ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಚಿತ್ರೀಕರಣ ಪೂರ್ಣಗೊಳಿಸಿದ ‘ಸರ್ವೇ ಜನಾಃ ಸುಖಿನೋ ಭವಂತು’

ಪೋಸ್ಟ್ ಶೇರ್ ಮಾಡಿ
ಚಿತ್ರೀಕರಣ ಪೂರ್ಣಗೊಳಿಸಿದ 'ಸರ್ವೇ ಜನಾಃ ಸುಖಿನೋ ಭವಂತು'

ಸುನೀಲ್‌ ರುದ್ರಪ್ರಭಾ ನಿರ್ದೇಶನದ ‘ಸರ್ವೇ ಜನಾಃ ಸುಖಿನೋ ಭವಂತು’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಮನೋರಂಜನ್‌ ರವಿಚಂದ್ರನ್‌ ಮತ್ತು ಪೃಥ್ವಿ ಅಂಬರ್‌ ಚಿತ್ರದ ನಾಯಕನಟರು. ಈ ಚಿತ್ರದ ಮೂಲಕ ಬಹುಭಾಷಾ ನಟಿ ಅಪರ್ಣ ದಾಸ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.

S V ಎಂಟರ್ಟೈನ್ಮೆಂಟ್ ಬ್ಯಾನರ್‌ನಡಿಯಲ್ಲಿ ಎಸ್.ವಿ. ನಾರಾಯಣ್ ಹಾಗೂ ಎಸ್ ವಿ ಕೃಷ್ಣಮೂರ್ತಿ ನಿರ್ಮಿಸುತ್ತಿರುವ, ಸುನೀಲ್ ರುದ್ರಪ್ರಭಾ ನಿರ್ದೇಶನದ ಹಾಗೂ ಮನೋರಂಜನ್ ರವಿಚಂದ್ರನ್ ನಾಯಕನಾಗಿ ನಟಿಸಿರುವ ‘ಸರ್ವೇ ಜನಾಃ ಸುಖಿನೋ ಭವಂತು’ ಚಿತ್ರದ ನಾಯಕಿಯಾಗಿ ಬಹುಭಾಷಾ ನಟಿ ಅಪರ್ಣ ದಾಸ್ ಅಭಿನಯಿಸಿದ್ದಾರೆ. ಪೃಥ್ವಿ ಅಂಬರ್ ಖಳನಟನಾಗಿ ಕಾಣಿಸಿಕೊಂಡಿದ್ದಾರೆ.

ನಾಯಕಿ ಅಪರ್ಣ ದಾಸ್ ಮೂಲತಃ ಕೇರಳದ ಪಾಲ್ ಕ್ಕಾಡ್‌ನವರು. ತಮಿಳಿನ ವಿಜಯ್ ಅಭಿನಯದ Beast, Dada ಚಿತ್ರ ಹಾಗೂ Vadandhi ತಮಿಳು ವೆಬ್ ಸೀರೀಸ್‌ನಲ್ಲಿ ನಟಿಸಿರುವ ಅಪರ್ಣ ದಾಸ್, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಹಿಂದೆ ‘ಅಟೆಂಪ್ಟ್ ಟು ಮರ್ಡರ್’, ‘ರಂಗನಾಯಕಿ’ ಚಿತ್ರಗಳನ್ನು ನಿರ್ಮಿಸಿದ್ದ ಎಸ್ ವಿ ಎಂಟರ್ಟೈನ್ಮೆಂಟ್ ಸಂಸ್ಥೆಯ ನಿರ್ಮಾಣದ ನಾಲ್ಕನೇ ಚಿತ್ರವಿದು. ಸುನೀಲ್ ರುದ್ರಪ್ರಭ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ, ಕಾರ್ತಿಕ್ ಎಸ್. ಛಾಯಾಗ್ರಹಣ ಹಾಗೂ ಕೆ.ಎಂ. ಪ್ರಕಾಶ್ ಸಂಕಲನದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಚಿತ್ರದಲ್ಲಿ ರಂಗಾಯಣ ರಘು, ಸಿದ್ಲಿಂಗು ಶ್ರೀಧರ್, ದೀಕ್ಷಿತ್ ಗೌಡ, ಮನಮೋಹನ್ ರೈ ಹಾಗೂ ದಶಾವರ ಚಂದ್ರು ಸೇರಿದಂತೆ ಹಲವು ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಒಟ್ಟು 55 ದಿನಗಳ ಕಾಲ ಬೆಂಗಳೂರು, ಮಂಡ್ಯ, ಮೈಸೂರು, ಮೇಲುಕೋಟೆ, ದೊಡ್ಡಬಳ್ಳಾಪುರ, ಗದಗ, ಬೆಳಗಾವಿ, ಹುಬ್ಬಳ್ಳಿ ಹಾಗೂ ಧಾರವಾಡ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಈ ಬರಹಗಳನ್ನೂ ಓದಿ