ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕೈಲಾಸಂ ಅವರ ‘ವಸಂತ ಸೇನೆ’

Share this post

(ಮಾಹಿತಿ – ಫೋಟೊಗಳು: ಎನ್‌.ಎಸ್‌.ಶ್ರೀಧರಮೂರ್ತಿ)

ಬೆಳ್ಳಿತೆರೆಯತ್ತ ಆಸಕ್ತರಾದ ಇನ್ನೊಬ್ಬ ಬರಹಗಾರರು ಎಂದರೆ ಟಿ.ಪಿ.ಕೈಲಾಸಂ. ಮುಂಬಯಿಯ ಮೋಹನ ಭವನಾನಿ ಮೈಸೂರು ದಸರಾ ಮೆರವಣಿಗೆ ಬಗ್ಗೆ ಸಾಕ್ಷಚಿತ್ರ ತಯಾರಿಸಲು ಬಂದಾಗ ಕೈಲಾಸಂ ಅವರ ಒಡನಾಟ ಬೆಳೆಯಿತು. ಇಬ್ಬರೂ ಒಂದು ಕಥಾಚಿತ್ರ ನಿರ್ಮಿಸಲು ನಿರ್ಧರಿಸಿದರು. ಆಗ ತಯಾರಾಗಿದ್ದೇ ‘ವಸಂತಸೇನೆ’ (1925). ಶೂದ್ರಕನ ಮೃಚ್ಛಕಟಿಕವನ್ನು ವಸ್ತುವಾಗಿ ಅರಿಸಿಕೊಂಡರು. ಈಗಿನ ಬೆಂಗಳೂರಿನ ರಿಚ್ಮಂಡ್‌ರಸ್ತೆಯಲ್ಲಿನ ದಿಲ್‌ಖುಶ್ ಬಂಗಲೆಯ ಆವರಣದಲ್ಲಿ ಆಗತ್ಯವಾದ ಸೆಟ್ ಹಾಕಲಾಯಿತು. ಜರ್ಮನಿಯ ವೈಲಿ ಎಂಬುವವರು ಛಾಯಾಗ್ರಾಹಕರಾದರು. ಮೈಸೂರಿನ ಜಟ್ಟಿತಾಯಮ್ಮನವರು ನೃತ್ಯ ಸಂಯೋಜನೆ ಮಾಡಿದ್ದರು. ಚಿತ್ರಕ್ಕೆ ಬೇಕಾದ ವ್ಯಾಖ್ಯಾನವನ್ನು ಐರ್ಲಂಡಿನ ಕವಿ ಜೇಮ್ಸ್ ಕಸಿನ್ಸ್ ಇಂಗ್ಲೀಷಿನಲ್ಲಿ ಬರೆದಿದ್ದರು. ಅದನ್ನುಕನ್ನಡಕ್ಕೆ ವಿ.ಸೀಯವರು ಅನುವಾದಿಸಿದ್ದರು. ಕೈಲಾಸಂ ಅವರು ‘ಶಕಾರ’ನ ಪಾತ್ರದಲ್ಲಿಯೂ ಖ್ಯಾತ ನೃತ್ಯಕಲಾವಿದೆ ಏಣಾಕ್ಷಿ ರಾಮರಾವ್ ‘ವಸಂತ ಸೇನೆ’ ಪಾತ್ರವನ್ನೂ ನಿರ್ವಹಿಸಿದ್ದರು. ಜಿ.ಎ.ನಂದಾ, ‘ಚಾರುದತ್ತ’ನಾಗಿ ಡಾ.ಎನ್.ಎಸ್.ನಾರಾಯಣ ಶಾಸ್ತ್ರಿ, ‘ದೊರೆ ಪಾಲಕ’ನಾಗಿ ಆಭಿನಯಿಸಿದ್ದ ಚಿತ್ರದಲ್ಲಿದ್ದ ಉಳಿದ ಕಲಾವಿದರೂ ದಿಗ್ಗಜರೇ. ಕಮಲಾ ದೇವಿ ಚಟ್ಟೊಪಾಧ್ಯಾಯ, ನಳಿನಿ ತಾರ್ಕುಂಡೆ, ಬಿ.ಎಸ್.ರಾಮರಾವ್, ಎ.ಸೀತಾರಂ (ಕತೆಗಾರ ಆನಂದ್) ಡಾ.ಡಿ.ಕೆ.ಭಾರದ್ವಾಜ್ (ಡಿಕ್ಷನರಿ ಖ್ಯಾತಿ) ಮೊದಲಾದವರು ಮುಖ್ಯಪಾತ್ರದಲ್ಲಿದ್ದರು.

ಬೇಲೂರು ಹಳೇಬೀಡು, ಶ್ರವಣ ಬೆಳಗೊಳ ಮೊದಲಾದ ಕಡೆ ಹೊರಾಂಗಣ ಚಿತ್ರೀಕರಣ ನಡೆಯಿತು. ವಸಂತ ಸೇನಾದ ಉದ್ದ ಸುಮಾರು 8,000 ಆಡಿಗಳು, ತಯಾರಿಕೆ ವೆಚ್ಚ  ಅ ಕಾಲಕ್ಕೆ ಒಂದು ಲಕ್ಷ ರೂಪಾಯಿಗಳು. ಆದರೆ ಭಾರತಾದ್ಯಂತ ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶಿತವಾದ ಚಿತ್ರ ಗಳಿಸಿದ್ದು ಐದು ಲಕ್ಷ ರೂಪಾಯಿಗಳನ್ನು. ಇದರ ಬೇಡಿಕೆ ನಾಲ್ಕು ವರ್ಷವಾದರೂ ತಗ್ಗದಿದ್ದಾಗ ಪ್ರಿಂಟ್‌ಗಳನ್ನು ಜರ್ಮನಿಗೆ ಕೊಂಡೊಯ್ದು ಮರು ಸಂಸ್ಕರಣಕ್ಕೆ ಒಳಪಡಿಸಲಾಯಿತು. ಹೀಗೆ ಮಾಡುವಾಗ ಬಣ್ಣವನ್ನು ಬಳಿದು ವರ್ಣಚಿತ್ರವಾಗಿಸಲಾಯಿತು, ಬಣ್ಣ ಪಡೆದ ವಸಂತ ಸೇನೆ ಮತ್ತಷ್ಟು ಯಶಸ್ಸನ್ನು ಗಳಿಸಿದಳು. ಅಂತೂ ಇಂದಿಗೂ ವಸಂತ ಸೇನೆ ಮೂಕಿಚಿತ್ರವನ್ನು ಭಾರತೀಯ ಚಿತ್ರರಂಗದ ಸುವರ್ಣ ಅಧ್ಯಾಯವೆಂದೇ ಇತಿಹಾಸಕಾರರು ಕರೆಯುತ್ತಾರೆ. ಇದಕ್ಕೆಕಾರಣರಾದ ಕೈಲಾಸಂ ಕನ್ನಡಿಗರು ಎನ್ನುವುದು ನಮಗೆ ಹೆಮ್ಮೆಯ ವಿಷಯ.

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ