುರ್ಷಿದ್ ಬನೊ. 1947ರ ಭಾರತ ವಿಭಜನೆಯ ನಂತರ ಇವರಿಬ್ಬರೂ ಪಾಕಿಸ್ತಾನಕ್ಕೆ ವಲಸೆ ಹೋದರು. ತದನಂತರ ಸುರಯ್ಯಾಗೆ ಅವಕಾಶಗಳು ಹೆಚ್ಚಾದವು.

ಸುರಯ್ಯಾ ನಟಿಸುತ್ತಿದ್ದ ಅವಧಿಯಲ್ಲಿ ಕಾಮಿನಿ ಕೌಶಾಲ್ ಮತ್ತು ನರ್ಗಿಸ್ ಕೂಡ ನಾಯಕಿಯರಾಗಿ ಚಾಲ್ತಿಯಲ್ಲಿದ್ದರು. ಆದರೆ ಗಾಯಕಿಯೂ ಆಗಿದ್ದ ಸುರಯ್ಯಾಗೆ ಹೆಚ್ಚಿನ ಬೇಡಿಕೆಯಿತ್ತು. 1948-49ರ ಅವಧಿ, ಸುರಯ್ಯಾ ಸಿನಿಮಾ ಜೀವನದ ಅಮೃತ ಗಳಿಗೆ ಎಂದೇ ಹೇಳಬಹುದು. ಈ ದಿನಗಳಲ್ಲಿ ತೆರೆಕಂಡ ಸುರಯ್ಯಾ ಅವರ `ಪ್ಯಾರ್ ಕಿ ಜೀತ್’, `ಬಡಿ ಬಹೇನ್’ ಮತ್ತು `ದಿಲ್ಲಗಿ’ ಚಿತ್ರಗಳು ಭರ್ಜರಿ ಯಶಸ್ಸು ಕಂಡವು. ಆಗ ಅವರು ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯಾಗಿದ್ದರು. ಅವರ ಈ ಯಶಸ್ಸು ಅಲ್ಪಾವಧಿಯದ್ದಾಗಿತ್ತು. ಕೆಲವು ಸೋಲುಗಳ ನಂತರ ಮತ್ತೆ ವಾರಿಸ್, ಮಿರ್ಜಾ ಗಾಲಿಬ್ ಚಿತ್ರಗಳೊಂದಿಗೆ ಅವರು ಗೆಲುವಿನ ಹಾದಿಗೆ ಮರಳಿದರು. ಅವರ ಕೊನೆಯ ಸಿನಿಮಾ `ರುಸ್ತುಂ ಸೊಹ್ರಬ್’ 1963ರಲ್ಲಿ ತೆರೆಕಂಡಿತು.

‘ವಿದ್ಯಾ’ ಚಿತ್ರದಲ್ಲಿ ದೇವಾನಂದ್ ಜೊತೆ

ನಟ ದೇವಾನಂದ್ ಅವರೊಂದಿಗೆ ಸುರಯ್ಯಾ ಆರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಈ ಜೋಡಿಯ ವಿದ್ಯಾ, ಜೀತ್, ಶಾಯರ್, ಅಫ್ಸರ್, ನಿಲಿ, ದೋ ಸಿತಾರೇ ಸಿನಿಮಾಗಳು ಪ್ರೇಕ್ಷಕರ ಮನಸೂರೆಗೊಂಡರು. ಪರಸ್ಪರರನ್ನು ಮೆಚ್ಚಿದ್ದ ದೇವಾನಂದ್ – ಸುರಯ್ಯಾ ವಿವಾಹವಾಗಲು ನಿಶ್ಚಯಿಸಿದ್ದರು. ಇದಕ್ಕೆ ಸುರಯ್ಯಾರ ಅಜ್ಜಿಯ ಒಪ್ಪಿಗೆ ಸಿಗಲಿಲ್ಲ. ಸುರಯ್ಯಾ ಅವಿವಾಹಿತರಾಗಿಯೇ ಉಳಿದರು. ಐವತ್ತರ ದಶಕದಲ್ಲಿ ಸುರಯ್ಯಾ ಹಿಂದಿ ಚಿತ್ರಪ್ರೇಮಿಗಳ ಪಾಲಿಗೆ ದೇವತೆಯಾಗಿ ಗೋಚರಿಸಿದ್ದರು. ನಟ ಧರ್ಮೇಂದ್ರ ಸಂದರ್ಶನವೊಂದರಲ್ಲಿ ಸುರಯ್ಯಾರ `ದಿಲ್ಲಗಿ’ ಚಿತ್ರವನ್ನು ನಲವತ್ತು ಬಾರಿ ನೋಡಿದ್ದಾಗಿ ಹೇಳಿಕೊಂಡಿದ್ದರು! ಹಿಂದಿ ಚಿತ್ರರಂಗ ಎಂದೆಂದೂ ಮರೆಯಲಾಗದ ಸುರಯ್ಯಾ 2004, ಜನವರಿ 31ರಂದು ಇಹಲೋಕ ತ್ಯಜಿಸಿದರು.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಅಕಾಲಿಕವಾಗಿ ಅಗಲಿದ ನಟ ರಂಗಾ

ಬೆಂಗಳೂರು ಮೂಲದ ರಂಗಾ ಎಸ್ಸೆಸ್ಸೆಲ್ಸಿ ಓದಿದ ನಂತರ ಸರ್ಕಾರದ ಹೌಸಿಂಗ್‌ ಬೋರ್ಡ್‌ನಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದರು. ಆಗಿನ್ನೂ ಅವರಿಗೆ 19