ನಟಿ ದೇವಿಕಾ ರಾಣಿ ನೆನಪು

ಕರ್ನಾಟಕ ರಾಜ್ಯ ಸರ್ಕಾರ, ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಸುಚಿತ್ರಾ ಫಿಲ್ಮ್ ಸೊಸೈಟಿ ಸಹಯೋಗದಲ್ಲಿ ಕನ್ನಡ ಚಲನಚಿತ್ರ ಪತ್ರಕರ್ತರು 1977ರಲ್ಲಿ ‘ನಾಸ್ಟಾಲ್ಜಿಯಾ’ ಶೀರ್ಷಿಕೆಯಡಿ ವಿಶಿಷ್ಟ ಸಮಾರಂಭವೊಂದನ್ನು ಆಯೋಜಿಸಿದ್ದರು. ರವೀಂದ್ರ ಕಲಾಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಕಾರ್ಯಕ್ರಮಗಳು ನಡೆದಿದ್ದವು. ಆಗ ಹಿಂದಿ ತಾರೆ ದೇವಿಕಾ ರಾಣಿ ಅವರನ್ನು ನಟಿ ಬಿ.ಸರೋಜಾದೇವಿ ಅಭಿನಂದಿಸಿದ ಸಂದರ್ಭವಿದು. ಇಂದು ನಟಿ ದೇವಿಕಾ ರಾಣಿ (30/03/1908 – 09/03/1994) ಅವರ ಸಂಸ್ಮರಣಾ ದಿನ.(ಫೋಟೊ : ಪ್ರಗತಿ ಅಶ್ವತ್ಥ ನಾರಾಯಣ)