‘ಕೇಕೆ’ ಚಿತ್ರದ ‘ಗುಂಟೂರು ಅಮ್ಮಾಯಿ’ ಹಾಡು ಬಿಡುಗಡೆಯಾಗಿದೆ. ಕಿರಣ್ ತೋಟಂಬೈಲ್ ಸಾಹಿತ್ಯ ರಚಿಸಿ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಸೋನು ಶ್ರೀನಿವಾಸಗೌಡ ಹೆಜ್ಜೆ ಹಾಕಿದ್ದಾರೆ.
ಕೇಕೆ… ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದಿಲ್ಲದೆ ಸೆಟ್ಟೇರಿ ರಿಲೀಸ್ ಹತ್ತಿರಕ್ಕೆ ಬಂದಿರೋ ಸಿನಿಮಾ. ಈ ಚಿತ್ರದ ವಿಶೇಷ ಐಟಂ ಹಾಡನ್ನು ಇಂದು ಕಲಾವಿದರ ಸಂಘದಲ್ಲಿ ಲೋಕಾರ್ಪಣೆ ಮಾಡಲಾಯ್ತು. ಚಿತ್ರವನ್ನು ಸೋಮಶೇಖರ್ ಜಿ.ಕೆ ನಿರ್ದೇಶಿಸಿದ್ದು, ಬಹುತೇಖ ಹೊಸ ಕಲಾವಿದರೇ ಮುಖ್ಯ ಭೂಮಿಕೆಯಲ್ಲಿದ್ದಾರೆ. ರಮಾಲಿ ನಾಯ್ಕ್ ಮತ್ತು ಕಲ್ಯಾಣ್ ಅನ್ನೋ ಹೊಸಪೇಟೆಯವ್ರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಭರತ್ ಇಂಡಿಯಾ ಛಾಯಾಗ್ರಹಣ ಈ ಚಿತ್ರಕ್ಕಿದೆ. ಚಿತ್ರಕ್ಕೆ ‘ಉಪೇಂದ್ರ ಐ ಲವ್ ಯೂ’ ಚಿತ್ರ ಖ್ಯಾತಿಯ ಕಿರಣ್ ತೋಟಂಬೈಲ್ ಸಂಗೀತ ಸಂಯೋಜಿಸಿದ್ದಾರೆ. ಈಗ ಬಿಡುಗಡೆಯಾಗಿರೋ ‘ಗುಂಟೂರು ಅಮ್ಮಾಯಿ’ ಹಾಡಿಗೆ ಸಂಗೀತದ ಜೊತೆ ಖುದ್ದು ಕಿರಣ್ ಸಾಹಿತ್ಯ ಬರೆದಿದ್ದಾರೆ. ಐಶ್ವರ್ಯ ರಂಗರಾಜನ್ ಧನಿಯಾಗಿದ್ದಾರೆ.

ಆಲಾಪಾನ ಆಡಿಯೋ ಮೂಲಕ ಈ ಹಾಡನ್ನು ರಿಲೀಸ್ ಮಾಡಲಾಗಿದೆ. ಆಲಾಪಾನ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡು ನೋಡಲು ಲಭ್ಯವಿದೆ. ಗುಂಟೂರು ಅಮ್ಮಾಯಿ… ಹಾಟು ಘಾಟು ಬೀಟ್ಸ್ ಇರೋ ತೆಲುಗು ಮಿಶ್ರಿತ ಕನ್ನಡ ಹಾಡು. ಸೋಷಿಯಲ್ ಮಿಡಿಯಾದಲ್ಲಿ ಹಲವು ವಿಚಾರಗಳಿಗೆ ವೈರಲ್ ಆಗಿದ್ದ ಸೋನು ಶ್ರೀನಿವಾಸ್ ಗೌಡ ಈ ಹಾಡಿಗೆ ಹೆಜ್ಜೆ ಹಾಕಿರೋದು ವಿಶೇಷ. ಇದೇ ಮೊದಲ ಬಾರಿಗೆ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿರೋ ಸೋನುಶ್ರೀನಿವಾಸ್ ಗೌಡ ಮೊದಲ ಚಿತ್ರದ ಅನುಭವವನ್ನ ಬಿಚ್ಚಿಟ್ಟು, ‘ಈ ಅವಕಾಶಕ್ಕೆ ಆಭಾರಿಯಾಗಿದ್ದು, ಪ್ರೇಕ್ಷಕರ ಆಶೀರ್ವಾದು’ ಎಂದರು. ‘ಕೇಕೆ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗ್ತಿದ್ದು, ಸದ್ಯದಲ್ಲೇ ಚಿತ್ರದ ಇನ್ನಿತರ ವಿಚಾರಗಳನ್ನ ಹಂಚಿಕೊಳ್ಳುವುದಾಗಿ ಚಿತ್ರತಂಡ ತಿಳಿಸಿತು.







