ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಿರ್ದೇಶಕ ಹೊನ್ನವಳ್ಳಿ ಕೃಷ್ಣ

Share this post

ನಟ ಹೊನ್ನವಳ್ಳಿ ಕೃಷ್ಣ ಇಂದು (ಮೇ 21) ಎಪ್ಪತ್ತೊಂದನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರು ಸಿನಿಮಾರಂಗಕ್ಕೆ ಪರಿಚಯವಾಗಿದ್ದು ಸಹನಿರ್ದೇಶಕರಾಗಿ ಎನ್ನುವ ವಿಷಯ ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. 40ಕ್ಕೂ ಹೆಚ್ಚು ಚಿತ್ರಗಳಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ಹೊನ್ನವಳ್ಳಿ ಆರು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ.

ಹೊನ್ನವಳ್ಳಿಯ ಕೃಷ್ಣ ಅವರಿಗೆ ಚಿಕ್ಕಂದಿನಲ್ಲೇ ಸಿನಿಮಾ ವ್ಯಾಮೋಹ ಶುರುವಾಗಿತ್ತು. ತಿಂಗಳ ಬೆಳಕಿನಲ್ಲಿ ಅವರು ಸಿನಿಮಾ ಹಾಡು ಹೇಳುತ್ತಿದ್ದರೆ ಹಳ್ಳಿಯ ಮಕ್ಕಳು ಕುಣಿಯುತ್ತಿದ್ದರಂತೆ. ಊರಿನ ಹಿರಿಯರು ಸಿನಿಮಾ ಸೇರುವಂತೆ ತಮಾಷೆಗೆ ಹೇಳಿದ್ದರಷ್ಟೆ. ಇದರಿಂದ ಉತ್ತೇಜಿತರಾದ ಕೃಷ್ಣ ದುಡ್ಡು ಹೊಂದಿಸಿಕೊಂಡು ಮದರಾಸು ಸೇರಿದರು. ಅಲ್ಲಿ ರಾಜಕುಮಾರ್ ಕುಟುಂಬದ ಸಂಪರ್ಕ ಸಿಕ್ಕಿತು. ‘ಮಿಸ್ಟರ್‌ ರಾಜಕುಮಾರ್‌’ (1970) ಚಿತ್ರದ ಪುಟ್ಟ ಪಾತ್ರವೊಂದರ ಮೂಲಕ ಅವರು ಬೆಳ್ಳಿತೆರೆಗೆ ಪರಿಚಯವಾದರು. ಕೆಲಸದಲ್ಲಿನ ಶ್ರದ್ಧೆ, ಚುರುಕುತನ, ಉತ್ಸಾಹ

ಗಮನಿಸಿದ ನಿರ್ದೇಶಕ ಸಿದ್ದಲಿಂಗಯ್ಯನವರು ತಮ್ಮ `ನ್ಯಾಯವೇ ದೇವರು’ ಚಿತ್ರದಲ್ಲಿ ಅವರಿಗೆ ಸಹನಿರ್ದೇಶಕರಾಗಿ ಕೆಲಸ ನೀಡಿದರು. ಮುಂದೆ ಹೊನ್ನವಳ್ಳಿ ಕೃಷ್ಣ 40ಕ್ಕೂ ಹೆಚ್ಚು ಚಿತ್ರಗಳಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿದರು. ಇವುಗಳಲ್ಲಿ ಬಹುಪಾಲು ರಾಜಕುಮಾರ್ ಅಭಿನಯದ ಚಿತ್ರಗಳು ಎನ್ನುವುದು ವಿಶೇಷ. ಆದರೆ ಅವರಿಗೆ ಸಿನಿಮಾಗೆ ಸ್ವತಂತ್ರ ನಿರ್ದೇಶಕರಾಗಿ ಕೆಲಸ ಮಾಡುವ ಯೋಗ ಕೂಡಿಬರಲೇ ಇಲ್ಲ. ಹಿರಿತೆರೆಯಲ್ಲಿ ಸಾಧ್ಯವಾಗದಿದ್ದರೂ ಕಿರುತೆರೆಯಲ್ಲಿ ಅವರು ಆರು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಸವಿನೆನಪು, ಗೌಡ್ತಿ ಗೌರಮ್ಮ, ಗ್ರಾಮಸಿಂಹ, ನಮ್ಮೂರಲ್‌ ಒಂದ್‌ ನಾಟ್ಕ… ದೂರದರ್ಶನಕ್ಕೆ ಅವರು ನಿರ್ದೇಶಿಸಿದ ಧಾರಾವಾಹಿಗಳು. ನಿರ್ದೇಶನದಲ್ಲಿನ ಅನುಭವದ ಹಿನ್ನೆಲೆಯಲ್ಲಿ ಅವರು ‘ಹೊನ್ನವಳ್ಳಿ ಮಿತ್ರಮಂಡಳಿ’ ತಂಡ ಕಟ್ಟಿ ದಶಕಗಳ ಕಾಲ ನಡೆಸಲು ಸಾಧ್ಯವಾಯ್ತು.

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ