ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಪ್ರಗತಿ ಸ್ಟುಡಿಯೋ – ಆಯುಧ ಪೂಜೆ

ಕನ್ನಡ ಸಿನಿಮಾ ಸ್ಥಿರಚಿತ್ರ ಛಾಯಾಗ್ರಹಣದಲ್ಲಿ ‘ಪ್ರಗತಿ ಸ್ಟುಡಿಯೋ’ ಕೊಡುಗೆ ಗಮನಾರ್ಹವಾದುದು. ಬೆಂಗಳೂರು ಗಾಂಧಿನಗರದಲ್ಲಿ ಸುಮಾರು ಮೂರೂವರೆ ದಶಕಗಳ ಕಾಲ ಸ್ಟುಡಿಯೋ ಅಸ್ತಿತ್ವದಲ್ಲಿತ್ತು. ಆಗೆಲ್ಲಾ ಕನ್ನಡ ಸಿನಿಮಾರಂಗದ ಕಲಾವಿದರು ಹಾಗೂ ತಂತ್ರಜ್ಞರಿಗೆ ಸ್ಟುಡಿಯೋ ಮೀಟಿಂಗ್ ಪಾಯಿಂಟ್ ಕೂಡ ಆಗಿತ್ತು. 1975ರ ದಸರಾದಲ್ಲಿ ‘ಪ್ರಗತಿ ಸ್ಟುಡಿಯೋ’ದ ಆಯುಧಪೂಜೆ ಸಂದರ್ಭ (1975). ಸ್ಟುಡಿಯೋ ಮಾಲೀಕರಾದ ನಾಗೇಶ್ ಬಾಬ (ಚಿತ್ರನಿರ್ದೇಶಕರೂ ಹೌದು) ಮತ್ತು ಅಶ್ವತ್ಥ ನಾರಾಯಣ ಇದ್ದಾರೆ. ಅವರೊಂದಿಗಿರುವ ಹುಡುಗರು ಸಹಾಯಕರು. ಪುಟ್ಟ ಬಾಲಕ ನಾಗೇಶ್ ಬಾಬ ಅವರ ಪುತ್ರ ಆದರ್ಶ.