ಕೆ.ವಿ.ರೆಡ್ಡಿ ನಿರ್ದೇಶನದ ತೆಲುಗು ಸಿನಿಮಾ ‘ಪಾತಾಳ ಭೈರವಿ’ ಮೈಲುಗಲ್ಲಾದ ಪ್ರಯೋಗ. ಅದನ್ನು ಪೂರ್ಣ ಚಿತ್ರಿಸಲು ಒಂದು ವರ್ಷ ಎರಡು ವಾರ ಅವಧಿ ಬೇಕಾಯಿತು (05/02/50ರಿಂದ 18/02/1951). ಅಲ್ಲೂರಿ ಚಕ್ರಪಾಣಿ ಮತ್ತು ಬಿ.ನಾಗಿರೆಡ್ಡಿ ಚಿತ್ರದ ನಿರ್ಮಾಪಕರು. ಸಂಗೀತ ಸಂಯೋಜನೆ ಘಂಟಸಾಲಾ, ಛಾಯಾಗ್ರಹಣ ಮಾರ್ಕಸ್ ಬರ್ಟ್‌ಲೀ ಅವರದು. ಎನ್.ಟಿ.ರಾಮರಾವು, ಎಸ್.ವಿ.ರಂಗರಾವು, ಮಾಲತಿ, ಕಮಲಾ, ಆಂಜನೇಯುಲು ಪ್ರಮುಖ ಪಾತ್ರಧಾರಿಗಳು.
15/03/1951ರಂದು ಬಿಡುಗಡೆಯಾದ ಸಿನಿಮಾ ಇಪ್ಪತ್ತೆಂಟು ಸಿನಿಮಾ ಮಂದಿರಗಳಲ್ಲಿ ನೂರು ದಿನಗಳಿಗೂ ಮೀರಿ ಪ್ರದರ್ಶನ ಕಂಡಿತು. ಆಂಧ್ರ ಮಾತ್ರವಲ್ಲದೆ ತಮಿಳುನಾಡು ಮತ್ತು ಕರ್ನಾಟಕದಲ್ಲೂ ಶತದಿನೋತ್ಸವ ಆಚರಿಸಿಕೊಂಡಿತು. ಭಾರತದಲ್ಲಿ ಆಯೋಜಿಸಿದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ (1952) ವಿದೇಶಿ ಚಿತ್ರಗಳೊಂದಿಗೆ ಪ್ರದರ್ಶನಕ್ಕೆ ಆರಿಸಲ್ಪಟ್ಟ ನಾಲ್ಕು ಭಾರತೀಯ ಚಿತ್ರಗಳಲ್ಲಿ ದಕ್ಷಿಣ ಭಾರತದ ಚಿತ್ರ ‘ಪಾತಾಳ ಭೈರವಿ’ಯೂ ಒಂದು.
(ಮಾಹಿತಿ ಕೃಪೆ: ‘ವಿಜಯಚಿತ್ರ’ ವಿಶೇಷ ಸಂಚಿಕೆ)