ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನೈಟ್ ಎಫೆಕ್ಟ್ ಸೆರೆಹಿಡಿಯುವ ಸವಾಲು…

Share this post
ವೆಂಕಟೇಶ್ ನಾರಾಯಣಸ್ವಾಮಿ
ಸಿನಿಮಾ ಬರಹಗಾರ

ಕಡಿಮೆ ಬಜೆಟ್‌ ಸಿನಿಮಾಗಳಲ್ಲಿ ಚಿತ್ರಕಥೆ ಹಂತದಲ್ಲೇ ನೈಟ್ ಎಫೆಕ್ಟ್ ದೃಶ್ಯಗಳು ಬಾರದಂತೆ ನೋಡಿಕೊಳ್ಳುತ್ತಿದ್ದರು. ಒಂದೊಮ್ಮೆ ಕಡ್ಡಾಯವಾಗಿ ಚಿತ್ರೀಕರಿಸಲೇಬೇಕಾದ ದೃಶ್ಯಗಳಾದರೆ, ಅದಕ್ಕೆಂದೇ ಪ್ರತ್ಯೇಕವಾಗಿ ಫಿಲ್ಟರ್ ಬಳಕೆ ಮಾಡಿ ಚಿತ್ರಸಬೇಕಿತ್ತು. ಅದು ಕೂಡ ಅಷ್ಟು ಪರಿಣಾಮಕಾರಿಯಾಗಿ ಮೂಡಿಬರುತ್ತಿರಲಿಲ್ಲ.

ನಿನ್ನೆಯ ದಿನಗಳ ನೆಗೆಟಿವ್‌ ಸಿನಿಮಾ ತಯಾರಿಕೆಯಲ್ಲಿ ನೈಟ್ ಎಫೆಕ್ಟ್ ದೃಶ್ಯಗಳನ್ನು ಚಿತ್ರಿಸುವುದು ಕೊಂಚ ಪ್ರಯಾಸದಾಯಕ. ಈ ದೃಶ್ಯಗಳು ಪರಿಣಾಮಕಾರಿಯಾಗಿ ಬರಬೇಕೆಂದರೆ ಉತ್ತಮ ಲೈಟಿಂಗ್ ಮಾಡಬೇಕಾಗುತ್ತಿತ್ತು. ಇದಕ್ಕೆ ಹೆಚ್ಚಿನ ವೆಚ್ಚ ಭರಿಸಬೇಕಿತ್ತು. ಕಡಿಮೆ ಬಜೆಟ್‌ ಸಿನಿಮಾಗಳಲ್ಲಂತೂ ಚಿತ್ರಕಥೆ ಹಂತದಲ್ಲೇ ಇಂತಹ ದೃಶ್ಯಗಳು ಬಾರದಂತೆ ನೋಡಿಕೊಳ್ಳುತ್ತಿದ್ದರು. ಒಂದೊಮ್ಮೆ ಕಡ್ಡಾಯವಾಗಿ ಚಿತ್ರೀಕರಿಸಲೇಬೇಕಾದ ದೃಶ್ಯಗಳಾದರೆ, ಅದಕ್ಕೆಂದೇ ಪ್ರತ್ಯೇಕವಾಗಿ ಲಭ್ಯವಿದ್ದ wratten # 81 EF ಫಿಲ್ಟರ್ ಬಳಸಿ ಹಗಲಿನಲ್ಲೇ ಚಿತ್ರೀಕರಿಸಿ Day for night effect ಪಡೆಯಲಾಗುತ್ತಿತ್ತು. ಬಂಗಾರದ ಮನುಷ್ಯ, ಸೊಸೆ ತಂದ ಸೌಭಾಗ್ಯ, ಸಂಪತ್ತಿಗೆ ಸವಾಲ್… ಮುಂತಾದ ಅನೇಕ ಚಿತ್ರಗಳಲ್ಲಿ ಅಂತಹ ದೃಶ್ಯಗಳಿವೆ. ಆದರೆ ಅಲ್ಲಿಯೂ ಕೂಡ ಛಾಯಾಗ್ರಾಹಕನ ಪರಿಣತಿ ಮುಖ್ಯವಾಗಿರುತ್ತಿತ್ತು. ಕೆಲವು ಸಿನಿಮಾಗಳಲ್ಲಿ ಇಂತಹ ದೃಶ್ಯಗಳಲ್ಲಿನ ವೈಫಲ್ಯವೂ ಎದ್ದುಕಾಣುತ್ತದೆ.

ಇನ್ನೂ ಕೆಲವಾರು ನಿರ್ದೇಶಕರು ಅತೀ ಕಡಿಮೆ ವೆಚ್ಚದಲ್ಲೇ ರಾತ್ರಿ ಚಿತ್ರೀಕರಣಕ್ಕೆ ಏನೆಲ್ಲಾ ದಾರಿ ಇದೆ ಎಂದು ಯೋಚಿಸುತ್ತಿದ್ದರು. ಹಾಗೆ ಪ್ಲಾನ್ ಮಾಡಿ ಚಿತ್ರೀಕರಿಸಿರುವ ಹಾಡು ಇಲ್ಲಿದೆ ಗಮನಿಸಿ. ಶ್ರೀನಾಥ್‌ ಅವರು ನಿರ್ಮಿಸಿ, ನಟಿಸಿದ ‘ಶಿಕಾರಿ’ (1981) ಚಿತ್ರದ ಹಾಡಿದು. ಸಿ.ಆರ್.ಸಿಂಹ ನಿರ್ದೇಶನದ ಈ ಸಿನಿಮಾ ನಿರೀಕ್ಷಿತ ಗೆಲುವು ಕಾಣಲಿಲ್ಲ. ಶ್ಯಾಮ್ ಸುಂದರ್ ಕುಲಕರ್ಣಿ ರಚನೆಯ ಈ ಗೀತೆಗೆ ಇಳಯರಾಜ ಅವರ ಸಂಗೀತ ಸಂಯೋಜನೆ ಇದೆ. ಈ ಹಾಡಿನಲ್ಲಿ ಮುನ್ನಲೆಯಲ್ಲಿ ಲೈಟ್ ಇದ್ದು, ಹಿನ್ನೆಲೆಯಲ್ಲಿ ಗಾಢ ಕತ್ತಲೆ ಇದೆ. ಅಲ್ಲೇನೋ ಕೊರತೆ ಇದೆ ಎಂದು ಪ್ರೇಕ್ಷಕರಿಗೂ ತೋರುತ್ತದೆ. ಅಲ್ಲಿ ಲೈಟಿಂಗ್‌ ಇನ್ನೂ ಹೆಚ್ಚು ಸಮರ್ಪಕವಾಗಿ ಬಳಕೆ ಮಾಡಬೇಕಿತ್ತು. ಡಿಜಿಟಲ್‌ ಕ್ಯಾಮರಾಗಳು ಬಂದ ಮೇಲೆ ತಂತ್ರಜ್ಞರಿಗೆ ಇಂತಹ ಸಮಸ್ಯೆಗಳು ಎದುರಾಗಲಿಲ್ಲ.

‘ಶಿಕಾರಿ’ ಚಿತ್ರದ ಹಾಡು

ಹಿರಿಯ ಸಿನಿಮಾ ಛಾಯಾಗ್ರಾಹಕ ಬಿ.ಎಸ್‌.ಬಸವರಾಜು ಅವರ ಅಭಿಪ್ರಾಯ:

ರಾತ್ರಿ ದೃಶ್ಯಗಳನ್ನು ಹಗಲಿನಲ್ಲಿ ಚಿತ್ರಿಸಿದರೆ ರಿಚ್‌ನೆಸ್‌ ಸಿಗುವುದಿಲ್ಲ. ಸಾಮಾನ್ಯವಾಗಿ ನಾನು ನೈಟ್‌ ಎಫೆಕ್ಟ್‌ ದೃಶ್ಯಗಳನ್ನು ಹಗಲಿನಲ್ಲಿ ಚಿತ್ರಿಸುವುದನ್ನು ತಪ್ಪಿಸುತ್ತಿದ್ದೆ. ಈ ಬಗ್ಗೆ ಸೂಕ್ತ ಅರಿವಿದ್ದಾಗ ನಿರ್ದೇಶಕರು ಕೂಡ ಒತ್ತಾಯ ಮಾಡುವುದಿಲ್ಲ. ಸ್ಟುಡಿಯೋದಲ್ಲಾದರೆ ಹಗಲುಹೊತ್ತಿನ ಚಿತ್ರೀಕರಣದಲ್ಲಿ ನೈಟ್‌ ಎಫೆಕ್ಟ್ ಅನ್ನು ತರಲು ಶ್ರಮಿಸಬಹುದು. ಮನೆಗಳಲ್ಲಿ ಚಿತ್ರಿಸುವಾಗ ಸನ್‌ ಲೈಟ್ ಲೀಕ್ ಆಗಿ ಸೀನ್ ಹಾಳಾಗುತ್ತೆ. ಹೀಗೆ ನೆಗೆಟಿವ್‌ ಸಿನಿಮಾ ತಯಾರಿಕೆಯಲ್ಲಿ ಸಾಕಷ್ಟು ಸವಾಲುಗಳಿದ್ದವು. ತಂತ್ರಜ್ಞರ ಅನುಭವ ಮತ್ತು ಪರಿಣತಿ ಆಗ ಬಹುಮುಖ್ಯವಾಗುತ್ತಿತ್ತು. ನಿರ್ಮಾಪಕರು, ನಿರ್ದೇಶಕರು ಹಾಗೂ ತಂತ್ರಜ್ಞರ ಸೂಕ್ತ ಹೊಂದಾಣಿಕೆ ಇದ್ದಾಗ ಎಲ್ಲವೂ ಸರಾಗವಾಗಿ ನಡೆಯುತ್ತಿತ್ತು. ನಾನು ಗಮನಿಸಿದಂತೆ ನಿರ್ದೇಶಕರು ಪುಟ್ಟಣ್ಣ ಕಣಗಾಲ್‌ ಅವರು ಯಾವುದೇ ರೀತಿ ಕಾಂಪ್ರಮೈಸ್ ಆಗುತ್ತಿರಲಿಲ್ಲ. ರಾತ್ರಿ ದೃಶ್ಯಗಳನ್ನು ಹಗಲು ಚಿತ್ರಿಸುವುದನ್ನು ಸ್ವತಃ ಅವರೇ ಒಪ್ಪುತ್ತಿರಲಿಲ್ಲ. ದೃಶ್ಯಗಳು ನಿಖರವಾಗಿ ಹೀಗೇ ಇರಬೇಕೆಂದು ಅವರು ಅಪೇಕ್ಷಿಸುತ್ತಿದ್ದರು. ಹೀಗಾಗಿ ಅವರ ಸಿನಿಮಾ ಸೀನ್‌ಗಳು ಕಣ್ಣಿಗೆ ಕಟ್ಟಿದಂತಿರುತ್ತವೆ.

ಛಾಯಾಗ್ರಾಹಕ ಬಿ.ಎಸ್.ಬಸವರಾಜು

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ