ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಅಜಯ್‌ ರಾವ್‌ ‘ಪಾರ್ಟ್ನರ್’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ

ಪೋಸ್ಟ್ ಶೇರ್ ಮಾಡಿ
ಅಜಯ್‌ ರಾವ್‌ 'ಪಾರ್ಟ್ನರ್' ಸಿನಿಮಾದ ಫಸ್ಟ್ ಲುಕ್ ಬಿಡುಗಡೆ

ಅಜಯ್‌ ರಾವ್‌ ಮತ್ತು ಬೃಂದಾ ಆಚಾರ್ಯ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ಪಾರ್ಟ್ನರ್‌’ ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಈ ರೋಮ್ಯಾಂಟಿಕ್‌ – ಕಾಮಿಡಿ – ಎಮೋಷನ್‌ ಜಾನರ್‌ ಚಿತ್ರವನ್ನು ಶಿವತೇಜಸ್‌ ನಿರ್ದೇಶಿಸುತ್ತಿದ್ದಾರೆ.

ಈ ಹಿಂದೆ ಮಳೆ, ಧೈರ್ಯಂ, ದಿಲ್ ಪಸಂದ್ ನಂಥ ವಿಭಿನ್ನ ಚಿತ್ರಗಳನ್ನು ನಿರ್ದೇಶಿಸಿ ಗುರುತಿಸಿಕೊಂಡಿದ್ದ ಶಿವತೇಜಸ್ ಇದೀಗ ಮತ್ತೊಂದು ಚಿತ್ರವನ್ನು ಕನ್ನಡಿಗರ ಮಡಿಲಿಗೆ ಹಾಕಲು ಸಿದ್ದತೆ ನಡೆಸಿದ್ದಾರೆ. ಆ ಚಿತ್ರದ ಹೆಸರು ‘ಪಾರ್ಟ್ನರ್‌’. ‘ಈಗಿನ ಜನರೇಶನ್ ನಲ್ಲಿ ಲವ್, ಬ್ರೇಕಪ್, ಲಿವಿಂಗ್ ಟುಗೆದರ್ ಇದೆಲ್ಲ ಕಾಮನ್ ಆಗಿಬಿಟ್ಟಿದೆ. ಇಂಥದ್ದೆಲ್ಲ ಇಟ್ಟುಕೊಂಡು ಇದಲ್ಲ ಜೀವನ, ಅದು ಬೇರೇನೇ ಇದೆ, ಪಾರ್ಟ್ನರ್‌ ಅಂದ್ರೆ ಜೀವನಪೂರ್ತಿ ನಂಬಿಕೆ ಇಟ್ಟುಕೊಂಡು ಜತೆಗಿರುವಂಥ ಜೀವನ ಸಂಗಾತಿ. ನಮ್ಮ ಮೇಲೆ ನಂಬಿಕೆ ಇರುವ ಪಾರ್ಟ್ನರ್‌ ಇರಬೇಕು’ ಎನ್ನುವ ಎಳೆಯೊಂದಿಗೆ ಈ ಸಿನಿಮಾ ಮಾಡುತ್ತಿದ್ದೇವೆ ಎನ್ನುತ್ತಾರೆ ನಿರ್ದೇಶಕ ಶಿವತೇಜಸ್.

‘ಇದು ರೊಮ್ಯಾಂಟಿಕ್‌ – ಕಾಮಿಡಿ ಜೊತೆ ಎಮೋಷನಲ್‌ ಜಾನರ್‌ ಕೂಡ ಹೌದು. ಕೃಷ್ಣ ಅಜೇಯ್ ರಾವ್ ಹಾಗೂ ಬೃಂದಾ ಆಚಾರ್ಯ ನಾಯಕ, ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಈ ಚಿತ್ರವನ್ನು ಹೆಚ್.ಪಿ.ಆರ್. ಎಂಟರ್ ಪ್ರೈಸಸ್ ಬ್ಯಾನರ್ ಅಡಿ ಹರೀಶ್ ದೇವಿತಂದ್ರೆ ನಿರ್ಮಿಸಿದ್ದಾರೆ. ಸುಜ್ಞಾನ್ ಅವರ ಛಾಯಾಗ್ರಹಣ, ನಕುಲ್ ಅಭಯಂಕರ್ ಅವರ ಸಂಗೀತ ಸಂಯೋಜನೆ, ಕೆ.ಎಂ. ಪ್ರಕಾಶ್ ಸಂಕಲನ ಚಿತ್ರಕ್ಕಿದೆ‌. ಚಿತ್ರದಲ್ಲಿ 4 ಹಾಡುಗಳಿದ್ದು, ಕವಿರಾಜ್, ಪ್ರಮೋದ್ ಮರವಂತೆ, ನಾಗಾರ್ಜುನ. ಶರ್ಮಾ ಸಾಹಿತ್ಯ ರಚಿಸಿದ್ದಾರೆ.

ಈ ಬರಹಗಳನ್ನೂ ಓದಿ