ನಿರ್ದೇಶಕ ವೈ.ಆರ್.ಸ್ವಾಮಿ ನೆನಪು

ಮದರಾಸಿನ ಸ್ಟೂಡಿಯೋವೊಂದರಲ್ಲಿ ‘ವಾತ್ಸಲ್ಯ’ (1965) ಸಿನಿಮಾ ಚಿತ್ರೀಕರಣದ ಬಿಡುವಿನಲ್ಲಿ ನಟ ರಾಜಕುಮಾರ್, ನಿರ್ದೇಶಕ ವೈ.ಆರ್.ಸ್ವಾಮಿ ಮತ್ತು ನಟ ಉದಯಕುಮಾರ್ ಅವರು ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯನ ಅವರಿಗೆ ಪೋಸು ಕೊಟ್ಟಿದ್ದು ಹೀಗೆ. ಕನ್ನಡ ಚಿತ್ರರಂಗದ ಎರಡನೇ ತಲೆಮಾರಿನ ನಿರ್ದೇಶಕರ ಯಾದಿಯಲ್ಲಿ ಮಹತ್ವದ ಸ್ಥಾನ ಪಡೆದವರು ವೈ.ಆರ್.ಸ್ವಾಮಿ. ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳ 60ಕ್ಕೂ ಹೆಚ್ಚು ಚಿತ್ರಗಳನ್ನು ಸ್ವಾಮಿ ನಿರ್ದೇಶಿಸಿದ್ದಾರೆ. ಹಲವು ಸಿನಿಮಾಗಳ ಚಿತ್ರಕಥೆ ರಚನೆಕಾರರೂ ಹೌದು. ರೇಣುಕಾ ಮಹಾತ್ಮೆ, ಸ್ವರ್ಣಗೌರಿ, ಮುರಿಯದ ಮನೆ, ಕಠಾರಿವೀರ, ಭಲೇ […]