ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಮಿನಿಯೇಚರ್ ಸ್ಪೆಷಲಿಸ್ಟ್ ನಾಗರಾಜರಾವ್

ಕಲಾ ನಿರ್ದೇಶಕ
ಪೋಸ್ಟ್ ಶೇರ್ ಮಾಡಿ

60, 70ರ ದಶಕದಲ್ಲಿ ತಯಾರಾದ ಐತಿಹಾಸಿಕ, ಪೌರಾಣಿಕ, ಫ್ಯಾಂಟಸಿ ಸಿನಿಮಾಗಳನ್ನು ನೋಡಿದವರಿಗೆ ಚಿತ್ರದ ಸನ್ನಿವೇಶಗಳು ಕಣ್ಣಿಗೆ ಕಟ್ಟಿದಂತಿರುತ್ತವೆ. ಗ್ರಾಫಿಕ್ಸ್ ತಂತ್ರಜ್ಞಾನವಿಲ್ಲದ ದಿನಗಳಲ್ಲಿ ಕಲಾ ನಿರ್ದೇಶಕರ ನೈಪುಣ್ಯದಿಂದಲೇ ಇಂತಹ ದೃಶ್ಯಗಳು ಮೆರುಗು ಪಡೆಯುತ್ತಿದ್ದವು. ಅಂದಿನ ಚಿತ್ರಗಳಿಗೆ ವೈಭವ ತಂದುಕೊಟ್ಟ ಪ್ರಮುಖ ಕಲಾ ನಿರ್ದೇಶಕರ ಪೈಕಿ ಬಿ.ನಾಗರಾಜರಾವ್ ದೊಡ್ಡ ಹೆಸರು. ಹಿಂದಿ ಸೇರಿದಂತೆ ದಕ್ಷಿಣ ಭಾರತದ 500ಕ್ಕೂ ಹೆಚ್ಚು ಚಿತ್ರಗಳಿಗೆ ಅವರು ಕಲಾನಿರ್ದೇಶನ ಮಾಡಿದ್ದಾರೆ.

ಅರಮನೆ, ಬಂಗಲೆ, ದೇವಾಲಯ, ಸ್ಮಾರಕಗಳ ಮಿನಿಯೇಚರ್‍ಗಳನ್ನು ನೈಜವಾಗಿ ಕಾಣುವಂತೆ ರೂಪಿಸುತ್ತಿದ್ದ ನಾಗರಾಜರಾವ್ `ಮಿನಿಯೇಚರ್ ಸ್ಪೆಷಲಿಸ್ಟ್’ ಎಂದೇ ಹೆಸರಾಗಿದ್ದರು. ಕನ್ನಡಿಗರೇ ಆದ ಅವರ ಮೊದಲ ಕಲಾ ನಿರ್ದೇಶನದ ಕನ್ನಡ ಸಿನಿಮಾ ಕಸ್ತೂರಿ ವಿಜಯ. ಕವಿರತ್ನ ಕಾಳಿದಾಸ, ಶ್ರೀ ರೇಣುಕಾದೇವಿ ಮಹಾತ್ಮೆ, ಎಡೆಯೂರು ಸಿದ್ದಲಿಂಗೇಶ್ವರ, ಶಬರಿಮಲೆ ಸ್ವಾಮಿ ಅಯ್ಯಪ್ಪ, ಭಕ್ತ ಸಿರಿಯಾಳ… ಅವರು ಕಲಾ ನಿರ್ದೇಶನದ ಕೆಲವು ಪ್ರಮುಖ ಚಿತ್ರಗಳು. `ಕೊಲ್ಲೂರು ಶ್ರೀ ಮೂಕಾಂಬಿಕ’ (1993) ಚಿತ್ರದ ಉತ್ತಮ ಕಲಾ ನಿರ್ದೇಶನಕ್ಕಾಗಿ ಅವರಿಗೆ ರಾಜ್ಯ ಪ್ರಶಸ್ತಿ ಸಂದಿದೆ.

ನೆನಪು ಸಾಧನೆ - ಸ್ಫೂರ್ತಿ

ಅಪರೂಪದ ಸಾಧಕ ವೀರಾಸ್ವಾಮಿ

ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ `ಡ್ರೀಮ್‍ಲ್ಯಾಂಡ್’ ಸಿನಿಮಾ ಹಂಚಿಕೆ ಕಚೇರಿ ನಡೆಸುತ್ತಿದ್ದರು. ಅವರಲ್ಲಿ

ಮಹಾನಟಿ ಮನೋರಮ

‘ಮಾಳಯಿಟ್ಟ ಮಂಗೈ’ (1958) ತಮಿಳು ಚಿತ್ರದೊಂದಿಗೆ ಮನೋರಮ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. 1985ರಲ್ಲಿ

ಜನಪ್ರಿಯ ಪೋಸ್ಟ್ ಗಳು

ಸಿನಿಮಾ ಮಾಹಿತಿ ಭಂಡಾರ ಆರ್.ಲಕ್ಷ್ಮಣ್

ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಶ್ರಮಿಸಿದ ಹಲವರಲ್ಲಿ ಆರ್‌.ಲಕ್ಷ್ಮಣ್ ಹೆಸರೂ ಪ್ರಸ್ತಾಪವಾಗುತ್ತದೆ. ಚಿತ್ರನಿರ್ಮಾಪಕ, ವಿತರಕರಾಗಿ ಅಷ್ಟೇ ಅಲ್ಲ ಕನ್ನಡ ಸಿನಿಮಾಗೆ

ಅಭಿಜಾತ ಕಲಾವಿದ ನರಸಿಂಹರಾಜು

ಜುಲೈ ತಿಂಗಳಿನಲ್ಲಿ ಹುಟ್ಟಿ ಜುಲೈ ತಿಂಗಳಿನಲ್ಲಿಯೇ ಇಹಲೋಕ ತ್ಯಜಿಸಿದ ಕನ್ನಡದ ಸರ್ವಶ್ರೇಷ್ಠ ಹಾಸ್ಯನಟ ಟಿ.ಆರ್.ನರಸಿಂಹರಾಜು ಅವರು ಈಗ ನಮ್ಮೊಂದಿಗೆ ಇದ್ದಿದ್ದರೆ