ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

`ನಾಗರಹಾವು’ ಮೇಕಿಂಗ್ ಸ್ಟಿಲ್

ಪೋಸ್ಟ್ ಶೇರ್ ಮಾಡಿ

ಪುಟ್ಟಣ್ಣ ಕಣಗಾಲ್‌ನವರ ಮಹೋನ್ನತ ಚಿತ್ರಗಳಲ್ಲೊಂದಾದ `ನಾಗರಹಾವು’ ಚಿತ್ರಕ್ಕೆ ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿಯೂ ಚಿತ್ರೀಕರಣ ನಡೆದಿತ್ತು. ಚಿತ್ರದಲ್ಲಿನ ಪ್ರಿನ್ಸಿಪಾಲ್ ಮನೆಯ ಸನ್ನಿವೇಶಗಳು ಸೇರಿದಂತೆ ಕೆಲವು ಸೀನ್‌ಗಳನ್ನು ಸ್ಟುಡಿಯೋದಲ್ಲಿ ಸೆಟ್ ಹಾಕಿ ಚಿತ್ರಿಸಿದ್ದರು. ಆಗ ಸೆಟ್‌ಗೆ ಹೋಗಿದ್ದ ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಅವರ ಕ್ಯಾಮೆರಾಗೆ ಸೆರೆ ಸಿಕ್ಕ ಚಿತ್ರವಿದು. ಆನ್‌ಸ್ಕ್ರೀನ್‌ನಲ್ಲಿ ರೋಷದಿಂದ ಮುಖಾಮುಖಿಯಾಗುವ ವಿಷ್ಣು – ಲೋಕನಾಥ್ ಅಂಕಲ್ ಇಲ್ಲಿ ನಗುನಗುತ್ತಾ ಪೋಸು ಕೊಟ್ಟಿದ್ದಾರೆ!

ಜಹ್ರೀಲಾ ಇನ್ಸಾನ್:

ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡ `ನಾಗರಹಾವು’ (1972) ವಿಷ್ಣುವರ್ಧನ್‌ಗೆ ಆ್ಯಂಗ್ರಿ ಯಂಗ್‌ಮ್ಯಾನ್ ಇಮೇಜು ದೊರಕಿಸಿಕೊಟ್ಟಿತು. ಅಂಬರೀಶ್‌ರ `ಜಲೀಲ್’ ಪಾತ್ರದ ಡೈಲಾಗನ್ನು ಜನ ಈಗಲೂ ನೆನಪಿಸಿಕೊಳ್ಳುತ್ತಾರೆ. ನಿರ್ದೇಶಕ ಪುಟ್ಟಣ್ಣ ಮತ್ತು ಛಾಯಾಗ್ರಾಹಕ ಚಿಟ್ಟಿಬಾಬು ಚಿತ್ರದುರ್ಗದ ಕೋಟೆಯನ್ನು ಆಕರ್ಷಕವಾಗಿ ಸೆರೆಹಿಡಿದಿದ್ದರು. `ನಾಗರಹಾವು’ ತೆರೆಕಂಡ ನಂತರ ದುರ್ಗಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು ಸುಳ್ಳಲ್ಲ.

ಮುಂದೆ `ನಾಗರಹಾವು’ ಚಿತ್ರವನ್ನು ಪುಟ್ಟಣ್ಣನವರು `ಜಹ್ರೀಲಾ ಇನ್ಸಾನ್’ (1974) ಶೀರ್ಷಿಕೆಯಡಿ ಹಿಂದಿಯಲ್ಲಿ ನಿರ್ದೇಶಿಸಿದರು. ರಿಶಿ ಕಪೂರ್, ಮೌಸಮಿ ಚಟರ್ಜಿ, ನೀತೂ ಸಿಂಗ್ ಮುಖ್ಯಭೂಮಿಕೆಯಲ್ಲಿದ್ದರೆ, ಅಂಬರೀಶ್ ಅಲ್ಲಿಯೂ `ಜಲೀಲ್’ ಆಗಿದ್ದರು. ಹಿಂದಿಯಲ್ಲಿ `ಚಾಮಯ್ಯ ಮೇಷ್ಟ್ರು’ ಪಾತ್ರ ನಿರ್ವಹಿಸಿದ್ದು ನಟ ಪ್ರಾಣ್. ಕನ್ನಡದಲ್ಲಿ ಅಂಕಲ್ ಲೋಕನಾಥ್ ಮಾಡಿದ್ದ ಪಾತ್ರವನ್ನು ಹಿಂದಿ ಅವತರಣಿಕೆಯಲ್ಲಿ ಇಫ್ತೆಕಾರ್ ಖಾನ್ ನಿರ್ವಹಿಸಿದ್ದರು.

ಇನ್ನಷ್ಟು ಕಥೆ

ಹೆಳವನಕಟ್ಟೆ ಗಿರಿಯಮ್ಮ

ಸಂಕೇತ್ ಸ್ಟುಡಿಯೋದಲ್ಲಿ ‘ಹೆಳವನಕಟ್ಟೆ ಗಿರಿಯಮ್ಮ’ ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭ. ಪಿಬಿಎಸ್ ಜೊತೆ

ಜನಪ್ರಿಯ ಪೋಸ್ಟ್ ಗಳು

ಕುವೆಂಪು ಒಪ್ಪಿಗೆ ಪತ್ರ

‘ಅನಿರೀಕ್ಷಿತ’ (1970) ಸಿನಿಮಾದಲ್ಲಿ ಕುವೆಂಪು ರಚನೆಯ ‘ಸೊಬಗಿನ ಸೆರೆಮನೆಯಾಗಿಹೆ ನೀನು…’ ಗೀತೆ ಬಳಕೆಯಾಗಿದೆ. ಕುವೆಂಪು ಅವರ ‘ಷೋಡಶಿ’ ಕವನಸಂಕಲನದಲ್ಲಿನ ಪದ್ಯವಿದು.

‘ಬಿಳಿ ಹೆಂಡ್ತಿ’ ಮಾರ್ಗರೆಟ್

ಅಮೆರಿಕ ಮೂಲದ ಮಾರ್ಗರೆಟ್ ಥಾಮ್ಸನ್ ‘ಬಿಳಿ ಹೆಂಡ್ತಿ’ ಚಿತ್ರಕ್ಕೆ ಆಯ್ಕೆಯಾದದ್ದು ಆಕಸ್ಮಿಕ. ಹದಿನೆಂಟರ ಹರೆಯದ ಮಾರ್ಗರೆಟ್ ಆಗ ‘ಭಾರತದ ಗ್ರಾಮೀಣ

ಮೂವಿಂಗ್ ಶಾಟ್!

ಈಗ ಸಿನಿಮಾ, ಕಿರುತೆರೆ ಚಿತ್ರೀಕರಣಗಳಲ್ಲಿ ಜಿಮ್ಮೀ ಜಿಬ್ ಸೇರಿದಂತೆ ಆಧುನಿಕ ಪರಿಕರಗಳಿಂದ ಮೂವಿಂಗ್‌ -ಏರಿಯಲ್ ಶಾಟ್‌ಗಳನ್ನು ಚಿತ್ರಿಸುತ್ತಾರೆ. ಸೌಲಭ್ಯಗಳಿಲ್ಲದ ಆಗ