ಆರ್‌ಎನ್‌ಜೆ – ಚಿ.ಉದಯಶಂಕರ್ – ವಿಜಯನಾರಸಿಂಹ

(ಫೋಟೊ – ಬರಹ: ಎನ್.ಎಸ್.ಶ್ರೀಧರಮೂರ್ತಿ) ಕನ್ನಡ ಚಿತ್ರಗೀತೆಗಳ ‘ರತ್ನತ್ರಯರು’ ಎಂದೇ ಕರೆಯಬಹುದಾದ ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್ ಮತ್ತು ವಿಜಯನಾರಸಿಂಹ ಮೂವರೂ ಒಟ್ಟಿಗೆ ಇರುವ ಅಪರೂಪದ ಪೋಟೋ ಇದು. ಈ ಫೋಟೊ ಸೆರೆಯಾದ ಸಂದರ್ಭ ಕೂಡ ವಿಶಿಷ್ಟವಾದದ್ದೇ. 1967ರಲ್ಲಿ ಬಿ.ಎ.ಅರಸ್ ಕುಮಾರ್ ತಮ್ಮದೇ ಪ್ರಸಿದ್ದ ನಾಟಕ ‘ಅಭಾಗಿನಿ’ಯನ್ನು ‘ಬಂಗಾರದ ಹೂವು’ ಶೀರ್ಷಿಕೆಯಡಿ ಚಿತ್ರವಾಗಿಸಲು ನಿರ್ಧರಿಸಿದರು. ಅವರಿಗೆ ಬೆಂಬಲವಾಗಿ ನಿಂತವರು ಅವರ ಬಾಲ್ಯದ ಸಹಪಾಠಿ ಚಿ.ಉದಯಶಂಕರ್. ಅವರ ನೆರವಿನಿಂದಲೇ ರಾಜ್ ಕುಮಾರ್, ಕಲ್ಪನಾ, ಶೈಲಶ್ರೀ, ಉದಯ ಕುಮಾರ್, ಬಾಲಕೃಷ್ಣ, ನರಸಿಂಹರಾಜು ಎಲ್ಲರೂ […]