ನಟ ಕೋಮಲ್ ಕುಮಾರ್ ಇಂದು (ಜುಲೈ 04) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರ Birthdayಗಾಗಿ ‘ರೋಲೆಕ್ಸ್’ ತಂಡ ಚಿತ್ರದ ನೂತನ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದೆ.
ಅಂಬಟಿ ಮಧು ಮೋಹನ್ ನಿರ್ಮಾಣ, ಶ್ರೀನಿವಾಸ್ ಮಂಡ್ಯ ನಿರ್ದೇಶನದ ‘ರೋಲೆಕ್ಸ್’ ತಂಡ ಚಿತ್ರದ ನೂತನ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದೆ. ಚಿತ್ರದ ಹೀರೋ ಕೋಮಲ್ ಕುಮಾರ್ ಅವರ ಹುಟ್ಟುಹಬ್ಬದ (ಜುಲೈ 04) ಪ್ರಯುಕ್ತ ಒಂದು ವಿಶೇಷ ಗ್ಲಿಮ್ಸ್ ಮತ್ತು ಪೋಸ್ಟರ್ ಅನ್ನು ಬಿಡುಗಡೆ ಮಾಡಿ, ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಸ್ಟೈಲೀಶ್ ಲುಕ್’ನಲ್ಲಿ ಕಾಣಿಸಿಕೊಂಡಿರುವ ಕೋಮಲ್ ಕುಮಾರ್ ಪ್ರೇಕ್ಷಕರನ್ನು ರಂಜಿಸಲು ಶ್ರೀಘ್ರದಲ್ಲಿ ಬೆಳ್ಳಿ ಪರದೆಗೆ ಬರುತ್ತಿದ್ದಾರೆ. ಇದೊಂದು ಸಂಪೂರ್ಣ ಕೌಟುಂಬಿಕ ಕಾಮಿಡಿ ಸಿನಿಮಾವಾಗಿದ್ದು ಪ್ರೇಕ್ಷಕರಿಗೆ ಹಾಸ್ಯವನ್ನು ಉಣಬಡಿಸಲಿದೆ. ಈ ಸಿನಿಮಾಕ್ಕೆ ಜೆಸ್ಸಿ ಗಿಪ್ಟ್ ಸಂಗೀತವಿದ್ದು, ರಾಕೇಶ್ ತಿಲಕ್ ಛಾಯಾಗ್ರಹಣ, ಅರವಿಂದ್ ರಾಜ್ ಸಂಕಲನವಿದೆ. ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಮುರಳಿಕೃಷ್ಣ ಹಾಗೂ ಕ್ರಿಯೆಟೀವ್ ಹೆಡ್ ಆಗಿ ರಾಜೇಶ್ ವರ್ಮ ಕಾರ್ಯನಿರ್ವಹಿಸಿದ್ದಾರೆ.







