ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಒಂದೇ ಶಾಟ್‌ನಲ್ಲಿ ಚಿತ್ರಣಗೊಂಡ ಮೂರು ನಿಮಿಷದ ಹಾಡು!

Share this post
ಪ್ರಗತಿ ಅಶ್ವತ್ಥ ನಾರಾಯಣ
ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ

ಪುಟ್ಟಣ್ಣ ಕಣಗಾಲರ ಹಲವು ಚಿತ್ರಗಳಿಗೆ ಮಾರುತಿ ರಾವ್ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ರಾಜಕುಮಾರ್ ನಾಯಕನಟರಾಗಿ ಅಭಿನಯಿಸಿದ ಮೊದಲ ಚಿತ್ರ ‘ಬೇಡರ ಕಣ್ಣಪ್ಪ’ ತಮಿಳಿನ ಶಿವಾಜಿ ಗಣೇಶನ್ ಅವರ ಮೊದಲ ಚಿತ್ರ ‘ಪರಾಶಕ್ತಿ’ಗೆ ಇವರೇ ಛಾಯಾಗ್ರಾಹಕರು.

ಎಸ್.ಮಾರುತಿರಾವ್ ಪ್ರಸಿದ್ದ ಸಿನಿಮಾ ಛಾಯಾಗ್ರಾಹಕ. ಕನ್ನಡ, ತಮಿಳು, ತೆಲಗು, ಹಿಂದಿ ಭಾಷೆಗಳ ಸಾಕಷ್ಟು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಇವರು ತಮ್ಮ ವಿಶ್ರಾಂತ ಜೀವನದಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಿಗೆ ಮಾತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದರು. ‘ಪಡುವಾರಳ್ಳಿ ಪಾಂಡವರು’, ‘ಧರ್ಮಸೆರೆ’, ‘ರಂಗನಾಯಕಿ’, ‘ಋಣಮುಕ್ತಳು’, ‘ಮಸಣದ ಹೂವು’ ಚಿತ್ರಗಳಿಗೆ ಅವರದೇ ಛಾಯಾಗ್ರಹಣ. ಪುಟ್ಟಣ್ಣನವರ ಈ ಚಿತ್ರಗಳಿಗೆ ನಾನು ಸ್ಥಿರಚಿತ್ರ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದೇನೆ. ಆ ಸಂದರ್ಭದಲ್ಲಿ ಒಡನಾಡುವಾಗ ಮಾರುತಿ ರಾವ್‌ ಅವರು ನನಗೆ ಬಹು ಆತ್ಮೀಯರಾಗಿದ್ದರು. ಛಾಯಾಗ್ರಹಣ ಕಲೆಯ ಬಗ್ಗೆ ನನಗೆ ಸಾಕಷ್ಟು ತಿಳುವಳಿಕೆ ನೀಡಿದರು. ರಾಜಕುಮಾರ್ ನಾಯಕನಟರಾಗಿ ಅಭಿನಯಿಸಿದ ಮೊದಲ ಚಿತ್ರ ‘ಬೇಡರ ಕಣ್ಣಪ್ಪ’ ತಮಿಳಿನ ಶಿವಾಜಿ ಗಣೇಶನ್ ಅವರ ಮೊದಲ ಚಿತ್ರ ‘ಪರಾಶಕ್ತಿ’ಗೆ ಇವರೇ ಛಾಯಾಗ್ರಾಹಕರು.

‘ರಂಗನಾಯಕಿ’ ಸಿನಿಮಾ ಚಿತ್ರೀಕರಣದ ಸಂದರ್ಭ. ಬೆಂಗಳೂರು ಮೆಜಸ್ಟಿಕ್‌ನಲ್ಲಿನ ಸ್ಟೇಟ್ಸ್ ಚಿತ್ರಮಂದಿರದಲ್ಲಿ ‘ಬೇಡರ ಕಣ್ಣಪ್ಪ’ ಚಿತ್ರ ಮರುಬಿಡುಗಡೆಯಾಗಿತ್ತು.  ಮಾರುತಿರಾವ್ ಚಿತ್ರ ನೋಡಿ ಬರಲು ನನಗೆ ಹೇಳಿದರು. ಚಿತ್ರದಲ್ಲಿ ನಟಿ ಫಂಡರೀಬಾಯಿ ಅವರ ಮೇಲೆ ಚಿತ್ರಣವಾಗಿರುವ ‘ಆಶಾಗಗನದೆ ನಿರಾಶ ಮೋಡವು’ ಹಾಡಿನಲ್ಲಿ ವಿಶೇಷತೆಯಿದೆ. 2 ನಿಮಿಷ 55 ಸೆಕೆಂಡ್ ಉದ್ದದ ಈ ಹಾಡನ್ನು ಒಂದೇ ಶಾಟ್‌ನಲ್ಲಿ ಚಿತ್ರೀಕರಿಸಲಾಗಿದೆ. ಕಪ್ಪು ಬಿಳುಪಿನ ಆ ಚಿತ್ರದಲ್ಲಿ ಕತ್ತಲೆ ಬೆಳಕಿನ ಸಂಯೋಜನೆ ಅದ್ಭುತವಾಗಿದೆ. ತಾಂತ್ರಿಕವಾಗಿ ಇನ್ನೂ  ಮುಂದುವರಿಯದ (1954) ದಿನಗಳಲ್ಲಿ ಫಿಲಂನಲ್ಲಿ ಚಿತ್ರೀಕರಣ ಮಾಡುವುದು ಎಷ್ಟು ಕಷ್ಟದ ಕೆಲಸವಾಗಿತ್ತು ಎಂಬುದು ಅಂದಿನ ಅನುಭವ ಇರುವ ತಂತ್ರಜ್ಞರಿಗೆ ಮಾತ್ರ ಗೊತ್ತಾಗುತ್ತದೆ. ಮಾರುತಿ ರಾವ್‌ ಅವರು ಈ ಹಾಡಿನ ಚಿತ್ರೀಕರಣ ಸಂದರ್ಭದಲ್ಲಿ ಆದ ಸಂಕಷ್ಟಗಳನ್ನು ವಿವರಿಸಿದರು. ‘ಬೇಡರ ಕಣ್ಣಪ್ಪ’ ಚಿತ್ರ ಯೂಟ್ಯೂಬ್‌ನಲ್ಲಿ ಲಭ್ಯವಿದೆ. 47ನೇ ನಿಮಿಷದಲ್ಲಿ ಬರುವ ಈ ಹಾಡನ್ನು ಗಮನಿಸಿದರೆ ಛಾಯಾಗ್ರಾಹಕರ ನೈಪುಣ್ಯತೆ ಅರಿವಿಗೆ ಬರುತ್ತದೆ. ಯೂಟ್ಯೂಬ್‌ನಲ್ಲಿರುವ ‘ಬೇಡರ ಕಣ್ಣಪ್ಪ’ ಪ್ರಿಂಟ್‌ ಚೆನ್ನಾಗಿದೆ. ನೀವು ಈ ಸಿನಿಮಾ ವೀಕ್ಷಿಸಿರದಿದ್ದರೆ ನೋಡಿ.

‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ರಾಜಕುಮಾರ್‌

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ