ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಹಜಾಭಿನಯದ ನಟಿ ಜಯಾಬಾಧುರಿಗೆ 73

ನಟಿ
Share this post

ಹಿಂದಿ ಚಿತ್ರರಂಗ ಭಿನ್ನ ಕಥಾವಸ್ತು, ಪ್ರಯೋಗಕ್ಕೆ ತೆರೆದುಕೊಳ್ಳುತ್ತಿದ್ದ ಎಪ್ಪತ್ತರ ದಶಕದಲ್ಲಿ ಸಹಜಾಭಿನಯದ ಮೂಲಕ ತಮ್ಮದೇ ಆದ ಛಾಪು ಮೂಡಿಸಿದವರು ಜಯಾ ಬಾದುರಿ. ಸಂಕೋಚ, ಸ್ವಾಭಿಮಾನದ ಮಧ್ಯಮ ವರ್ಗದ ಹೆಣ್ಣುಮಗಳ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ತಲುಪಿದರು. ಚಿಕ್ಕ ವಯಸ್ಸಿನಲ್ಲೇ ನಾಯಕನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾದ ಜಯಾ ಹಿಂದಿ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರ ಹಲವಾರು ಚಿತ್ರಗಳು ಹಿಂದಿ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಮಧ್ಯಪ್ರದೇಶದ ಜಬಲ್‌ಪುರ್‌ನ ಬೆಂಗಾಲಿ ಕುಟುಂಬದಲ್ಲಿ ಜನಿಸಿದ (1948) ಜಯಾ ಅವರ ತಂದೆ ತರೂನ್ ಕುಮಾರ್ ಬಾದುರಿ ಮತ್ತು ತಾಯಿ ಇಂದಿರಾ ಬಾದುರಿ. ರಂಗಭೂಮಿ ಕಲಾವಿದರಾಗಿದ್ದ ತಂದೆ ಪತ್ರಕರ್ತ, ಲೇಖಕರಾಗಿಯೂ ಹೆಸರು ಮಾಡಿದ್ದವರು. ಭೋಪಾಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ ಜಯಾ ರಾಷ್ಟ್ರೀಯ ಮಟ್ಟದಲ್ಲಿ ಎನ್‌ಸಿಸಿ ಗೌರವಕ್ಕೆ ಪಾತ್ರರಾಗಿದ್ದ ವಿದ್ಯಾರ್ಥಿನಿ! ಸತ್ಯಜಿತ್ ರೇ ಅವರ ‘ಮಹಾನಗರ್’ ಬೆಂಗಾಲಿ ಚಿತ್ರದ ಪುಟ್ಟ ಪಾತ್ರದಲ್ಲಿ ನಟಿಸಿದಾಗ ಅವರಿಗೆ ಹದಿನೈದು ವರ್ಷವಷ್ಟೆ. ಮುಂದೆ ಪೋಷಕರ ಸಲಹೆ ಮೇರೆಗೆ ಪ್ರತಿಷ್ಠಿತ ಪುಣೆ ಫಿಲ್‌ಮ್‌ ಇನ್ಸ್‌ಟಿಟ್ಯೂಟ್ ವಿದ್ಯಾರ್ಥಿನಿಯಾಗಿ ಅಭಿನಯ ಹಾಗೂ ಸಿನಿಮಾದ ಇತರ ವಿಭಾಗಗಳಲ್ಲಿ ತರಬೇತಿ ಪಡೆದರು.

‘ಅನ್ನದಾತ’ (1972) ಹಿಂದಿ ಚಿತ್ರದಲ್ಲಿ

ಬಂಗಾರದ ಪದಕದೊಂದಿಗೆ ಪದವೀಧರೆಯಾದ ಅವರಿಗೆ ಹೃಷಿಕೇಶ್ ಮುಖರ್ಜಿ ನಿರ್ದೇಶನದ ‘ಗುಡ್ಡಿ’ (1971) ಚಿತ್ರದ ನಾಯಕಿಯಾಗುವ ಅವಕಾಶ ಸಿಕ್ಕಿತು. ಚೊಚ್ಚಲ ಚಿತ್ರದ ಯಶಸ್ಸಿನ ನಂತರ ಜಯಾ ಮುಂಬಯಿಯಲ್ಲಿ ನೆಲೆ ನಿಂತರು. ‘ಗುಡ್ಡಿ’ ಚಿತ್ರದ ಶಾಲಾ ವಿದ್ಯಾರ್ಥಿನಿ ಪಾತ್ರ ಅವರಿಗೊಂದು ಇಮೇಜ್ ಸೃಷ್ಟಿಸಿಕೊಟ್ಟಿತು. ಈ ‘ಪಕ್ಕದ್ಮನೆ ಹುಡ್ಗಿ’ ಇಮೇಜ್ ಮುಂದೆ ಅವರ ವೃತ್ತಿ ಬದುಕಿನುದ್ದಕ್ಕೂ ನೆರಳಿನಂತೆ ಹಿಂಬಾಲಿಸಿದ್ದು ವಿಶೇಷ! ‘ಜವಾನಿ ದಿವಾನಿ’ (1972) ಚಿತ್ರದಲ್ಲಿ ಗ್ಲಾಮರಸ್ ನಟಿಯಾಗಿ, ‘ಅನಾಮಿಕಾ’ (1973) ಚಿತ್ರದಲ್ಲಿ ನೆಗೆಟಿವ್ ಛಾಯೆಗೆ ಒಡ್ಡಿಕೊಂಡರೂ ಅವರನ್ನು ಪ್ರೇಕ್ಷಕರು ಗುರುತಿಸಿದ್ದು ಮಾತ್ರ ಮಧ್ಯಮ ವರ್ಗದ ಕುಟುಂಬದ ಹೆಣ್ಣುಮಗಳ ಪಾತ್ರಗಳಲ್ಲಿ. ಗುಲ್ಜಾರ್, ಬಸು ಚಟರ್ಜಿ, ಹೃಷಿಕೇಶ್ ಮುಖರ್ಜಿ ನಿರ್ದೇಶನದ ಚಿತ್ರಗಳು ಜಯಾಗೆ ಇಂತಹ ಅನೇಕ ಉತ್ತಮ ಪಾತ್ರಗಳನ್ನು ಸೃಷ್ಟಿಸಿಕೊಟ್ಟವು.

ಅಮಿತಾಭ್ ಬಚ್ಚನ್ ಅವರೊಂದಿಗೆ ಜಯಾ ನಟಿಸಿದ ಮೊದಲ ಸಿನಿಮಾ ‘ಬಾನ್ಸಿ ಬಿರ್ಜು’ (1972). ಆಗ ಸೋಲಿನ ಸುಳಿಗೆ ಸಿಲುಕಿದ್ದ ಅಮಿತಾಭ್ ಬಚ್ಚನ್ ಜತೆ ನಾಯಕಿಯಾಗಲು ಯಾರೂ ಒಪ್ಪದಿದ್ದಾಗ ಜಯಾ, ಬಚ್ಚನ್‌ಗೆ ಜೊತೆಯಾಗಿದ್ದರು. ಮುಂದೆ ಇವರಿಬ್ಬರ ಜೋಡಿಯ ‘ಜಂಜೀರ್’ (1973) ದೊಡ್ಡ ಯಶಸ್ಸು ಕಂಡಿತು. ತದನಂತರ ‘ಅಭಿಮಾನ್’, ‘ಚುಪ್ಕೆ ಚುಪ್ಕೆ’, ‘ಶೋಲೆ’ ಚಿತ್ರಗಳಲ್ಲಿ ಅಮಿತಾಭ್-ಜಯಾ ಪ್ರೇಕ್ಷಕರನ್ನು ಮೋಡಿ ಮಾಡಿದರು. ಅಮಿತಾಭ್ ಬಚ್ಚನ್‌ರನ್ನು ವರಿಸಿದ (1973) ನಂತರ ಜಯಾ ಸಂಸಾರದ ಜವಾಬ್ದಾರಿಯೂ ಹೆಗಲೇರಿತು.

‘ಗುಡ್ಡಿ’ ಚಿತ್ರದಲ್ಲಿ ಉತ್ಪಲ್ ದತ್ ಜೊತೆ

ಅವರು ನಾಯಕನಟಿಯಾಗಿ ನಟಿಸಿದ ಕೊನೆಯ ಸಿನಿಮಾ ‘ಸಿಲ್‌ಸಿಲಾ’ (1981). ಹದಿನೆಂಟು ವರ್ಷಗಳ ಸುದೀರ್ಘ ಅವಧಿಯ ನಂತರ ಗೋವಿಂದ ನಿಹಲಾನಿ ನಿರ್ದೇಶನದ ‘ಹಜಾರ್ ಚೌರಾಸಿ ಕಿ ಮಾ’ (1998) ಚಿತ್ರದೊಂದಿಗೆ ಜಯಾ ತೆರೆಗೆ ಮರಳಿದರು. ಮುಂದೆ ‘ಫಿಜಾ’ (2000) ಚಿತ್ರದ ಉತ್ತಮ ನಟನೆಗಾಗಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಫಿಲ್ಮ್‌ಫೇರ್‌ ಪುರಸ್ಕಾರ ಸಂದಿತು. ಆನಂತರ ‘ಕಭಿ ಖುಷಿ ಕಭಿ ಘಮ್’, ‘ಕಲ್ ಹೋ ನಾ ಹೋ’, ‘ಲಗಾ ಚುನಾರಿ ಮೇ ದಾಗ್’, ‘ದ್ರೋಣ’, ‘ಆಪ್‌ ಕೆ ಲಿಯೇ ಹಮ್‌’ ಸೇರಿದಂತೆ ಹಲವು ಚಿತ್ರಗಳಲ್ಲಿ ಜಯಾ ಅಭಿನಯಿಸಿದರು. 2016ರಲ್ಲಿ ತೆರೆಕಂಡ ‘ಕಿ ಅಂಡ್ ಕಾ’ ಹಿಂದಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ತಮ್ಮ ಸಿನಿಮಾ ಜೀವನದಲ್ಲಿ ಜಯಾ ಬಾದುರಿ ಎಂಟು ಬಾರಿ ಫಿಲ್ಮ್‌ಫೇರ್‌ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. 2007ರಲ್ಲಿ ಅವರಿಗೆ ಫಿಲ್ಮ್‌ಫೇರ್‌ ಜೀವಮಾನ ಸಾಧನೆ ಗೌರವ ಸಂದಿದೆ. ಪದ್ಮಶ್ರೀ (1992) ಸೇರಿದಂತೆ ಹತ್ತಾರು ಪ್ರಶಸ್ತಿ-ಪುರಸ್ಕಾರಗಳಿಗೆ ಜಯಾ ಪಾತ್ರರಾಗಿದ್ದಾರೆ. 2004ರಲ್ಲಿ ಅವರು ಮೊದಲ ಬಾರಿಗೆ ಸಮಾಜವಾದಿ ಪಕ್ಷದಿಂದ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾದರು. 2012ರಲ್ಲಿ ರಾಜ್ಯಸಭಾ ಸದಸ್ಯೆಯಾಗಿ ಮರುನಾಮಕರಣಗೊಂಡರು. 2018ರಲ್ಲಿ ನಾಲ್ಕನೇ ಬಾರಿ ಅವರು ರಾಜ್ಯಸಭೆಗೆ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಅಭಿಮಾನ್‌’ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಜೊತೆ

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ