ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಜನ್ಮಜನ್ಮದ ಅನುಬಂಧ

ಪೋಸ್ಟ್ ಶೇರ್ ಮಾಡಿ
ರೇಣುಕಾ ಚಿತ್ರದುರ್ಗ

1980ನೇ ಇಸವಿ.. ಈ ಸಿನಿಮಾದ ಕಥೆಯ ಗಂಧಗಾಳಿ ಗೊತ್ತಿಲ್ಲದ ಪ್ರೇಕ್ಷಕ ಮೊದಲ ದಿನ ಸಿನಿಮಾ ಹಾಲ್‌ನಲ್ಲಿ ಕೂತು ಸಿನಿಮಾ ನೋಡಿದಾಗ ಎಂಥಾ ಅನುಭವ ಕೊಟ್ಟಿರಬಹುದು! ಅದೆಂಥ ರೋಮಾಂಚಕತೆ ಕೊಟ್ಟಿರಬಹುದು ಅಂತ ನಾನು ಕಲ್ಪನೆ ಮಾಡ್ತೀನಿ.

ಟೀವಿಯಲ್ಲಿ ‘ಯಾವಶಿಲ್ಪಿ ಕಂಡ ಕನಸು ನೀನು’ ಹಾಡು ಬರುತ್ತಾ ಇತ್ತು. ಅಲೆಗೂದಲ ಸುಂದರಾಂಗ ಅನಂತನಾಗ್‌ ಮತ್ತು ಜಯಮಾಲ ಹಾಡಿಗೆ ತಕ್ಕಂತೆ ಹಾವಭಾವಗಳಿಂದ ಸೆಳೆಯುತ್ತಿದ್ದರು. ಹಾಡು ನೋಡಿದ ಒಡನೇ ‘ಜನ್ಮಜನ್ಮದ ಅನುಬಂಧ’ ಈ ಸಿನಿಮಾವನ್ನು ಮತ್ತೆ ನೋಡಬೇಕು ಅನಿಸಿತು. ಅನಿಸಿದ ಮೇಲೆ ಮುಗೀತಲ್ಲ! ಸೀದಾ ಯೂಟ್ಯೂಬಿಗೆ ಹೋದದ್ದು, ಸರ್ಚೊತ್ತಿದ್ದು, ಸಿನಿಮಾ ನೋಡಿದ್ದು.

ಅಬ್ಬ! ಎಂತಹ ಮೇಕಿಂಗ್! ಈಗ ಬಿಡಿ ತರಹೇವಾರಿ ತಂತ್ರಗಳಿವೆ, ಗ್ರಾಫಿಕ್ಸ್ ಇದೆ, ಪ್ರೇಕ್ಷಕರರನ್ನುಮರುಳು ಮಾಡುವ ಸಾಧನಗಳು ತುಂಬಾ ಇವೆ. ಆದರೂ ಸಿನಿಮಾಗಳು ಪ್ರೇಕ್ಷಕನನ್ನು ಸಿನಿಮಾ ಹಾಲ್‌ಗೆ ತರುವಲ್ಲಿ ಸೋಲುತ್ತಿವೆ.

1980ನೇ ಇಸವಿ.. ಈ ಸಿನಿಮಾದ ಕಥೆಯ ಗಂಧಗಾಳಿ ಗೊತ್ತಿಲ್ಲದ ಪ್ರೇಕ್ಷಕ ಮೊದಲ ದಿನ ಸಿನಿಮಾ ಹಾಲ್‌ನಲ್ಲಿ ಕೂತು ಸಿನಿಮಾ ನೋಡಿದಾಗ ಎಂಥಾ ಅನುಭವ ಕೊಟ್ಟಿರಬಹುದು! ಅದೆಂಥ ರೋಮಾಂಚಕತೆ ಕೊಟ್ಟಿರಬಹುದು ಅಂತ ನಾನು ಕಲ್ಪನೆ ಮಾಡ್ತೀನಿ. ಆಗಿನ ಪ್ರೇಕ್ಷಕರಿಗೆ ಅತ್ಯದ್ಭುತ ಅನುಭವ ನೀಡಿದ ಈ ಪಿಚ್ಚರ್, ಈಗ ನೋಡುವವರಿಗೂ ಖಂಡಿತ ಅದೇ ಥ್ರಿಲ್ ನೀಡಬಲ್ಲದು. ನಾನಂತೂ ಇದನ್ನುಅನೇಕ ಬಾರಿ ಕಿರುತೆರೆಯಲ್ಲೇ ನೋಡಿ ಈ ಸಿನಿಮಾದ ಅಭಿಮಾನಿಯಾಗಿದ್ದೇನೆ.

ಅದ್ಭುತ ಹಿನ್ನೆಲೆ ಸಂಗೀತ, ಅಸಾಮಾನ್ಯಹಾಡುಗಳು, ಮುಂದೇನು ಎಂದು ಕುತೂಹಲ ಹುಟ್ಟಿಸುವ ಗಟ್ಟಿ ಕತೆ, ಕಲ್ಪನೆಗಳು, ಪುನರ್ಜನ್ಮವನ್ನು ನಂಬದ ವ್ಯಕ್ತಿಗೂ ಒಂದು ಕ್ಷಣ ನಂಬಿಕೆಯನ್ನು ತರಿಸಿಬಿಡುತ್ತೆ. ಮೊದಲ ಬಾರಿ ನೋಡಿದಾಗಲೇ ನನಗೆ ತುಂಬಾ ಇಷ್ಟ ಆಗಿಬಿಡ್ತು. ಸಿನಿಮಾ ನೋಡುವ ಮುಂಚೆಯೇ ಈ ಹಾಡನ್ನು ರೇಡಿಯೋದಲ್ಲಿ ಪದೇ ಪದೇ ಕೇಳ್ತಾ ಇದ್ದೆ. ಆಕಾಶವಾಣಿಯವರಿಗೆ ದಿನಕ್ಕೆ ಒಂದು ಬಾರಿಯಾದರೂ ಈ ಹಾಡು ಪ್ರಸಾರ ಮಾಡದಿದ್ದರೆ ಸಮಾಧಾನ ಇರುತ್ತಾ ಇರಲಿಲ್ಲ.

ಅನಂತನಾಗ್, ಜಯಮಾಲಾ

ತಂಗಾಳಿಯಲ್ಲಿ ನಾನು ತೇಲಿಬಂದೆ,

ನಿನ್ನನ್ನುಪ್ರೀತಿಯಿಂದ ಸೇರಲೆಂದೆ,

ಓ ಇನಿಯಾ…

ಓ ಇನಿಯಾ… ನನ್ನನ್ನು ಸೇರಲು ಬಾ.. ಬಾ..

ಓ ಇನಿಯಾ.. ಅಂತ ಕೂಗಿದ ಒಡನೆ ಬರುವ ಆ ಸಂಗೀತಕ್ಕೆ ಎಷ್ಟು ಹೆದರಿಕೆ ಆಗ್ತಾ ಇತ್ತು ಅಂದ್ರೆ ಈ ಹಾಡು ಮತ್ತೆ ಜನ್ಮಜನ್ಮದ ಅನುಬಂಧ ಎನ್ನುವ ಭಯಂಕರ ಹೆಸರಿಗೆ ಹೆದರಿ ಸಿನಿಮಾ ನೋಡುವ ದೈರ್ಯ ಮಾಡಿರಲಿಲ್ಲ. ಉದಯಮೂವಿಯಲ್ಲಿ ಸಿನಿಮಾ ಬಂದಾಗಲೇ (ಅದೂ ಮದ್ಯಾಹ್ನದ ಹೊತ್ತು) ನೋಡಿದ್ದು.

ಅನಂತನಾಗ್ ಚಿಕ್ಕಹುಡುಗನಾಗಿದ್ದಾಗಲೇ ವಿಚಿತ್ರ ಆಡುತ್ತಾನೆ. ಮತ್ತು ಅವರ ದೊಡ್ಡಪ್ಪನ ಪಾತ್ರ ಮಾಡಿರುವ ಕೆ.ಎಸ್.ಅಶ್ವಥ್ ಅಂತೂ ಹೆದರಿಸಿಯೇ ಬಿಡುತ್ತಾರೆ. ಮಾನಸಿಕ ಅಸ್ವಸ್ಥನ ಪಾತ್ರ ಮಾಡಿರುವ ಅವರು ದಪ್ಪ ಗುಡ್ದೆಕಣ್ಣುಗಳು, ಹುಬ್ಬಲ್ಲು, ಕೆದರಿದ ಕರಿಬಿಳಿ ಕೂದಲು, ಮಾಸಿದ ಬನಿಯನ್ನು ಮತ್ತು ಪಂಚೆ, ಸದಾ ಬಾಯಿ ಬಿಟ್ಟುಕೊಂಡು ಹೆಂಗೆ ಬೇಕೋ ಹಂಗೆತಿನ್ನುತ್ತ ನೈಜವಾಗಿ ಅಭಿನಯಿಸಿದ್ದಾರೆ. ಇವರ ಮನೇಲಿ ಯಾಕೆ ಎಲ್ಲಾ ಹಿಂಗಾಡುತ್ತಾರೆಂದು ಪ್ರೇಕ್ಷಕಕು ತೂಹಲವನ್ನು ಹಿಡಿದಿಟ್ಟು ಕೊಳ್ಳುತ್ತಾ ಹೋಗುವಂತೆ ಮಾಡ್ತಾರೆ.

ಸಿನಿಮಾ ನೋಡುವಾಗ ಅಶ್ವಥ್ ಅವರ ಪಾತ್ರದ ಅವಶ್ಯಕತೆಇತ್ತೇ!! ಅನಿಸಿತು. ಅವರ ಪಾತ್ರವಿಲ್ಲದೆಯೂ ಕತೆ ಮುಂದುವರೆಯುತ್ತಿತ್ತು. ಆದರೆ ಈ ಸಿನಿಮಾದ ಹೆಸರು ಎಲ್ಲಿ ಕಣ್ಣಿಗೆ ಬಿದ್ದರು ಮೊದಲು ಮನಸಲ್ಲಿ ಮೂಡೋದು ಅಶ್ವಥ್ ಅವರ ಪಾತ್ರವೇ! ಓಹೋ ಈ ಪಾತ್ರ ಯಾಕೆ ಬಂತು ಎಂಬುದು ಆಗ ಹೊಳೆಯಿತು. ಆ ಪಾತ್ರವನ್ನು ಸೇರಿಸಬೇಕು ಅನಿಸಿದ ಕಥೆಗಾರರ ನಿಲುವಿನ ಬಗೆಗೆ ನನಗೆ ಯಾವಾಗಲೂ ಆಶ್ಚರ್ಯ ಮತ್ತು ಮೆಚ್ಚುಗೆ ಮೂಡುತ್ತದೆ. ಅಷ್ಟಕ್ಕೂ ನಮ್ಮ ಶಂಕರಣ್ಣ (ಶಂಕರ್ ನಾಗ್) ಕತೆ, ಚಿತ್ರಕತೆ, ನಿರ್ದೇಶನ ಮಾಡಿದ ಮೇಲೆ ಕತೆ ಸುಂದರವಲ್ಲದೆ ಇರಲು ಸಾಧ್ಯವೇ!!

ಕೆ.ಎಸ್‌.ಅಶ್ವಥ್‌

ಮೊದಲಿಂದ ಕೊನೆಯವರೆಗೆ ಸಿನಿಮಾ ನೋಡಿಸಿಕೊಳ್ಳುತ್ತದೆ. ಅನಂತನಾಗ್ರ ಹಾರಾಡುವ ಜೊಂಪೆ ಕೂದಲು, ಚಡಪಡಿಕೆಯ ಅಭಿನಯ, ಜಯಂತಿಯ ಗಂಭೀರ ನಟನೆ, ಶಂಕರ್‌ನಾಗ್‌ರ ಲವಲವಿಕೆ, ಜಯಮಾಲಾಳ ಸೌಂದರ್ಯ, ಸುಂದರಕೃಷ್ಣ ಅರಸರ ಶೀತಲ ನಗು ಮತ್ತು ರುಧ್ರನೋಟ, ಪ್ರಭಾಕರ್, ಮುಸುರಿ, ಆದವಾನಿ ಲಕ್ಷ್ಮಿದೇವಿ ಇವರೆಲ್ಲರ ಅಭಿನಯ ನಿಮ್ಮ ಕಣ್ಣುಗಳನ್ನು ಅತ್ತಿತ್ತ ಹೋಗಲು ಬಿಡುವುದಿಲ್ಲ.

ನಾನು ಸಿನಿಮಾದ ಕತೆ ಹೇಳುವುದಿಲ್ಲ. ಕತೆ ಹೇಳಿದರೆ ಸಿನಿಮಾ ನೋಡುವಿಕೆಗೆ ಸ್ವಾರಸ್ಯ ಇರುವುದಿಲ್ಲ. ಇದು ಜನ್ಮಾಂತರದ ಕಥೆ ಅಷ್ಟು ಹೇಳಬಲ್ಲೆ. ಪ್ರಸ್ತುತಕ್ಕೇನೂ ಹೋಲಿಕೆ ಮಾಡದೆ, ನಿಜ ಸುಳ್ಳು ಇವನ್ನೆಲ್ಲ ಲೆಕ್ಕಕ್ಕೆ ತಾರದೆ, ಭ್ರಮಾಲೋಕದಲ್ಲಿ ವಿಹರಿಸುತ್ತ ಸಿನಿಮಾ ನೋಡಲು ಅಡ್ಡಿಯಿಲ್ಲ. ಒಬ್ಬಪ್ರಾಮಾಣಿಕ, ದುಡಿದು ತಿನ್ನುವ ವ್ಯಕ್ತಿಗೆ, ಆತನ ಪ್ರೀತಿಗೆ ಅನ್ಯಾಯ ಮಾಡಬಾರದು ಎಂಬುದು ಸಿನಿಮಾದ ನೀತಿ.

ರೂಮಲ್ಲಿ ಒಬ್ಬರೇ ಕೂತು, ಕಿವಿಗೆ ಇಯರ್‌ ಫೋನ್‌ ಸಿಕ್ಕಿಸಿ ಹಿನ್ನೆಲೆ ಸಂಗೀತವನ್ನು ಆಸ್ವಾದಿಸುತ್ತ ನೋಡಿ. ಇಳಯರಾಜ ಸಂಗೀತ, ಶಂಕರ್‌ನಾಗ್‌ ನಿರ್ದೇಶನ ನಿಮ್ಮನ್ನು ಎರಡು ಗಂಟೆಗೂ ಮೇಲ್ಪಟ್ಟು ಮಿಸುಕಾಡಿಸದೆ ಕೂರಿಸುತ್ತದೆ. ಹಾಡುಗಳಂತೂ ಒಂದಕ್ಕಿಂತ ಒಂದು ಚೆನ್ನ. ಯಾವ ಶಿಲ್ಪಿ ಕಡೆದ ಶಿಲ್ಪನೀನು, ತಂಗಾಳಿಯಾಗಿ ನಾನು ತೇಲಿಬಂದೆ, ಆಕಾಶದಿಂದ ಜಾರಿ ಭೂಮಿಗೆ ಬಂದ ನೋಡಿ, ಮಿನುಗುವ ತಾರೆಯ ಸಡಗರ ನೋಡು, ಗಂಡಾಗಿ ನೀನು ಹುಟ್ಟಿಬಂದ ಮೇಲೆ… ಟಿವಿಯಲ್ಲಿ ಯಾವಾಗ ಪ್ರಸಾರವಾದರೂ ಮತ್ತೆ ನೋಡಲು ಬೋರ್ ಹೊಡೆಸದ ಸಿನಿಮಾ. ಪ್ರತಿ ಬಾರಿ ನೋಡಿದಾಗಲೂ ಮೇಲುಕೋಟೆಯ ಆ ಎರಡು ಸ್ಥಂಭಗಳು ಅದೆಷ್ಟು ಸಿನಿಮಾ ಕತೆಯನ್ನು ಜನರಿಂದ ಎಣೆಸುತ್ತವೆ ಎಂದು ಆಶ್ಚರ್ಯ ಮೂಡುತ್ತದೆ.

ಈ ಬರಹಗಳನ್ನೂ ಓದಿ