ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಶಾಂತಾ ಹುಬ್ಳಿಕರ್… ಈಕಿ ಹುಬ್ಬಳ್ಳಿಯಾಕಿ..

ಪೋಸ್ಟ್ ಶೇರ್ ಮಾಡಿ
ರಾಜಕುಮಾರ ಮಡಿವಾಳರ
ಕವಿ

ಹುಬ್ಬಳ್ಳಿ ಸಮೀಪ ಅದರಗುಂಚಿ ಗ್ರಾಮದ ಶಾಂತಾ ಹುಬ್ಳಿಕರ್ (14/04/1914 – 17/07/1992) ಮರಾಠಿ ಚಿತ್ರರಂಗದಲ್ಲಿ ದೊಡ್ಡ ಹೆಸರು. ಹಿಂದಿ ಮತ್ತು ಕನ್ನಡ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ – ಧಾರವಾಡದ ಕವಿ ರಾಜಕುಮಾರ ಮಡಿವಾಳರ ನಟಿಯನ್ನು ನೆನಪು ಮಾಡಿಕೊಂಡಿದ್ದಾರೆ.

ಕೆಲವೇ ವರ್ಷಗಳ ಹಿಂದೆ ಮರಾಠಿ ಸಿನಿಮಾ ‘ಸೈರಾಟ್‌’ ದೊಡ್ಡ ಸದ್ದು ಮಾಡಿತ್ತು. ಅಂಥದ್ದೊಂದು ಅಮೋಘ ದಾಖಲೆಯನ್ನ ಆ ಕಾಲಕ್ಕೇನೆ ಮಾಡಿದ ಒಂದು ಮರಾಠಿ ಚಿತ್ರ ‘ಮಾಣೂಸ್‌’ (1939) ಅದರ ನಾಯಕಿ ಶಾಂತಾ ಹುಬ್ಳಿಕರ್‌. ಹುಬ್ಬಳ್ಳಿ ಪಕ್ಕದ ಊರು ಅದರಗುಂಚಿಯ ಚೆಲುವಿನ ಗಣಿ, ಪ್ರತಿಭೆಯ ಖಣಿ ಶಾಂತಾ ಪುಣೆ ಸೇರಿ ಏಕಮೇವಾದ್ವಿತೀಯ ವಿ.ಶಾಂತಾರಾಂ ಅವರ ಗರಡಿಯಲ್ಲಿ ಪಳಗಿದ ತಾರೆ. ಮರಾಠಿ ಸಿನಿಮಾದ ಸುಪ್ರಸಿದ್ಧ ನಟಿಯಾಗಿದ್ದ ಅವರು ವೈಯಕ್ತಿಕ ಬದುಕಿನಲ್ಲಿ ದುರಂತಗಳನ್ನು ಕಂಡವರು. ಕೈಹಿಡಿದವರು, ಕೈ ಬಿಟ್ಟವರ ನಡುವೆ ಕೈಚೆಲ್ಲಿ ಕೂರದೆ ಆ ಕಾಲಕ್ಕೆ ಪುಣೆಯಲ್ಲಿ ಮಗನಿಗಾಗಿ ಸಿನಿಮಾ ಟಾಕೀಸ್ ಕಟ್ಟಿದ, ಬೆದರದೆ, ಬೆಚ್ಚದೆ ಬಾಳಿದ ಜೀವ ಶಾಂತಾ.

‘ಮಾಣೂಸ್‌’ ಮರಾಠಿ ಚಿತ್ರದಲ್ಲಿ

ಶಾಂತಾರ ಜನ್ಮನಾಮ ರಾಜಮ್ಮ. ಅವರ ಬದುಕೇ ಒಂದು ರೀತಿ ಸಿನಿಮಾಕತೆಯಂತೆ! ಬಾಲ್ಯದಲ್ಲೇ ಶಾಸ್ತ್ರೀಯ ಸಂಗೀತ ಕಲಿತಾಕೆ. ಹದಿನೈದು ತುಂಬುತ್ತಿದ್ದಂತೆ ಮನೇಲಿ ಆಕೆಯ ಮದ್ವೆಗೆ ತಯಾರಿ ನಡೀತು. ವಧುವಾಗಲು ಒಪ್ಪದ ಆಕಿ ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದ ಗುಬ್ಬಿ ಕಂಪನಿಗೆ ಹೋಗಿ ನಟಿಯಾದ್ರು. ಅಲ್ಲಿಂದ ಮುಂದೆ ಕೊಲ್ಹಾಪುರ ಸಿನಿಟೋನ್‌ನಲ್ಲಿ ಜ್ಯೂನಿಯರ್ ಆರ್ಟಿಸ್ಟ್‌ ಆದ್ರು. ‘ಭೆಡಿ ರಾಜ್‌ಕುಮಾರ್‌’ ಮರಾಠಿ ಚಿತ್ರದ ಪುಟ್ಟ ಪಾತ್ರದೊಂದಿಗೆ ಬೆಳ್ಳಿತೆರೆ ಪ್ರವೇಶವಾಯ್ತು.

ಸರಿಸುಮಾರು ಇದೇ ಅವಧಿಯಲ್ಲಿ ನಟ, ನಿರ್ದೇಶಕ, ನಿರ್ಮಾಪಕ ವಿ.ಶಾಂತಾರಾಂ ಕಣ್ಣಿಗೆ ಬಿದ್ದದ್ದು ಶಾಂತಾ ವೃತ್ತಿಬದುಕಿನ ದೊಡ್ಡ ತಿರುವು. ಶಾಂತಾರಾಂ ಅವರ ‘ಮಾಣೂಸ್‌’ ಅವರಿಗೆ ದೊಡ್ಡ ಹೆಸರು ತಂದುಕೊಡ್ತು. ‘ಮಾಣೂಸ್‌’ ಹಿಂದಿಗೆ ‘ಆದ್ಮಿ’ ಹೆಸರಿನಲ್ಲಿ ಡಬ್ ಆಗಿ ಶಾಂತಾ ಹಿಂದಿ ಪ್ರೇಕ್ಷಕರಿಗೂ ಇಷ್ಟವಾದ್ರು. ‘ಪಹಿಲಾ ಪಾಲ್ನಾ’, ಥೊರಟಂಚಿ ಕಮಲ’, ಕುಲ್ ಕಳಂಕ್‌’, ‘ಮೇರಾ ಲಡ್ಕಾ’, ‘ಜೀವನ ನಾಟಕ’ (ಕನ್ನಡ), ‘ಘರ್‌ ಕಿ ಲಾಜ್‌’, ‘ಜೀವನ್‌ ಛಾಯಾ’, ‘ಸೌಭಾಗ್ಯವತಿ ಭವ’ ಶಾಂತಾರ ಇತರೆ ಕೆಲವು ಪ್ರಮುಖ ಚಿತ್ರಗಳು. ಶಾಂತಾರ ಆತ್ಮಚರಿತ್ರೆ ಮರಾಠಿಯಲ್ಲಿ ‘ಕಶ್ಯಾಲ ಉದಯಾಚಿ ಬಾತ್‌’ ಶೀರ್ಷಿಕೆಯಡಿ ಬಂದಿದೆ. ಜನಪ್ರಿಯ ಸಿನಿಮಾ ‘ಮಾಣೂಸ್‌’ನಲ್ಲಿ ಶಾಂತಾ ಅವರೇ ಹಾಡುತ್ತಾ ಕುಣಿಯುತ್ತಾ ಬರುವ ಹಾಡಿನ ಪಲ್ಲವಿಯ ಸಾಲಿದು. ಈ ಕೃತಿಯನ್ನು ‘ನಾಳೀನ ಚಿಂತ್ಯಾಕ’ ಶೀರ್ಷಿಕೆಯಡಿ ಕೆ.ಎಸ್‌.ಕುಲಕರ್ಣಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಅಹರ್ನಿಶಿ ಪ್ರಕಾಶನ ಪುಸ್ತಕ ಪ್ರಕಟಿಸಿದೆ.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಅಪರೂಪದ ಸಾಧಕ ವೀರಾಸ್ವಾಮಿ

ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ `ಡ್ರೀಮ್‍ಲ್ಯಾಂಡ್’ ಸಿನಿಮಾ ಹಂಚಿಕೆ ಕಚೇರಿ ನಡೆಸುತ್ತಿದ್ದರು. ಅವರಲ್ಲಿ ಸಾಮಾನ್ಯ ನೌಕರನಾಗಿ ಕೆಲಸಕ್ಕೆ ಸೇರಿದ ವೀರಾಸ್ವಾಮಿ

ಫಾರೂಕ್ ಶೇಕ್

ಭಾರತೀಯ ಚಿತ್ರರಂಗದ ಹೊಸ ಅಲೆಯ ಸಿನಿಮಾ ಯಾದಿಯಲ್ಲಿ ನಟ ಫಾರೂಕ್ ಶೇಕ್‌ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗುತ್ತದೆ. ರಂಗಭೂಮಿ, ಸಿನಿಮಾ ಮತ್ತು