ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್ | ಇದು ಪ್ರೇಮ್ ಮತ್ತು ರಕ್ಷಿತಾ ಪ್ರೇಮ್ ಹೊಸ ಅಧ್ಯಾಯ

ಪೋಸ್ಟ್ ಶೇರ್ ಮಾಡಿ
ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್ | ಇದು ಪ್ರೇಮ್ ಮತ್ತು ರಕ್ಷಿತಾ ಪ್ರೇಮ್ ಹೊಸ ಅಧ್ಯಾಯ

ಕನ್ನಡ ಚಿತ್ರನಿರ್ದೇಶಕ ಪ್ರೇಮ್‌ ಮತ್ತು ರಕ್ಷಿತಾ ಪ್ರೇಮ್‌ ದಂಪತಿ, ‘ಫಿನಿಕ್ಸ್‌ ಪ್ರೇಮ್ಸ್‌ ಸ್ಟುಡಿಯೋಸ್‌’ಗೆ ಚಾಲನೆ ನೀಡಿದ್ದಾರೆ. ಯುವ ಪ್ರತಿಭೆಗಳಿಗೆ ನೆರವಾಗುವುದು ಈ ಯೋಜನೆಯ ಉದ್ದೇಶ.

​ಸ್ಯಾಂಡಲ್‌ವುಡ್‌ ನಿರ್ದೇಶಕ ಜೋಗಿ ಪ್ರೇಮ್ ಹಾಗೂ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಚಿತ್ರರಂಗದಲ್ಲಿ ಈಗ ಹೊಸ ಅಧ್ಯಾಯವೊಂದನ್ನು ಆರಂಭಿಸಿದ್ದಾರೆ. ತಮ್ಮ ಕನಸಿನ ಹೊಸ ನಿರ್ಮಾಣ ಸಂಸ್ಥೆ “ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್” (Phoenix Prems Studios) ಅನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ​ಕೇವಲ ದೊಡ್ಡ ಸಿನಿಮಾಗಳನ್ನು ಮಾಡುವುದಷ್ಟೇ ಅಲ್ಲದೆ, ಹೊಸ ಆಲೋಚನೆ ಮತ್ತು ಅದ್ಭುತ ಪ್ರತಿಭೆ ಹೊಂದಿರುವ ಯುವಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಬ್ಯಾನರ್ ಪ್ರಾರಂಭಿಸಲಾಗಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ದಿಸೆ ನೀಡಲು ಪ್ರೇಮ್-ರಕ್ಷಿತಾ ದಂಪತಿ ಮುಂದಾಗಿದ್ದಾರೆ.

​ಈ ನೂತನ ಬ್ಯಾನರ್‌ನ ಮೊದಲ ಚಿತ್ರವನ್ನು ಪ್ರೇಮ್ ಅವರ ಗರಡಿಯಲ್ಲಿ ಪಳಗಿದ ಶಿಷ್ಯ ಮಂಜುನಾಥ್ ಬಿ.ಎಸ್. ನಿರ್ದೇಶಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಪ್ರೇಮ್ ಅವರ ಜೊತೆ ಸಹ-ನಿರ್ದೇಶಕರಾಗಿ ಹಾಗೂ ಚಿತ್ರಸಾಹಿತಿಯಾಗಿ ಗುರುತಿಸಿಕೊಂಡಿರುವ ಮಂಜುನಾಥ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ‘ಏಕ್ ಲವ್ ಯಾ’ ಖ್ಯಾತಿಯ ಯುವ ನಟ ರಾಣಾ ಈ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಖ್ಯಾತ ಛಾಯಾಗ್ರಾಹಕ ವಿಲಿಯಂ ಡೆವಿಡ್ ಅವರ ಕ್ಯಾಮರಾ ಕಣ್ಣಲ್ಲಿ ಚಿತ್ರ ಮೂಡಿಬರಲಿದೆ. ಯುವ ಪ್ರತಿಭೆ ರೋಮಿಯೋ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಹಾಗೂ ಹೆಚ್ಚಿನ ತಾಂತ್ರಿಕ ವರ್ಗದ ವಿವರಗಳನ್ನು ಚಿತ್ರತಂಡ ಶೀಘ್ರದಲ್ಲೇ ಪ್ರಕಟಿಸಲಿದೆ.

ಈ ಬರಹಗಳನ್ನೂ ಓದಿ