ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಪೇಷನ್ಸ್ ಕೂಪರ್

ಪೋಸ್ಟ್ ಶೇರ್ ಮಾಡಿ

ಭಾರತದ ಮೊದಲ ಸಿನಿಮಾ ಸ್ಟಾರ್‌ಗಳಲ್ಲಿ ನಟಿ ಪೇಷನ್ಸ್ ಕೂಪರ್ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗುತ್ತದೆ. ಕೊಲ್ಕೊತ್ತಾ ಮೂಲದ ಆಂಗ್ಲೋ ಇಂಡಿಯನ್‌ ಪೇಷನ್ಸ್ ಕೂಪರ್ ಮೊದಲು ‘ಬ್ಯಾಂಡ್‌ಮನ್‌’ ಡ್ಯಾನ್ಸ್ ಟ್ರೂಪ್‌ನಲ್ಲಿ ನೃತ್ಯಗಾರ್ತಿಯಾಗಿದ್ದರು. ಮುಂದೆ ಮದನ್‌ ರಂಗತಂಡದ ಹಲವು ನಾಟಕಗಳಲ್ಲಿ ಅಭಿನಯಿಸಿದರು. ನಂತರದ ದಿನಗಳಲ್ಲಿ ಮದನ್‌ ಥಿಯೇಟರ್‌ ಪಿಕ್ಚರ್ಸ್‌ ಬ್ಯಾನರ್‌ ಸಿನಿಮಾಗಳನ್ನು ತಯಾರಿಸಿತು. ಅಲ್ಲಿನ ಮೂಕಿ ಚಿತ್ರಗಳಲ್ಲಿ ಪೇಷನ್ಸ್ ಕೂಪರ್ ನಟಿಸಿದರು. ನಳ ದಮಯಂತಿ (1920), ಧ್ರುವ ಚರಿತಾ, ಪತಿ ಭಕ್ತಿ, ರತ್ನಾವಳಿ, ನೂರ್‌ ಜಹಾನ್‌ ಮುಂತಾದ ಮೂಕಿ ಚಿತ್ರಗಳಲ್ಲಿ ಹೆಸರು ಗಳಿಸಿದ ಪೇಷನ್ಸ್ ಕೂಪರ್‌ ಟಾಕಿ ಸಿನಿಮಾಗಳತ್ತ ಹೊರಳಿದರು. ಶ್ವೇತವರ್ಣ, ಚೂಪುಗಣ್ಣಿನ ಅವರು ‘ಹಾಲಿವುಡ್‌ ಲುಕ್‌’ನ ಪಾತ್ರಗಳಿಗೆ ಸೂಕ್ತವಾಗಿ ಹೊಂದಿಕೆಯಾಗುತ್ತಿದ್ದರು ಎಂದು ಆಗ ತಂತ್ರಜ್ಞರು ಅಭಿಪ್ರಾಯ ಪಟ್ಟಿದ್ದರು.

ಭಾರತೀಯ ಸಿನಿಮಾದ ಆರಂಭದ ಕೆಲವು ದ್ವಿಪಾತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಪೇಷನ್ಸ್ ಕೂಪರ್ ಅವರದ್ದು. ‘ಪತ್ನಿ ಪ್ರತಾಪ್‌’ ಮತ್ತು ‘ಕಶ್ಮೀರಿ ಸುಂದರಿ’ ಅವರ ದ್ವಿಪಾತ್ರದ ಎರಡು ಚಿತ್ರಗಳು. ಮೂವತ್ತರ ದಶಕದಲ್ಲಿ ಅವರು ನಾಯಕನಟಿಯಾಗಿ ಜನಪ್ರಿಯತೆ ಗಳಿಸಿದರು. ಇರಾದಾ, ಖಾನ್ ಸಾಹೇಬ್‌ (1946) ಅವರ ಕೊನೆಯ ಎರಡು ಸಿನಿಮಾಗಳು. 1947ರಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದ ಅವರು ಅಲ್ಲಿ ಹತ್ತಾರು ಅನಾಥ ಮಕ್ಕಳನ್ನು ದತ್ತು ಪಡೆದು ಪೋಷಿಸಿದರು ಎನ್ನಲಾಗುತ್ತದೆ. 1993ರ ಏಪ್ರಿಲ್‌ 5ರಂದು ಕರಾಚಿಯಲ್ಲಿ ಪೇಷನ್ಸ್ ಕೂಪರ್ ನಿಧನ ಹೊಂದಿದರು.

ಪೇಷನ್ಸ್ ಕೂಪರ್‌ | ಜನನ: 1905 | ನಿಧನ: 05/04/1993

ನೆನಪು ಸಾಧನೆ - ಸ್ಫೂರ್ತಿ

ಅಪರೂಪದ ಸಾಧಕ ವೀರಾಸ್ವಾಮಿ

ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ `ಡ್ರೀಮ್‍ಲ್ಯಾಂಡ್’ ಸಿನಿಮಾ ಹಂಚಿಕೆ ಕಚೇರಿ ನಡೆಸುತ್ತಿದ್ದರು. ಅವರಲ್ಲಿ

ಮಹಾನಟಿ ಮನೋರಮ

‘ಮಾಳಯಿಟ್ಟ ಮಂಗೈ’ (1958) ತಮಿಳು ಚಿತ್ರದೊಂದಿಗೆ ಮನೋರಮ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. 1985ರಲ್ಲಿ

ಜನಪ್ರಿಯ ಪೋಸ್ಟ್ ಗಳು

ಬಹುಮುಖ ಪ್ರತಿಭೆ ಕುಣಿಗಲ್ ನಾಗಭೂಷಣ್

ಕನ್ನಡದ ಪ್ರಮುಖ ಚಿತ್ರನಿರ್ದೇಶಕರಲ್ಲಿ ಸಹಾಯಕರಾಗಿ ಕೆಲಸ ಮಾಡಿದ ಕುಣಿಗಲ್ ನಾಗಭೂಷಣ್‌ ಸ್ವತಂತ್ರ ನಿರ್ದೇಶಕರಾಗಿ ಯಶಸ್ಸು ಕಾಣಲಿಲ್ಲ. ಆದರೆ ಸಂಭಾಷಣೆಕಾರನಾಗಿ ಗೆದ್ದರು.

ಡಿ.ರಾಜೇಂದ್ರಬಾಬು

ಕನ್ನಡ ಚಿತ್ರರಂಗ ಕಂಡ ಯಶಸ್ವೀ ಮತ್ತು ಸದಭಿರುಚಿಯ ಚಿತ್ರನಿರ್ದೇಶಕರಲ್ಲೊಬ್ಬರು ಡಿ.ರಾಜೇಂದ್ರಬಾಬು. ಅವರು ಚಿತ್ರರಂಗಕ್ಕೆ ಬಂದಿದ್ದು ನಟನಾಗುವ ಇರಾದೆಯಿಂದ. ನಟನಾಗಿ ಅವರಿಗೆ

ಮೆಥೆಡ್ ಆಕ್ಟರ್ ಎಸ್‌ವಿಆರ್

ಪಾತ್ರಗಳ ಆಯ್ಕೆಯಲ್ಲಿ ಎಸ್‌ವಿಆರ್‌ ಅವರದ್ದು ವೃತ್ತಿ ಬದುಕಿನ ಆರಂಭದ ದಿನಗಳಿಂದಲೂ ಎಚ್ಚರಿಕೆಯ ನಡೆ. ಅವರಿಗೆ ನಾಯಕನಟನಾಗುವ ಸಾಕಷ್ಟು ಅವಕಾಶಗಳಿದ್ದವು. ಆದರೆ