ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

‘ದೇವಿ ಮಹಾತ್ಮೆ’ ಪ್ರಪಂಚ ಪರಿಚಯಿಸಿದ ನಾಗರಾಜ್ ಸೋಮಯಾಜಿ

ಪೋಸ್ಟ್ ಶೇರ್ ಮಾಡಿ
'ದೇವಿ ಮಹಾತ್ಮೆ' ಪ್ರಪಂಚ ಪರಿಚಯಿಸಿದ ನಾಗರಾಜ್ ಸೋಮಯಾಜಿ

ರಂಗಾಯಣ ರಘು ನಟನೆಯ ‘ದೇವಿ ಮಹಾತ್ಮೆ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ನಾಗರಾಜ್‌ ಸೋಮಯಾಜಿ ನಿರ್ದೇಶನದ ಚಿತ್ರವಿದು. ಒಂದು ನಿಮಿಷ ಐದು ಸೆಕೆಂಡ್‌ಗಳ ಟೀಸರ್‌ ಥ್ರಿಲ್ಲಿಂಗ್‌ ಮತ್ತು ಸಸ್ಪೆನ್ಸ್‌ ಅಂಶಗಳಿಂದ ಕೂಡಿದೆ.

ಕನ್ನಡ ಚಿತ್ರರಂಗ ಅತ್ಯದ್ಭುತ ಕಲಾವಿದರಲ್ಲಿ ರಂಗಾಯಣ ರಘು ಕೂಡ ಒಬ್ಬರು. ಅವರ ಅಭಿನಯದ ಬಗ್ಗೆ ವಿವರಿಸುವ ಅಗತ್ಯವಿಲ್ಲ. ಯಾವುದೇ ಪಾತ್ರ ಕೊಟ್ಟರು ‌ಲೀಲಾಜಾಲವಾಗಿ ನಟಿಸುವ ರಂಗಾಯಣ ರಘು ಅವರಿಗೆ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. ಟೈಟಲ್ ಮೂಲಕ ನಿರೀಕ್ಷೆ ಹೆಚ್ಚು ಮಾಡಿರುವ ‘ದೇವಿ ಮಹಾತ್ಮೆ’ ಸಿನಿಮಾದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಕುತೂಹಲಕಾರಿ ಟೀಸರ್ ಹೊಂಬಾಳೆ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ನಿರ್ದೇಶಕ ನಾಗರಾಜ್ ಸೋಮಯಾಜಿ ‘ದೇವಿ ಮಹಾತ್ಮೆ’ ಚಿತ್ರದ ಮೂಲಕ ಒಂದೊಳ್ಳೆ ಕಥೆಯೊಂದನ್ನು ಹೊತ್ತು ತಂದಿದ್ದಾರೆ ಅನ್ನೋದು ಟೀಸರ್’ನಲ್ಲಿ ಗೊತ್ತಾಗ್ತಿದೆ.

ರಂಗಾಯಣ ರಘು ಅವರ ಅಭಿನಯ, ಸಮುದ್ರ ತೀರ, ಹುಲಿ ವೇಷ ಟೀಸರ್’ನ ಹೈಲೆಟ್. ರೋಚಕವಾಗಿ ಸಾಗುವ ಟೀಸರ್ ನಲ್ಲಿ ಲಿಕಿತ್ ಪ್ರಸಾದ್ ಶೆಟ್ಟಿ ಮ್ಯೂಸಿಕ್ ಗಮನ ಸೆಳೆಯುತ್ತಿದೆ. 1 ನಿಮಿಷ 5 ಸೆಕೆಂಡ್ ಇರುವ ಟೀಸರ್ ಥ್ರಿಲ್ಲಿಂಗ್ ಜೊತೆಗೆ ಸಸ್ಪೆನ್ಸ್ ಅಂಶಗಳಿಂದ ಕೂಡಿದೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ‌‌. ಉಳಿದಂತೆ ಪ್ರತಿಮಾ ನಾಯಕ್, ಸುಂದರ್ ವೀಣಾ, ಅರವಿಂದ್ ಕುಪ್ಳಿಕರ್, ಬಾಸುಮ ಕೊಡಗು, ನಾಗೇಂದ್ರ ಶಾ, ಪಿಡಿ ಸತೀಶ್ ಚಂದ್ರ, ಪ್ರಶಾಂತ್ ಹಿರೇಮಠ, ಆದಿತ್ಯ ರಾಜ್ ರಘು ಪಾಂಡೇಶ್ವರ, ಪಲ್ಲವಿ ಮಂಜುನಾಥ್, ಶೈಲಶ್ರೀ ಮೂಲ್ಕಿ, ಶ್ವೇತಾ ಶ್ರೀನಿವಾಸ, ಮಹಾದೇವ ಹಡಪದ್, ಆಸಿಫ್ ಕ್ಷತ್ರಿಯ ತಾರಾಬಳಗದಲ್ಲಿದ್ದಾರೆ.

ನಾಗರಾಜ್ ಸೋಮಯಾಜಿ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬರವಣಿಗೆಯಲ್ಲಿ ಅರವಿಂದ್ ಕುಪ್ಳೀಕರ್, ಭಾಸ್ಕರ್ ಬಂಗೇರ‌ ಹಾಗೂ ಗುರು ಆರ್ಯ ಹಾಗೂ ವಾದಿರಾಜ ಶೆಟ್ಟಿ ಜೊತೆಯಾಗಿದ್ದಾರೆ. ʻಯುವಿಜಿ ಸ್ಟುಡಿಯೋʼ ಬ್ಯಾನರ್‌ನಡಿ ವಿದ್ಯಾ ಗಾಂಧಿರಾಜನ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಗಾಂಧಿರಾಜನ್ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಒಂದೊಳ್ಳೆ ತಾಂತ್ರಿಕ ವರ್ಗ ಚಿತ್ರದಲ್ಲಿ ಕೆಲಸ ಮಾಡ್ತಿದ್ದು, ಎಸ್‌ಕೆ ರಾವ್ ಛಾಯಾಗ್ರಹಣ ಹಾಗೂ ಲಿಕಿತ್ ಪ್ರಸಾದ್ ಕೆ ಶೆಟ್ಟಿ ಸಂಗೀತ ನಿರ್ದೇಶನ, ಉಜ್ವಲ್ ಚಂದ್ರ ಸಂಕಲನ ‘ದೇವಿ ಮಹಾತ್ಮೆ’ ಸಿನಿಮಾಗಿದೆ.

ಈ ಬರಹಗಳನ್ನೂ ಓದಿ