ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

‘ರಾಯರ ದರ್ಶನ’ ಆಲ್ಬಮ್ ಸಾಂಗ್ ಟೀಸರ್‌ ಬಿಡುಗಡೆ

ಪೋಸ್ಟ್ ಶೇರ್ ಮಾಡಿ
'ರಾಯರ ದರ್ಶನ' ಆಲ್ಬಮ್ ಸಾಂಗ್ ಟೀಸರ್‌ ಬಿಡುಗಡೆ

‘ರಾಯರ ದರ್ಶನ’ ಆಲ್ಬಮ್ ಸಾಂಗ್ ಟೀಸರ್‌ ಬಿಡುಗಡೆಯಾಗಿದೆ. ನಾಗಾರ್ಜುನ ಶರ್ಮ ರಚನೆಯ ಹಾಡಿಗೆ ಅಜನೀಶ್‌ ಲೋಕನಾಥ್‌ ಮತ್ತು ಸಿ.ಆರ್‌.ಬಾಬಿ ಸಂಗೀತ ಸಂಯೋಜಿಸಿದ್ದಾರೆ.

ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ಆಲ್ಬಮ್ ಸಾಂಗ್ ‘ರಾಯರ ದರ್ಶನ’ ದ ಟೀಸರ್ ಬಿಡುಗಡೆ ಮಾಡಲಾಯಿತು‌. ಲಕ್ಷ್ಮೀ ಗಣೇಶ ಪ್ರೋಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆಯವರು ಅಂದುಕೊಂಡಂತೆ ರಾಯರ ವರ್ಧಂತಿಯಂತೆ ಟೀಸರ್ ಹಾಗೂ ಪೋಸ್ಟರ್ ರಿಲೀಸ್ ಮಾಡಿದರು. ಮಂತ್ರಾಲಯದ ಈಗಿನ ಯತಿಗಳಾದ ಶ್ರೀ ಶ್ರೀ ಶ್ರೀ ಸುಭುದೇಂದ್ರ ತೀರ್ಥರು ಟೀಸರ್ ಹಾಗೂ ಪೋಸ್ಟರ್ ರಿಲೀಸ್ ಮಾಡಿದರು.

ಈ ಸಂದರ್ಭದಲ್ಲಿ ನವರಸ ನಾಯಕ ಜಗ್ಗೇಶ್, ಕಾಂತಾರ ಖ್ಯಾತಿಯ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ , ಲಕ್ಷ್ಮೀ ಗಣೇಶ ಹಾಗೂ ಟಿಎನ್ ಐಟಿ ಸಂಸ್ಥೆಯ ಎಂಡಿ ಸುಗುಣಾ ರಘು, ಆಗಿರುವ‌ ರಘು ಭಟ್ ಉಪಸ್ಥಿತರಿದ್ದರು. ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಿ‌ ಮಾತನಾಡಿದ ಗುರುಗಳು, ‘ಒಂದು ಚಿತ್ರವನ್ನ ನೋಡಿ ಚೆನ್ನಾಗಿಲ್ಲ ಎನ್ನುವುದು ಸುಲಭ. ಆದರೆ ಅದರ ಹಿಂದೆ ಸಾಕಷ್ಟು ಶ್ರಮವಿರುತ್ತದೆ. ಅದೇ ರೀತಿ ಶ್ರಮವಹಿಸಿ ಆಲ್ಬಂ ಸಾಂಗ್ ಮಾಡುತ್ತಿದ್ದಾರೆ. ಒಳ್ಳೆಯದಾಗಲಿ ಆದಷ್ಟು ಬೇಗ ಸಾಂಗ್ ರಿಲೀಸ್ ಆಗಲಿ’ ಎಂದು ಆಶಿರ್ವದಿಸಿದರು. ನಾಗಾರ್ಜುನ ಶರ್ಮ ರಚನೆಯ ಹಾಡಿಗೆ ಅಜನೀಶ್‌ ಲೋಕನಾಥ್‌ ಮತ್ತು ಸಿ.ಆರ್‌.ಬಾಬಿ ಸಂಗೀತ ಸಂಯೋಜಿಸಿದ್ದಾರೆ. ಸುಗುಣ ರಘು ಭಟ್‌ ನಿರ್ಮಾಣದ ಈ ಆಲ್ಬಂ ಸಾಂಗ್‌ ನಿರ್ದೇಶಕರು ರಘು ಭಟ್‌.

ಈ ಬರಹಗಳನ್ನೂ ಓದಿ