(ಬರಹ : ಪ್ರಗತಿ ಅಶ್ವತ್ಥ ನಾರಾಯಣ, ಹಿರಿಯ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರು)
1976ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಪಲಿತಾಂಶ’ ಚಿತ್ರದ ಕೆಲವು ಸನ್ನಿವೇಶಗಳನ್ನು ಬೆಂಗಳೂರು ಚಾಮುಂಡೇಶ್ವರಿ ಸ್ಟೂಡಿಯೋದಲ್ಲಿ ಚಿತ್ರಿಸಲಾಗಿತ್ತು. ಈ ಚಿತ್ರದಲ್ಲಿ ಹಿಂದಿ ಚಿತ್ರರಂಗದ ಹೆಸರಾಂತ ನಟ ಅಮರೀಶ್ ಪುರಿ ಒಂದು ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಶೂಟಿಂಗ್ ಬಿಡುವಿನ ವೇಳೆಯಲ್ಲಿ ಸೆರೆಹಿಡಿದ ಈ ಫೋಟೋದಲ್ಲಿ ಕಲಾ ನಿರ್ದೇಶಕ ಚಲಂ, ನಟರಾದ ಅಮರೀಶ್ ಪುರಿ, ಜೈಜಗದೀಶ್, ಚಿತ್ರದ ನಿರ್ಮಾಪಕ ಮುಕುಂದ್ ಇದ್ದಾರೆ. ಮುಕುಂದ್ ಅವರು ನಟಿ ಆರತಿಯವರ ಹಿರಿಯ ಸಹೋದರ. ಇದು ನಟ ಜೈಜಗದೀಶ್ ಅವರ ಪ್ರಥಮ ಚಿತ್ರ.
ಬಿಜಾಪುರದ ಪ್ರಖ್ಯಾತ ಗೋಲ್‌ಗುಂಬಜ್‌ನ ಮೇಲು ಭಾಗದ ಸೆಟ್ ಹಾಕಿ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿತ್ತು. ಕನ್ನಡಿಗಳನ್ನು ಅಳವಡಿಸಿದ್ದ ಬಿಜಾಪುರ ಸುಲ್ತಾನರ ಅರಮನೆಯ ಸೆಟ್‌ನಲ್ಲಿ ನೃತ್ಯದ ಸನ್ನಿವೇಶಗಳನ್ನು ಚಿತ್ರಿಸಲಾಗಿತ್ತು. ಹಿಂದಿ ನಟಿ ಅರುಣಾ ಇರಾನಿ ನಟಿಸಿದ್ದರು. ಈ ಸಿನಿಮಾ ನಿರೀಕ್ಷಿತ ಗೆಲುವು ದಾಖಲಿಸಲಿಲ್ಲ. ದುರದೃಷ್ಟವತಾಶ್ ಚಿತ್ರದ ಪ್ರತಿಯೂ ಇಲ್ಲ. ಟಿವಿಯಲ್ಲಿ ಸಹ ಚಿತ್ರ ನೋಡಲು ಸಾದ್ಯವಾಗುತ್ತಿಲ್ಲ.