ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ತುಳು ಸಿನಿಮಾ ದಾಖಲೆಗಳು

Share this post
  • ತುಳು ಚಲನಚಿತ್ರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೊದಲು ತೊಡಗಿಸಿಕೊಂಡವರು ಎಸ್.ಆರ್.ರಾಜನ್. ಅವರು ನಿರ್ಮಿಸಿ, ನಿರ್ದೇಶಿಸಿದ ಮೊದಲ ತುಳು ಸಿನಿಮಾ ‘ಎನ್ನತಂಗಡಿ’ 1971ರ ಫೆಬ್ರವರಿ 19ರಂದು ಬಿಡುಗಡೆಯಾಯ್ತು.
  • ‘ಎನ್ನತಂಗಡಿ’ ಚಿತ್ರಕ್ಕೆ ಮುನ್ನವೇ ಆರೂರು ಪಟ್ಟಾಭಿ ಅವರು ‘ದಾರೆದ ಬುಡೆದಿ’ ಸಿನಿಮಾ ನಿರ್ದೇಶನಕ್ಕೆ ತೊಡಗಿದ್ದರು. ಆದರೆ ಮೊದಲು ‘ಎನ್ನತಂಗಡಿ’ ಬಿಡುಗಡೆಯಾಯ್ತು. ‘ದಾರೆದ ಬುಡೆದಿ’ ಚಿತ್ರದೊಂದಿಗೆ ತುಳು ರಂಗಭೂಮಿಯಲ್ಲಿ ಖ್ಯಾತನಾಮರಾಗಿದ್ದ ಕೆ.ಎನ್‌.ಟೈಲರ್ ಬೆಳ್ಳಿತೆರೆ ಪ್ರವೇಶಿಸಿದರು.
  • ರಾಜ್ಯ ಪ್ರಶಸ್ತಿ ಪಡೆದ ಮೊದಲ ತುಳು ಸಿನಿಮಾ `ಬಿಸತ್ತಿ ಬಾಬು’ (1972). ಕೆ.ಎನ್‌.ಟೈಲರ್‌ ಚಿತ್ರಕಥೆ, ಸಂಭಾ‍ಷಣೆ, ಗೀತೆಗಳನ್ನು ರಚಿಸಿ ಚಿತ್ರದಲ್ಲಿ ನಟಿಸಿದ್ದರು. ಆರೂರು ಪಟ್ಟಾಭಿ ನಿರ್ದೇಶನದ ಸಿನಿಮಾ ರಾಜ್ಯ ಸರ್ಕಾರದಿಂದ ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದು ತುಳು ಸಿನಿಮಾರಂಗದಲ್ಲಿ ಹೊಸ ಅಧ್ಯಾಯ ಬರೆಯಿತು.
  • ಮೊದಲ ಚಾರಿತ್ರಿಕ ತುಳು ಸಿನಿಮಾ `ಕೋಟಿ ಚೆನ್ನಯ’ 1973, ಮಾರ್ಚ್‌ 15ರಂದು ತೆರೆಕಂಡಿತು. ತುಳುನಾಡಿನ ವೀರಪುರುಷರ ಕತೆಯ ಈ ಚಿತ್ರದ ನಿರ್ದೇಶಕರು ವಿಶುಕುಮಾರ್. ಈ ಸಿನಿಮಾ 125 ದಿನಗಳ ದಾಖಲೆ ಪ್ರದರ್ಶನ ಕಂಡಿತು.
  • ಜಯಮಾಲಾ ನಟಿಸಿದ ಮೊದಲ ತುಳು ಸಿನಿಮಾ `ಕಾಸ್ ದಾಯೆ ಕಂಡಿನೆ’. 1974ರಲ್ಲಿ ತೆರೆಕಂಡ ‘ಏರ್‌ ಮಲ್ತಿನ ತಪ್ಪು’ ಚಿತ್ರದೊಂದಿಗೆ ಕೆ.ಎನ್‌.ಟೈಲರ್ ನಿರ್ದೇಶಕರಾದರು.
  • ಮೊದಲ ತುಳು ಕಲರ್ ಸಿನಿಮಾ ಆರೂರು ಪಟ್ಟಾಭಿ ನಿರ್ದೇಶನದ `ಕರಿಯಾಣಿ ಕಟ್ಟಂದಿ ಕಂಡನೆ’ (1978). ಆರೂರು ಪಟ್ಟಾಭಿ ನಿರ್ದೇಶನದ ಕೊನೆಯ ಸಿನಿಮಾ ‘ಸತ್ಯ ಓಲುಂಡು’ (1990). ಅತಿ ಹೆಚ್ಚು ಹತ್ತು ತುಳು ಚಿತ್ರ ನಿರ್ದೇಶಿಸಿದ ಹೆಗ್ಗಳಿಕೆ ಆರೂರು ಪಟ್ಟಾಭಿ ಅವರಿಗೆ ಸಲ್ಲುತ್ತದೆ.
  • ಡಾ.ರಿಚರ್ಡ್ ಕ್ಯಾಸ್ಟಲಿನೋ ನಿರ್ಮಾಣ, ನಿರ್ದೇಶನದ `ಬಂಗಾರ್ ಪಟ್ಲೇರ್’ ಮೊತ್ತಮೊದಲ ಸಿನಿಮಾಸ್ಕೋಪ್‌ ತುಳು ಸಿನಿಮಾ. ಇದು ಅತ್ಯಂತ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಚಿತ್ರವೂ ಹೌದು. ಮುಂದೆ ರಿಚರ್ಡ್‌ ಕ್ಯಾಸ್ಟಲಿನೋ ‘ಸೆಪ್ಟೆಂಬರ್‌ 8’ ಚಿತ್ರವನ್ನು 24 ಗಂಟೆಗಳಲ್ಲಿ ಚಿತ್ರಿಸಿ ದಾಖಲೆ ಮಾಡಿದರು. ಈ ಚಿತ್ರದಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಶಿವರಾಮ ಕಾರಂತರು ನಟಿಸಿದ್ದು ವಿಶೇಷ.
  • ಕೋಡ್ಲು ರಾಮಕೃಷ್ಣ ನಿರ್ದೇಶನದ ‘ತುಡರ್‌’ ರಾಜ್ಯಸರ್ಕಾರದ 2000-2001ನೇ ಸಾಲಿನ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿಗೆ ಪಾತ್ರವಾಯ್ತು.
  • ಅತ್ಯುತ್ತಮ ಪ್ರಾದೇಷಿಕ ಸಿನಿಮಾ ರಾಷ್ಟ್ರಪ್ರಶಸ್ತಿ ಪಡೆದ ತುಳು ಸಿನಿಮಾಗಳು – ಬಂಗಾರ್ ಪಟ್ಲೇರ್‌ (1993), ಕೋಟಿ ಚೆನ್ನಯ (2007), ಗಗ್ಗರ (2008), ಮದಿಪು (2016), ಪಡ್ಡಾಯಿ (2017)

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ