ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

‘ಶಿಲ್ಪಾ ಶ್ರೀನಿವಾಸ್’ ಚಿತ್ರದಲ್ಲಿ ಹಿರಿಯ ನಟ ಅಭಿಜಿತ್

ಪೋಸ್ಟ್ ಶೇರ್ ಮಾಡಿ
'ಶಿಲ್ಪಾ ಶ್ರೀನಿವಾಸ್' ಚಿತ್ರದಲ್ಲಿ ಹಿರಿಯ ನಟ ಅಭಿಜಿತ್

ರಾಜೀವ್ ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ‘ಶಿಲ್ಪಾ ಶ್ರೀನಿವಾಸ್‌’ ಸಿನಿಮಾದ ವಿಶೇಷ ಹಾಡೊಂದಕ್ಕೆ ನಟ ಅಭಿಜಿತ್‌ ಹೆಜ್ಜೆ ಹಾಕಿದ್ದಾರೆ. ಸಿನಿಮಾ ಉದ್ಯಮದಲ್ಲಿನ ಹುಳುಕು, ತೊಡಕುಗಳಿಗೆ ಕನ್ನಡಿ ಹಿಡಿಯುವ ಕಥಾವಸ್ತು ಈ ಚಿತ್ರದ್ದು.

ಸ್ನೇಹಾಲಯಂ ಕ್ರಿಯೇಷನ್ಸ್ ಲಾಂಛನದಲ್ಲಿ ಅಹಿನಾ ಮನೋ ಹಾಗು ಮಂಜುನಾಥ್ ಗೌರಜ್ಜಿ ನಿರ್ಮಿಸುತ್ತಿರುವ ‘ಶಿಲ್ಪಾ ಶ್ರೀನಿವಾಸ್’ ಸಿನಿಮಾದ ವಿಶೇಷ ಹಾಡಿಗೆ ಹಿರಿಯ ನಟ ಅಭಿಜಿತ್ ಹೆಜ್ಜೆ ಹಾಕಲಿದ್ದಾರೆ. ‘ಈ ಸಿನಿಮಾ ಅಂತೀವಲ್ಲಾ ಅದು ದೊಡ್ಡ…’ ಎಂಬ ಸಾಲುಗಳಿಂದ ಪ್ರಾರಂಭವಾಗುವ ಪ್ರತಾಪ್ ಭಟ್ ಅವರ ಸಾಹಿತ್ಯಕ್ಕೆ ಅನಿರುದ್ಧ ಶಾಸ್ತ್ರಿ ಸಂಗೀತ ಸಂಯೋಜನೆ ಮಾಡುವುದರ ಜೊತೆಗೆ ಅವರೇ ಹಾಡಿದ್ದಾರೆ. ಹಾರರ್ – ಥ್ರಿಲ್ಲರ್ ಜೊತೆಗೆ ಸಿನಿಮಾ ಇಂಡಸ್ಟ್ರಿಯಲ್ಲಿನ ಹುಳುಕು, ತೊಡಕುಗಳನ್ನು ಎತ್ತಿ ತೋರಿಸುವ ಕಥಾವಸ್ತುವನ್ನು ಒಳಗೊಂಡಿರುವ ಚಿತ್ರದ ಶೂಟಿಂಗ್‌ ಮುಗಿದಿದೆ. ಫಸ್ಟ್ ಕಾಪಿ ನೋಡಿದ ನಿರ್ದೇಶಕರಿಗೆ ಇನ್ನೂ ಒಂದು ಹಾಡು ಇದ್ದಿದ್ರೆ ಚೆನ್ನಾಗಿರುತ್ತಿತ್ತು ಎಂದನಿಸಿದೆ. ಹಾಗಾಗಿ ನಿರ್ದೇಶಕ ರಾಜೀವ್ ಕೃಷ್ಣ ಅವರು ಹೊಸ ಹಾಡನ್ನು ಸಿದ್ದಪಡಿಸಿ ಅದರಲ್ಲಿ ನಟ ಅಭಿಜಿತ್ ಅವರಿಂದ ಹೆಜ್ಜೆ ಹಾಕಿಸಿದ್ದಾರೆ.

ಚಿತ್ರದಲ್ಲಿ ಒಟ್ಟು ಮೂರು ಹಾಡುಗಳು ಹಾಗೂ ಎರಡು ಫೈಟ್ʼಗಳಿದ್ದು ಮೇ ತಿಂಗಳ ಕೊನೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಬೇಕೆಂಬುದು ನಿರ್ದೇಶಕರ ಯೋಜನೆ. ಚಿತ್ರದಲ್ಲಿ ನಿರ್ಮಾಪಕರು, ವಿತರಕರೂ ಆದ ಶಿಲ್ಪಾ ಶ್ರೀನಿವಾಸ್ ಅವರೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ಶೋಭರಾಜ್, ನಾಗೇಂದ್ರ ಅರಸ್, ಶಂಖನಾದ ಆಂಜಿನಪ್ಪ, ಅನ್ನಪೂರ್ಣ, ನಂದಿನಿ ಕಮ್ಮಯ್ಯ. ಪಂಚಾಕ್ಷರಯ್ಯ ಮರಿಸ್ವಾಮಿ, ವೀರ ಧನುಷ್. ಕಿಶೋರ್ ಕಾಸರಗೋಡು, ಸ್ವಾತಿ ಲಿಂಗರಾಜ್, ಬೆಂಗಳೂರು ಮನು, ಪ್ರಿಯ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ, ಅನಿರುದ್ದ ಶಾಸ್ತ್ರಿ ಅವರ ಸಂಗೀತ, ಪ್ರತಾಪ್ ಭಟ್ ಅವ ಸಾಹಿತ್ಯ, ಕೆ. ಮಲ್ಲಿ ವಡ್ಡರಹಟ್ಟಿ ಅವರ ಸಹನಿರ್ದೇಶನ, ಡಿ. ಮಲ್ಲಿ ಸಂಕಲನ, ಸಾನ್ವಿ ಅವರ ನೃತ್ಯ ನಿರ್ದೇಶನವಿದೆ. ರಾಜೀವ್ ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಈ ಬರಹಗಳನ್ನೂ ಓದಿ