ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಶಿವಕಾರ್ತಿಕೇಯನ್‌ ನೂತನ ತಮಿಳು ಸಿನಿಮಾ ‘ಸಿಯೋನ್‌’!

ಪೋಸ್ಟ್ ಶೇರ್ ಮಾಡಿ
ಶಿವಕಾರ್ತಿಕೇಯನ್‌ ನೂತನ ತಮಿಳು ಸಿನಿಮಾ 'ಸಿಯೋನ್‌'!

ಕಮಲ್ ಹಾಸನ್ ನಿರ್ಮಾಣದಲ್ಲಿ ಶಿವಕಾರ್ತಿಕೇಯನ್ ನಟಿಸುತ್ತಿರುವ ನೂತನ ತಮಿಳು ಸಿನಿಮಾಗೆ ‘ಸಿಯೋನ್‌’ ಎಂದು ನಿಗದಿಯಾಗಿದೆ.

ಖ್ಯಾತ ನಟ ಕಮಲ ಹಾಸನ್ ಮತ್ತು ಶಿವಕಾರ್ತಿಕೇಯನ್‌ ಮತ್ತೊಮ್ಮೆ ಕೈಜೋಡಿಸಿದ್ದಾರೆ. ಈ ಹಿಂದೆ ಕಮಲ್ ನಿರ್ಮಿಸಿದ್ದ ‘ಅಮರನ್’ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ಶಿವಕಾರ್ತಿಕೇಯನ್ ನಾಯಕನಾಗಿ ನಟಿಸಿದ್ದರು. ಇದೀಗ ಈ ಜೋಡಿ ‘ಸಿಯೋನ್’ ಎಂಬ ಸಿನಿಮಾಗಾಗಿ ಮತ್ತೆ ಒಂದಾಗಿದ್ದಾರೆ. ರಾಜ್‌ಕಮಲ್‌ ಇಂಟರ್‌ನ್ಯಾಷನಲ್‌ ಮತ್ತು ಟರ್ಮಿರಿಕ್‌ ಮೀಡಿಯಾ ಬ್ಯಾನರ್‌ನಡಿ ಕಮಲ್ ಹಾಸನ್ ಮತ್ತು ಆರ್ ಮಹೇಂದ್ರನ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದೆ.

ಶಿವಕಾರ್ತಿಕೇಯನ್ ಹುಟ್ಟುಹಬ್ಬದ ವಿಶೇಷವಾಗಿ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ಹಣೆಯಲ್ಲಿ ವಿಭೂತಿ ಧರಿಸಿ, ಕೈಯಲ್ಲಿ ಕತ್ತಿ ಹಿಡಿದು ಶಿವಕಾರ್ತಿಕೇಯನ್ ಮಾಸ್ ಅವತಾರ ತಾಳಿದ್ದಾರೆ. ‘ಥಾಯ್ ಕಿಝವಿ’ ಸಿನಿಮಾ ನಿರ್ದೇಶಿಸಿರುವ ಶಿವಕುಮಾರ್ ಮುರುಗೇಶನ್ ‘ಸಿಯೋನ್’ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ‌. ಸಂತೋಷ್ ನಾರಾಯಣ್ ಸಂಗೀತ, ವಿವೇಕ್ ವಿಜಯಕುಮಾರ್ ಛಾಯಾಗ್ರಹಣ, ಸ್ಯಾನ್ ಲೋಕೇಶ್ ಸಂಕಲನ ಚಿತ್ರಕ್ಕಿದೆ. ಇದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ವಿಶ್ವಾದ್ಯಂತ ಚಿತ್ರವನ್ನು ಬಿಡುಗಡೆ ಮಾಡಲು ಸಿನಿಮಾ ಟೀಂ ಯೋಜನೆ ಹಾಕಿಕೊಂಡಿದೆ.

ಈ ಬರಹಗಳನ್ನೂ ಓದಿ