ಭಾರತದ ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಹೆಸರಿನಲ್ಲಿ ಅಪರೂಪದ ದಾಖಲೆಗಳಿವೆ. ಇಂದು (ಜೂನ್ 2) ಅವರು 78ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಎಪ್ಪತ್ತರ ದಶಕದಿಂದ ಇತ್ತೀಚಿನವರೆಗೂ ಅವರ ಸಂಯೋಜನೆಗಳು ಕನ್ನಡಿಗರ ಮನಗೆದ್ದಿವೆ. ಅವರ ಆಯ್ದ ಹತ್ತು ಜನಪ್ರಿಯ ಕನ್ನಡ ವಿಡಿಯೋ ಹಾಡುಗಳ ಗುಚ್ಛ ಇಲ್ಲಿದೆ.
ಭಾರತ ಮಾತ್ರವಲ್ಲ ಜಗತ್ತಿನ ಪ್ರತಿಷ್ಠಿತ ಸಂಗೀತ ಸಂಯೋಜಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಇಳಯರಾಜ. ಚಿಕ್ಕಂದಿನಲ್ಲಿ ಜನಪದ ಸಂಗೀತದೆಡೆ ಆಕರ್ಷಿತರಾದ ಇಳಯರಾಜ ಅವರಿಗೆ ಜನಪದ ಸಂಗೀತ ಭದ್ರ ಬುನಾದಿ ಹಾಕಿತು. ಕನ್ನಡದ ಖ್ಯಾತ ಸಂಗೀತ ಸಂಯೋಜಕ ಜಿ.ಕೆ.ವೆಂಕಟೇಶ್ ಅವರಲ್ಲಿ ಸಹಾಯಕನಾಗಿದ್ದ ಅವರು ಚಿಕ್ಕ ವಯಸ್ಸಿಗೇ ಸ್ವತಂತ್ರ ಸಂಗೀತ ಸಂಯೋಜಕನಾಗಿ ಹೆಸರು ಮಾಡಿದರು. ವಿವಿಧ ಭಾಷೆಗಳ ಸಾವಿರಕ್ಕೂ ಹೆಚ್ಚು ಸಿನಿಮಾಗಳಿಗೆ ಅವರು ಸಂಗೀತ ಸಂಯೋಜಿಸಿದ್ದಾರೆ. ಏಳು ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಸಂಗೀತ ಸಂಯೋಜಿಸಿರುವ ಇಳಯರಾಜ ಭಾರತದ ಶ್ರೇಷ್ಠ ಹಿನ್ನೆಲೆ ಸಂಗೀತಗಾರ ಎಂದು ಕರೆಸಿಕೊಳ್ಳುತ್ತಾರೆ. ಮೂರು ಬಾರಿ ಗೀತಸಂಗೀತಕ್ಕೆ, ಎರಡು ಬಾರಿ ಹಿನ್ನೆಲೆ ಸಂಗೀತ ಸಂಯೋಜನೆಗೆ ಅವರು ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿಷ್ಠಿತ ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳು ಸಂದಿವೆ.
ಗೀತೆ: ನಗುವ ನಯನ | ಸಿನಿಮಾ: ಪಲ್ಲವಿ ಅನುಪಲ್ಲವಿ (1983) | ಸಾಹಿತ್ಯ: ಅರ್ ಎನ್ ಜಯಗೋಪಾಲ್ | ಗಾಯನ: ಎಸ್ ಪಿ ಬಾಲಸುಬ್ರಹ್ಮಣ್ಯಂ, ಎಸ್ ಜಾನಕಿ
ಗೀತೆ: ಜೊತೆಯಲಿ ಜೊತೆಜೊತೆಯಲಿ | ಸಿನಿಮಾ: ಗೀತಾ (1981) | ಸಾಹಿತ್ಯ: ಚಿ ಉದಯಶಂಕರ್ | ಗಾಯನ: ಎಸ್ ಪಿ ಬಾಲಸುಬ್ರಹ್ಮಣ್ಯಂ, ಎಸ್ ಜಾನಕಿ
ಗೀತೆ: ನಗು ಎಂದಿದೆ | ಸಿನಿಮಾ: ಪಲ್ಲವಿ ಅನುಪಲ್ಲವಿ (1983) | ಸಾಹಿತ್ಯ: ಅರ್ ಎನ್ ಜಯಗೋಪಾಲ್ | ಗಾಯನ: ಎಸ್ ಜಾನಕಿ
ಗೀತೆ: ತಂಗಾಳಿಯಾಗಿ ನೀನು | ಸಿನಿಮಾ: ಜನ್ಮಜನ್ಮದ ಅನುಬಂಧ (1980) | ಸಾಹಿತ್ಯ: ಚಿ ಉದಯಶಂಕರ್ | ಗಾಯನ: ಎಸ್ ಜಾನಕಿ
ಗೀತೆ: ಅನುರಾಗ ಏನಾಯ್ತು | ಸಿನಿಮಾ: ನೀ ನನ್ನ ಗೆಲ್ಲಲಾರೆ (1981) | ಸಾಹಿತ್ಯ: ಚಿ ಉದಯಶಂಕರ್ | ಗಾಯನ: ರಾಜಕುಮಾರ್
ಗೀತೆ: ಹೀರೋ ಹೀರೋ | ಸಿನಿಮಾ: ಅಜೇಯ (1985) | ಸಾಹಿತ್ಯ: ಶ್ಯಾಂಸುಂದರ್ ಕುಲಕರ್ಣಿ | ಗಾಯನ: ಯೇಸುದಾಸ್
ಗೀತೆ: ಮುತ್ತು ಮುತ್ತು ನೀರ ಹನಿಯ | ಸಿನಿಮಾ: ನಮ್ಮೂರ ಮಂದಾರ ಹೂವೆ (1997) | ಸಾಹಿತ್ಯ: ಕೆ ಕಲ್ಯಾಣ್ | ಗಾಯನ: ಎಸ್ ಪಿ ಬಾಲಸುಬ್ರಹ್ಮಣ್ಯಂ, ಚಿತ್ರ
ಗೀತೆ: ಹೂಮಳೆ ಹೂಮಳೆ | ಸಿನಿಮಾ: ಹೂಮಳೆ (1998) | ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್ | ಗಾಯನ: ರಾಜಕುಮಾರ್
ಗೀತೆ: ನಾ ಕಾಣೋ ಲೋಕವನ್ನು | ಸಿನಿಮಾ: ನನ್ನ ಪ್ರೀತಿಯ ರಾಮು (2003) | ಸಾಹಿತ್ಯ: ಕೃಷ್ಣಪ್ರಿಯ | ಗಾಯನ: ಉದಿತ್ ನಾರಾಯಣ್
ಗೀತೆ: ಸಿಹಿ ಗಾಳಿ | ಸಿನಿಮಾ: ಆ ದಿನಗಳು (2007) | ಸಾಹಿತ್ಯ: ಕೆ ಕಲ್ಯಾಣ್ | ಗಾಯನ: ಇಳಯರಾಜ, ನಂದಿತಾ