ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸದಭಿರುಚಿಯ ಚಿತ್ರಗಳ ನಿರ್ದೇಶಕ ವಿ.ಸೋಮಶೇಖರ್

ಪೋಸ್ಟ್ ಶೇರ್ ಮಾಡಿ

ದೇವನಹಳ್ಳಿ ತಾಲೂಕಿನ ಚಿಕ್ಕನಹಳ್ಳಿ ವಿ.ಸೋಮಶೇಖರ್‌ ಅವರ ಹುಟ್ಟೂರು. ಅನುಕೂಲಸ್ಥ ಕುಟುಂಬದಲ್ಲಿ ಜನಿಸಿದ ಅವರಿಗೆ ಶಾಲೆ ಓದುತ್ತಿದ್ದಾಗಲೇ ಸಿನಿಮಾದೆಡೆ ವ್ಯಾಮೋಹ ಶುರುವಾಗಿತ್ತು. ಹೈಸ್ಕೂಲ್ ಓದು ಮುಗಿಯುತ್ತಿದ್ದಂತೆ ಒಂದಷ್ಟು ಹಣ ಹೊಂದಿಸಿಕೊಂಡು ಸಿನಿಮಾ ಸೇರುವ ಆಸೆಯಿಂದ ಮದರಾಸಿಗೆ ತೆರಳಿದರು. ಅಲ್ಲಿ ಸ್ಟುಡಿಯೋಗಳಿಗೆ ಅಲೆದಾಡಿದ ಅವರು ಕೊನೆಗೆ ಸುಬ್ಬಯ್ಯನಾಯ್ಡು ಅವರ ‘ಭಕ್ತಪ್ರಹ್ಲಾದ’ (1958) ಚಿತ್ರಕ್ಕೆ ಕ್ಲ್ಯಾಪ್ ಬಾಯ್ ಆದರು. ಓಹಿಲೇಶ್ವರ, ಜಗಜ್ಯೋತಿ ಬಸವೇಶ್ವರ ಚಿತ್ರಗಳ ಪುಟ್ಟ ಪಾತ್ರಗಳಲ್ಲಿ ನಟಿಸಿದರು.

ವಿ.ಸೋಮಶೇಖರ್‌ ಕೆಲವು ಸಮಯ ಸುಬ್ಬಯ್ಯನಾಯ್ಡು ಅವರ ನಾಟಕ ಕಂಪನಿಯ ಮ್ಯಾನೇಜರ್‌ ಆಗಿ ದುಡಿದರು. ಸುಬ್ಬಯ್ಯನಾಯ್ಡು ಅವರ ಶಿಫಾರಸಿನ ಮೆರೆಗೆ ಆರ್.ನಾಗೇಂದ್ರ ರಾಯರು ತಮ್ಮ ‘ವಿಜಯನಗರದ ವೀರಪುತ್ರ’ ಚಿತ್ರಕ್ಕೆ ಕ್ಲ್ಯಾಪ್ ಬಾಯ್ ಆಗಿ ಸೋಮಶೇಖರ್‌ರನ್ನು ನೇಮಿಸಿಕೊಂಡರು. ಆರು ವರ್ಷಗಳ ಕಾಲ ನಾಗೇಂದ್ರರಾಯರ ಸಂಸ್ಥೆಯಲ್ಲಿ ಕೆಲಸ ಮಾಡಿದ ಅವರಿಗೆ ಸಿನಿಮಾದ ವಿವಿಧ ವಿಭಾಗಗಳ ಪರಿಚಯ ಸಿಕ್ಕಿತು.

ಸಿನಿಮಾ ಚಿತ್ರೀಕರಣವೊಂದರಲ್ಲಿ ನಿರ್ದೇಶಕ ವಿ.ಸೋಮಶೇಖರ್‌, ವಿಷ್ಣುವರ್ಧನ್‌, ವಿಜಯಾ ರೆಡ್ಡಿ (ಫೋಟೊ: ಭವಾನಿ ಲಕ್ಷ್ಮೀನಾರಾಯಣ)

ಮುಂದೆ ರಾಜಕುಮಾರ್ ಅಭಿನಯದ ‘ಇಮ್ಮಡಿ ಪುಲಕೇಶಿ’ (1967) ಚಿತ್ರಕ್ಕೆ ವಿ.ಸೋಮಶೇಖರ್ ಸಹಾಯಕ ನಿರ್ದೇಶಕರಾದರು. ಆನಂತರ ‘ಹೇಮರೆಡ್ಡಿ ಮಲ್ಲಮ್ಮ’ ಸಿನಿಮಾ. ವೈ.ಆರ್‌.ಸ್ವಾಮಿ, ರವೀ, ಆರ್‌.ರಾಮಮೂರ್ತಿ ಅವರಲ್ಲಿ ಸಹಾಯಕರಾಗಿ ಕೆಲಸ ಮಾಡಿದ ನಂತರ ಅವರು ಸ್ವತಂತ್ರವಾಗಿ ನಿರ್ದೇಶಿಸಿದ ಮೊದಲ ಸಿನಿಮಾ ‘ಬಂಗಾರದ ಪಂಜರ’ (1974). ‘ಪ್ರೇಮದ ಕಾಣಿಕೆ, ‘ಶಂಕರ್‌ ಗುರು’ ಚಿತ್ರಗಳು ಅವರಿಗೆ ದೊಡ್ಡ ಹೆಸರು ತಂದುಕೊಟ್ಟವು. ರಾಜಕುಮಾರರ ಆರು ಚಿತ್ರಗಳೂ ಸೇರಿದಂತೆ ಸೋಮಶೇಖರ್ 37 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ‘ಗಂಡೆದೆ ಭೈರ’ (1996) ಅವರ ನಿರ್ದೇಶನದ ಕೊನೆಯ ಸಿನಿಮಾ. 2003ರ ಆಗಸ್ಟ್‌ 22ರಂದು 67ನೇ ವಯಸ್ಸಿನಲ್ಲಿ ಅವರು ಅಗಲಿದರು.

(ಮಾಹಿತಿ ಕೃಪೆ: ರುಕ್ಕೋಜಿ ಅವರ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ’ ಕೃತಿ)

ವಿ.ಸೋಮಶೇಖರ್ ನಿರ್ದೇಶನದ ‘ಶಂಕರ್ ಗುರು’ ಚಿತ್ರದಲ್ಲಿ ರಾಜಕುಮಾರ್, ಕಾಂಚನಾ

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಗಜಾನನ ಜಾಗೀರ್‌ದಾರ

ಮಹಾರಾಷ್ಟ್ರದ ಅಮರಾವತಿಯಲ್ಲಿ ಜನಿಸಿದ ಗಜಾನನ ಜಾಗೀರ್‌ದಾರ ಕಾಲೇಜು ದಿನಗಳಲ್ಲೇ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಮಹಾರಾಷ್ಟ್ರದ ವಿವಿಧ ನಗರದಲ್ಲಿ ನಾಟಕಗಳ ಪ್ರದರ್ಶನ ನೀಡಿದ