ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

‘ಫೌಜಿ’ಯಾಗಿ ಅಖಾಡಕ್ಕಿಳಿದ ಪ್ರಭಾಸ್!

ಪೋಸ್ಟ್ ಶೇರ್ ಮಾಡಿ
'ಫೌಜಿ'ಯಾಗಿ ಅಖಾಡಕ್ಕಿಳಿದ ಪ್ರಭಾಸ್!

‘ಫೌಜಿ’ ಚಿತ್ರದ ದೇಶಭಕ್ತಿಯ ಹಿನ್ನೆಲೆಗೆ ಪ್ರಭಾಸ್‌ ಅವರ ಈ ಲುಕ್ ಕನೆಕ್ಟ್ ಆಗಿದೆ. ಬಾಹುಬಲಿ ಯುಗದ ನಂತರ ಮತ್ತೊಂದು ಯಶಸ್ಸಿನ ಮೈಲಿಗಲ್ಲು ಆರಂಭವಾಗುವುದರ ಮುನ್ಸೂಚನೆಯಿದು ಎನ್ನುತ್ತಿದ್ದಾರೆ ಅಭಿಮಾನಿಗಳು.

ಕಳೆದ 7 ವರ್ಷಗಳಿಂದ ಡಿಜಿಟಲ್ ಲೋಕದಲ್ಲಿ ತಮ್ಮ ಸಾಮ್ರಾಜ್ಯದ ಮುದ್ರೆಯಂತಿದ್ದ ‘ಬಾಹುಬಲಿ’ಯ ಐಕಾನಿಕ್ ಪ್ರೊಫೈಲ್ ಪಿಕ್ಚರ್ ಅನ್ನು ಅಂತಿಮವಾಗಿ ಬದಲಾಯಿಸುವ ಮೂಲಕ ಪ್ರಭಾಸ್ ಹೊಸ ಇತಿಹಾಸಕ್ಕೆ ನಾಂದಿ ಹಾಡಿದ್ದಾರೆ! ಮುಂಬರುವ ಬಹುನಿರೀಕ್ಷಿತ ‘ಫೌಜಿ’ ಚಿತ್ರದ ರಗಡ್ ಮತ್ತು ಪವರ್‌ಫುಲ್ ಹೊಸ ಲುಕ್‌ನೊಂದಿಗೆ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ಗಳನ್ನು ರಿಫ್ರೆಶ್ ಮಾಡಿದ್ದು, ಕ್ಷಣಮಾತ್ರದಲ್ಲಿ ಇಂಟರ್ನೆಟ್ ಜಗತ್ತಿನಲ್ಲಿ ಬಿರುಗಾಳಿ ಎದ್ದಿದೆ.

ಅದರಲ್ಲೂ ಸ್ವಾತಂತ್ರ್ಯ ಮಾಸದ ಆರಂಭದಲ್ಲೇ ಈ ಬಿಗ್ ಅಪ್‌ಡೇಟ್ ಹೊರಬಂದಿರುವುದು ಸಿನಿಪ್ರಿಯರ ರೋಮಾಂಚನವನ್ನು ಡಬಲ್ ಮಾಡಿದೆ. ‘ಫೌಜಿ’ ಚಿತ್ರದ ದೇಶಭಕ್ತಿಯ ಹಿನ್ನೆಲೆಗೆ ಈ ಲುಕ್ ಅಚ್ಚುಕಟ್ಟಾಗಿ ಕನೆಕ್ಟ್ ಆಗಿದ್ದು, ಇದು ಕೇವಲ ಪ್ರೊಫೈಲ್ ಬದಲಾವಣೆ ಅಲ್ಲ… ಬಾಹುಬಲಿ ಯುಗದ ನಂತರ ಮತ್ತೊಂದು ಬ್ರಹ್ಮಾಂಡ ಯಶಸ್ಸಿನ ಮೈಲಿಗಲ್ಲು ಆರಂಭವಾಗುವುದರ ಸ್ಪಷ್ಟ ಮುನ್ಸೂಚನೆ ಎಂದು ಕೋಟ್ಯಂತರ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

ಪ್ರಭಾಸ್ ಅವರ ಈ ಕಿಲ್ಲರ್ ಲುಕ್ ನೋಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಬ್ಬದ ವಾತಾವರಣ ಸೃಷ್ಟಿಸಿದ್ದಾರೆ. ‘ಫೌಜಿ’ ಸಿನಿಮಾದ ಮೇಕಿಂಗ್, ಸ್ಕೇಲ್ ಮತ್ತು ಪ್ರಭಾಸ್ ಅವರ ಈ ಮಾಸ್ ಡೆಫಿನೇಷನ್ ಯಾವ ಮಟ್ಟಿಗಿರಲಿದೆ ಎಂಬುದಕ್ಕೆ ಈ ಡಿಪಿಯೇ ಸಾಕ್ಷಿ ಎಂದು ಗಾಸಿಪ್ ಗಲ್ಲಿಯಿಂದ ಹಿಡಿದು ದೊಡ್ಡ ದೊಡ್ಡ ಟ್ರೇಡ್ ಅನಲಿಸ್ಟ್‌ಗಳವರೆಗೆ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಪ್ರಪಂಚದಾದ್ಯಂತ ಇರುವ ಕೋಟ್ಯಂತರ ಫ್ಯಾನ್ಸ್‌ಗೆ ಎಂದೆಂದಿಗೂ ನಂಬರ್ ಒನ್ ಹೀರೊ ಆಗಿರುವ ಪ್ರಭಾಸ್, ಈಗ ‘ಫೌಜಿ’ಯಾಗಿ ಕಣಕ್ಕಿಳಿಯಲು ಕೌಂಟ್‌ಡೌನ್ ಶುರು ಮಾಡಿದ್ದು, ಈ ಹೊಸ ಚಾಪ್ಟರ್ ಇಂಡಿಯನ್ ಸಿನಿಮಾರಂಗದ ಬಾಕ್ಸ್ ಆಫೀಸ್ ಲೆಕ್ಕಾಚಾರವನ್ನೇ ಬದಲಿಸುವುದು ಖಚಿತ!

ಈ ಬರಹಗಳನ್ನೂ ಓದಿ