ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಇಂಡಿಯನ್ ನ್ಯೂಸ್ ರಿವ್ಯೂ

Share this post

(ಬರಹ: ಮೋಹನ್ ಬಾಬು ಬಿ.ಕೆ., ಸಿನಿಮಾ ಬರಹಗಾರ, ಚಿತ್ರಮಂದಿರ ಮಾಲೀಕರು)

ಯಾರಿಗೆಲ್ಲಾ ನೆನಪಿದೆ? ಆಗ ಥಿಯೇಟರ್‌ಗಳಲ್ಲಿ ಸಿನಿಮಾ ಆರಂಭಿಸುವುದಕ್ಕೂ ಮುನ್ನ ‘ಇಂಡಿಯನ್ ನ್ಯೂಸ್’ ಕಪ್ಪು- ಬಿಳುಪು ರೀಲನ್ನು ಪ್ರದರ್ಶಿಸುತ್ತಿದ್ದೆವು. ಆಗ ಟೀವಿ ಮಾಧ್ಯಮಗಳು ಇರಲಿಲ್ಲ. ದಿನಪತ್ರಿಕೆಗಳನ್ನು ಹೆಚ್ಚು ಜನರು ಓದುತ್ತಿರಲಿಲ್ಲ. ಆಗ ಹಲವು ಪ್ರಮುಖ ವಿಷಯ – ಘಟನೆಗಳನ್ನು ಆಧರಿಸಿ 10 ನಿಮಿಷದ ಒಂದು ಡಾಕ್ಯುಮೆಂಟರಿ ಪ್ರತಿ ತಿಂಗಳು ತಯಾರಾಗುತ್ತಿತ್ತು. ಅದನ್ನು ಇಡೀ ದೇಶದ ಎಲ್ಲಾ ಚಿತ್ರಮಂದಿರಗಳಲ್ಲಿ ಖಡ್ಡಾಯವಾಗಿ ಪ್ರದರ್ಶನ ಮಾಡಲೇಬೇಕಿತ್ತು. ಇದಕ್ಕಾಗಿ ಆಯಾ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಕಚೇರಿಯು ‘ವಾರ್ತಾ ಇಲಾಖಾ ಕಚೇರಿ’ ಎಂದು ಸ್ಥಾಪನೆ ಮಾಡಿತ್ತು. ಈಗಲೂ ಕೋರಮಂಗಲದಲ್ಲಿ ಕಚೇರಿ ಇದೆ. ಪ್ರತಿ ತಿಂಗಳು ನಾವು ಆ ಕಚೇರಿಗೆ ಇಂತಿಷ್ಟು ಹಣ ಸಂದಾಯ ಮಾಡಿ ವಾರಕ್ಕೊಮ್ಮೆ ನ್ಯೂಸ್ ರೀಲ್ ಬದಲಿಸಿ ತರಬೇಕಿತ್ತು. ಟೀವಿ ಬಂದ ಮೇಲೆ 15 ದಿನಕ್ಕೆ, ನಂತರ ತಿಂಗಳಿಗೊಮ್ಮೆ ಆಯ್ತು. ಪ್ರತಿ ವರ್ಷ ಚಿತ್ರಮಂದಿರಗಳ ಸನ್ನದು ನವೀಕರಣಕ್ಕೆ ಸುಮಾರು ಇಲಾಖೆಗಳ NOC ಕೊಡಬೇಕು. ಅದಕ್ಕೆ ಈ ಇಲಾಖೆಯ ಪತ್ರವೂ ಲಗತ್ತಿಸಬೇಕಿತ್ತು. ಈಗ ಸ್ಯಾಟಲೈಟ್ ಬಂದಿದೆ. ಎಲ್ಲವೂ ಮಾಯ. ಹೀಗೊಂದು ನೆನಪು ನಿಮ್ಮ ಮುಂದೆ…

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ಬೇಡರ ಕಣ್ಣಪ್ಪ

`ಬೇಡರ ಕಣ್ಣಪ್ಪ’ (1954) ಚಿತ್ರದೊಂದಿಗೆ ರಾಜಕುಮಾರ್‌ ನಾಯಕನಟರಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದು ಗೊತ್ತಿರುವಂಥದ್ದೆ. ಈ

ಬಾಲಿವುಡ್'ಗೆ ಅಡಿಯಿಟ್ಟ ಆರ್ ಚಂದ್ರು | PAN ಇಂಡಿಯಾ ಚಿತ್ರ ನಿರ್ಮಾಣ

ಬಾಲಿವುಡ್’ಗೆ ಅಡಿಯಿಟ್ಟ ಆರ್ ಚಂದ್ರು | PAN ಇಂಡಿಯಾ ಚಿತ್ರ ನಿರ್ಮಾಣ

ಕನ್ನಡ ಚಿತ್ರನಿರ್ಮಾಪಕ ಆರ್‌.ಚಂದ್ರು ಕನ್ನಡವೂ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಕನ್ನಡ ಚಿತ್ರದಲ್ಲಿ

'ಅಕ್ಕ - ಸಿನಿಗನ್ನಡ ಚಲನಚಿತ್ರೋತ್ಸವ' | ಬೆಂಗಳೂರಿನಲ್ಲಿ ಅದ್ಧೂರಿ ಪ್ರಶಸ್ತಿ ಸಮಾರಂಭ

‘ಅಕ್ಕ – ಸಿನಿಗನ್ನಡ ಚಲನಚಿತ್ರೋತ್ಸವ’ | ಬೆಂಗಳೂರಿನಲ್ಲಿ ಅದ್ಧೂರಿ ಪ್ರಶಸ್ತಿ ಸಮಾರಂಭ

ಅಮೆರಿಕದಲ್ಲಿ ಸೆಪ್ಟೆಂಬರ್‌ನಲ್ಲಿ ಅಕ್ಕ ಸಮ್ಮೇಳನ ನಡೆಯಲಿದೆ. ಈ ಬಾರಿ 25ನೇ ಬೆಳ್ಳಿಹಬ್ಬದ ಸಂಭ್ರಮದ ಭಾಗವಾಗಿ ಅವರು ಸಿನಿಗನ್ನಡ ಚಲನಚಿತ್ರೋತ್ಸವ ಆಯೋಜಿಸುತ್ತಿದ್ದಾರೆ.

ಶ್ರೀಕೃಪಾ | ಕನ್ನಡ ಸಿನಿಮಾ ಪತ್ರಿಕೋದ್ಯಮ ಮರೆಯಬಾರದ ವ್ಯಕ್ತಿತ್ವ

ಶ್ರೀಕೃಪಾ | ಕನ್ನಡ ಸಿನಿಮಾ ಪತ್ರಿಕೋದ್ಯಮ ಮರೆಯಬಾರದ ವ್ಯಕ್ತಿತ್ವ

ಸುಮಾರು ಐದು ದಶಕಗಳ ಕಾಲ ಕನ್ನಡ ಸಿನಿಮಾ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸಿದವರು ಶ್ರೀಕೃಪಾ. ಪತ್ರಕರ್ತರಾಗಿ ಮಾತ್ರವಲ್ಲದೆ ಸಿನಿಮಾ – ಕಿರುತೆರೆ ಬರಹಗಾರರಾಗಿಯೂ