ಸಾಹಿತಿ, ಪತ್ರಕರ್ತ ಪಿ.ಲಂಕೇಶ್ ಅವರಿಗೆ ಸಿನಿಮಾ ಕುರಿತಾಗಿ ಅಪಾರ ಆಸ್ಥೆಯಿತ್ತು. ಕನ್ನಡದ ಹೊಸಅಲೆಯ ಸಿನಿಮಾ ಯಾದಿಯಲ್ಲಿ ಅವರ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ. ಲಂಕೇಶ್ ನಿರ್ಮಿಸಿ, ನಿರ್ದೇಶಿಸಿ, ನಟಿಸಿದ ಮೊದಲ ಸಿನಿಮಾ ‘ಪಲ್ಲವಿ’ (1976). ಈ ಸಿನಿಮಾ ಅತ್ಯುತ್ತಮ ಚಿತ್ರ ಮತ್ತು ನಿರ್ದೇಶನ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಗೆ ಪಾತ್ರವಾಯ್ತು. ಚಿತ್ರಕ್ಕೆ ನಾಲ್ಕು ರಾಜ್ಯಪ್ರಶಸ್ತಿಗಳು ಸಂದಿವೆ. ‘ಅನುರೂಪ’ (1977), ‘ಖಂಡವಿದೆಕೋ ಮಾಂಸವಿದೆಕೋ’ (1979) ಮತ್ತು ‘ಎಲ್ಲಿಂದಲೋ ಬಂದವರು’ (1980) ಲಂಕೇಶ್ ನಿರ್ದೇಶನದ ಇತರ ಮೂರು ಸಿನಿಮಾಗಳು. ಲಂಕೇಶರ ಕೃತಿಗಳನ್ನಾಧರಿಸಿ ಅವರ ಪುತ್ರಿ ಕವಿತಾ ’ದೇವೀರಿ’ ಮತ್ತು ’ಅವ್ವ’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಲಂಕೇಶರ ಕ್ರಾಂತಿ ಬಂತು ಕ್ರಾಂತಿ ಕತೆ ಆಧರಿಸಿ ‘ಚಂಡಮಾರುತ’ ಸಿನಿಮಾ ತಯಾರಾಗಿತ್ತು. ಪಟ್ಟಾಭಿ ರಾಮರೆಡ್ಡಿ ಚಿತ್ರದ ನಿರ್ದೇಶಿಸಿದ್ದರು.

ಮೊದಲ ಭೇಟಿಯಲ್ಲಿ ಲತಾ, ಕಿಶೋರ್ಗೆ ‘ಸ್ಕೌಂಡ್ರಲ್’ ಎಂದು ಬೈದಿದ್ದರಂತೆ!
ಬರಹ: ಚಿತ್ರಾ ಸಂತೋಷ್ ಅದು 1940ರ ಸುಮಾರು. ಆ ಯುವಕ ಲೋಕಲ್ ಟ್ರೇನು