ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ವಿಡಿಯೋ | ‘ಚೋರಿ ಚೋರಿ’ ಹಿಂದಿ ಚಿತ್ರದಲ್ಲಿ ನರ್ಗಿಸ್ – ನರಸಿಂಹರಾಜು

Share this post

ಹಾಸ್ಯತಾರೆ ನರಸಿಂಹರಾಜು ಎರಡು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. ‘ಚೋರಿ ಚೋರಿ’ (1956) ಮತ್ತು ‘ಮಿಸ್ ಮೇರಿ’ (1957) ಚಿತ್ರಗಳ ಗೌರವ ಪಾತ್ರಗಳಲ್ಲಿ ಅವರು ನಟಿಸಿದ್ದಾರೆ. ರಾಜ್‌ಕಪೂರ್ ಮತ್ತು ನರ್ಗಿಸ್ ಜೋಡಿಯ ಸೂಪರ್‌ಹಿಟ್‌ ‘ಚೋರಿ ಚೋರಿ’ ಹಿಂದಿ ಚಿತ್ರದ ಹಾಸ್ಯ ಸನ್ನಿವೇಶದಲ್ಲಿ ನರಸಿಂಹರಾಜು ಅವರಿಗೆ ಹೋಟೆಲ್ ಮಾಣಿಯ ಪಾತ್ರವಿದೆ. ಚೆನ್ನೈನಲ್ಲಿ ನಡೆದ ಚಿತ್ರೀಕರಣದಲ್ಲಿ ಹೋಟೆಲ್ ಮಾಣಿಯಾಗಿ ನರ್ಗಿಸ್‌ ಜೊತೆ ಮುಖಾಮುಖಿಯಾಗುವ ಸನ್ನಿವೇಶವದು. ಪೊಲೀಸರ ಕಣ್ತಪ್ಪಿಸಿ ಹೋಟೆಲ್‌ಗೆ ಬರುವ ನರ್ಗಿಸ್‌, ಅಲ್ಲಿ ಮಾಣಿ ನರಸಿಂಹರಾಜು ಅವರೊಂದಿಗಿನ ಮಾತುಕತೆ, ಭಾಷೆಯ ತೊಡಕಿನಿಂದಾಗಿ ಸೃಷ್ಟಿಯಾಗುವ ಹಾಸ್ಯ ಮಜವಾಗಿದೆ.

ಆಗಿನ್ನೂ ನರಸಿಂಹರಾಜು ಅವರು ಸಿನಿಮಾರಂಗಕ್ಕೆ ಬಂದ ಹೊಸತು. ಈ ಸನ್ನಿವೇಶದಲ್ಲಿ ಮಾತು ಕಡಿಮೆ. ನರಸಿಂಹರಾಜು ತಮ್ಮ ವಿಶಿಷ್ಟ ಬಾಡಿ ಲಾಂಗ್ವೇಜ್‌ನಿಂದಲೇ ಗಮನ ಸೆಳೆಯುತ್ತಾರೆ. ‘ಚೋರಿ ಚೋರಿ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ರಾಜ್‌ಕಪೂರ್‌, ‘ನರಸಿಂಹರಾಜು ಜೀ, ಆಪ್ ಚೆಲೋ ಹಮಾರೆ ಸಾಥ್… ಹಿಂದಿ ಸಿನ್ಮಾಮೆ ಆಪ್ ಬಡೇ ಸೇ ಬಡೇ ಸ್ಟಾರ್ ಬನ್‌ಜಾವೋಗೆ’ ಎಂದು ಇವರನ್ನು ಮುಂಬಯಿಗೆ ಆಹ್ವಾನಿಸಿದ್ದರಂತೆ. ಆಗ ನರಸಿಂಹರಾಜು, ‘ನಾನು ಕನ್ನಡ ಚಿತ್ರರಂಗದಲ್ಲೇ ಖುಷಿಯಾಗಿದ್ದೇನೆ. ತಮ್ಮ ಆಹ್ವಾನಕ್ಕೆ ಧನ್ಯವಾದ’ ಎಂದು ಹೇಳಿದ್ದರಂತೆ. ಈ ವಿಷಯವನ್ನು ನರಸಿಂಹರಾಜು ಅವರ ಪತ್ನಿ ಶಾರದಮ್ಮ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ಬೇಡರ ಕಣ್ಣಪ್ಪ

`ಬೇಡರ ಕಣ್ಣಪ್ಪ’ (1954) ಚಿತ್ರದೊಂದಿಗೆ ರಾಜಕುಮಾರ್‌ ನಾಯಕನಟರಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದು ಗೊತ್ತಿರುವಂಥದ್ದೆ. ಈ

'ಕಾಮನ್ ಮ್ಯಾನ್' 4 ಹಾಡುಗಳನ್ನು ಬಿಡುಗಡೆ ಮಾಡಿದ ನಾಲ್ವರು ಸೆಲೆಬ್ರಿಟಿಗಳು!

‘ಕಾಮನ್ ಮ್ಯಾನ್’ 4 ಹಾಡುಗಳನ್ನು ಬಿಡುಗಡೆ ಮಾಡಿದ ನಾಲ್ವರು ಸೆಲೆಬ್ರಿಟಿಗಳು!

ಸಾಯಿಪ್ರಕಾಶ್‌ ನಿರ್ದೇಶನದ ‘ಕಾಮನ್‌ ಮ್ಯಾನ್‌’ ಚಿತ್ರದ ನಾಲ್ಕು ಹಾಡುಗಳನ್ನು ಚಿತ್ರರಂಗದ ನಾಲ್ವರು ಸೆಲೆಬ್ರಿಟಿಗಳು ಬಿಡುಗಡೆಗೊಳಿಸಿದ್ದಾರೆ. ಈ ಸಿನಿಮಾ ಇದೇ ತಿಂಗಳು

ಯುವ ರಾಜಕುಮಾರ್ ಈಗ 'ಪವರ್ ಮ್ಯಾನ್'

ಯುವ ರಾಜಕುಮಾರ್ ಈಗ ‘ಪವರ್ ಮ್ಯಾನ್’

ಜಡೇಶ್‌ ಕೆ.ಹಂಪಿ ನಿರ್ದೇಶನದ ‘ಪವರ್‌ ಮ್ಯಾನ್‌’ ಸಿನಿಮಾ ಸೆಟ್ಟೇರಿದೆ. ‘ಎಕ್ಕ’ ಚಿತ್ರದ ನಂತರ ಯುವ ರಾಜಕುಮಾರ್‌ ನಟಿಸುತ್ತಿರುವ ಪ್ರಾಜೆಕ್ಟ್‌ ಇದು.