(ಬರಹ: ಮೋಹನ್ ಬಾಬು ಬಿ.ಕೆ., ಸಿನಿಮಾ ಬರಹಗಾರ, ಚಿತ್ರಮಂದಿರ ಮಾಲೀಕರು)
ಯಾರಿಗೆಲ್ಲಾ ನೆನಪಿದೆ? ಆಗ ಥಿಯೇಟರ್‌ಗಳಲ್ಲಿ ಸಿನಿಮಾ ಆರಂಭಿಸುವುದಕ್ಕೂ ಮುನ್ನ ‘ಇಂಡಿಯನ್ ನ್ಯೂಸ್’ ಕಪ್ಪು- ಬಿಳುಪು ರೀಲನ್ನು ಪ್ರದರ್ಶಿಸುತ್ತಿದ್ದೆವು. ಆಗ ಟೀವಿ ಮಾಧ್ಯಮಗಳು ಇರಲಿಲ್ಲ. ದಿನಪತ್ರಿಕೆಗಳನ್ನು ಹೆಚ್ಚು ಜನರು ಓದುತ್ತಿರಲಿಲ್ಲ. ಆಗ ಹಲವು ಪ್ರಮುಖ ವಿಷಯ – ಘಟನೆಗಳನ್ನು ಆಧರಿಸಿ 10 ನಿಮಿಷದ ಒಂದು ಡಾಕ್ಯುಮೆಂಟರಿ ಪ್ರತಿ ತಿಂಗಳು ತಯಾರಾಗುತ್ತಿತ್ತು. ಅದನ್ನು ಇಡೀ ದೇಶದ ಎಲ್ಲಾ ಚಿತ್ರಮಂದಿರಗಳಲ್ಲಿ ಖಡ್ಡಾಯವಾಗಿ ಪ್ರದರ್ಶನ ಮಾಡಲೇಬೇಕಿತ್ತು. ಇದಕ್ಕಾಗಿ ಆಯಾ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಕಚೇರಿಯು ‘ವಾರ್ತಾ ಇಲಾಖಾ ಕಚೇರಿ’ ಎಂದು ಸ್ಥಾಪನೆ ಮಾಡಿತ್ತು. ಈಗಲೂ ಕೋರಮಂಗಲದಲ್ಲಿ ಕಚೇರಿ ಇದೆ. ಪ್ರತಿ ತಿಂಗಳು ನಾವು ಆ ಕಚೇರಿಗೆ ಇಂತಿಷ್ಟು ಹಣ ಸಂದಾಯ ಮಾಡಿ ವಾರಕ್ಕೊಮ್ಮೆ ನ್ಯೂಸ್ ರೀಲ್ ಬದಲಿಸಿ ತರಬೇಕಿತ್ತು. ಟೀವಿ ಬಂದ ಮೇಲೆ 15 ದಿನಕ್ಕೆ, ನಂತರ ತಿಂಗಳಿಗೊಮ್ಮೆ ಆಯ್ತು. ಪ್ರತಿ ವರ್ಷ ಚಿತ್ರಮಂದಿರಗಳ ಸನ್ನದು ನವೀಕರಣಕ್ಕೆ ಸುಮಾರು ಇಲಾಖೆಗಳ NOC ಕೊಡಬೇಕು. ಅದಕ್ಕೆ ಈ ಇಲಾಖೆಯ ಪತ್ರವೂ ಲಗತ್ತಿಸಬೇಕಿತ್ತು. ಈಗ ಸ್ಯಾಟಲೈಟ್ ಬಂದಿದೆ. ಎಲ್ಲವೂ ಮಾಯ. ಹೀಗೊಂದು ನೆನಪು ನಿಮ್ಮ ಮುಂದೆ…