ತೆಲುಗು ಮೂಲದ ಬಹುಭಾಷಾ ತಾರೆ ಜಯಪ್ರದ ಇಂದು (ಏಪ್ರಿಲ್ 3) 59ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ‘ಭೂಮಿ ಕೋಸಂ’ (1974) ತೆಲುಗು ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದಾಗ ಅವರಿಗೆ ಹದಿನಾಲ್ಕು ವರ್ಷ. ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ, ಮರಾಠಿ ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದಾರೆ. ರಾಜಕುಮಾರ್, ಎನ್‌ಟಿಆರ್, ಅಮಿತಾಭ್ ಬಚ್ಚನ್, ಕಮಲ ಹಾಸನ್, ವಿಷ್ಣುವರ್ಧನ್, ಅಂಬರೀಶ್, ರಜನೀಕಾಂತ್, ಮೋಹನ್ ಲಾಲ್ ಅವರಂತಹ ಮೇರು ನಟರ ಯಶಸ್ವೀ ಸಿನಿಮಾಗಳ ನಾಯಕನಟಿ. ಭಾರತೀಯ ಚಿತ್ರರಂಗ ಕಂಡ ಸುಂದರ ನಾಯಕನಟಿಯರ ಪಟ್ಟಿಯಲ್ಲಿ ಜಯಪ್ರದ ಹೆಸರು ಮುಂಚೂಣಿಯಲ್ಲಿದೆ. ಚಿತ್ರರಂಗದ ಅವರ ಯಶಸ್ಸು ರಾಜಕಾರಣದಲ್ಲೂ ಮುಂದುವರೆಯಿತು. ಲೋಕಸಭಾ ಸದಸ್ಯೆಯಾಗಿ ಕಾರ್ಯನಿರ್ವಹಿಸಿದರು.
ವರನಟ ಡಾ.ರಾಜಕುಮಾರ್ ಅವರ ಜೋಡಿಯಾಗಿ ‘ಸನಾದಿ ಅಪ್ಪಣ್ಣ’ ಚಿತ್ರದೊಂದಿಗೆ ಕನ್ನಡ ಬೆಳ್ಳಿತೆರೆಗೆ ಬಂದ ಅವರಿಗೆ ಇಲ್ಲಿ ದೊಡ್ಡ ಮನ್ನಣೆ ಸಿಕ್ಕಿತು. ಈ ಚಿತ್ರದ ನಂತರ ರಾಜ್ ಅವರೊಂದಿಗೆ ‘ಹುಲಿಯ ಹಾಲಿನ ಮೇವು’ ಮತ್ತು ‘ಕವಿರತ್ನ ಕಾಳಿದಾಸ’ ಚಿತ್ರಗಳಲ್ಲಿ ಕನ್ನಡಿಗರ ಮನಸೂರೆಗೊಂಡರು. ನಂತರದ ದಿನಗಳಲ್ಲಿ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ ಅವರು 2012ರ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪಾತ್ರದಲ್ಲಿ ಗಮನ ಸೆಳೆದಿದ್ದರು. ಜಯಪ್ರದ ಅವರ ಜನಪ್ರಿಯ ವೀಡಿಯೋ ಹಾಡುಗಳು ಇಲ್ಲಿವೆ