ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಹೇಮಾಮಾಲಿನಿ – 73

‘ಜಾನಿ ಮೇರಾ ನಾಮ್‌’ (1969) ಹಿಂದಿ ಸಿನಿಮಾ ಮುಹೂರ್ತದ ಸಂದರ್ಭ. ನಿರ್ಮಾಪಕ ಗುಲ್ಶನ್ ರಾಯ್‌, ಅನಂತ ಸ್ವಾಮಿ, ಬಿ.ಆರ್‌.ಚೋಪ್ರಾ, ಸುಬೋಧ್ ಮುಖರ್ಜಿ, ನಟ ದೇವಾನಂದ್‌, ನಟಿ ಹೇಮಾಮಾಲಿನಿ, ನಿರ್ದೇಶಕ ವಿಜಯ್ ಆನಂದ್‌, ಗುಲ್ಶನ್ ರಾಯ್ ಅವರ ಪತ್ನಿ ಇದ್ದಾರೆ. ಹಿಂದಿ ಚಿತ್ರರಂಗ ಕಂಡ ಯಶಸ್ವೀ ಮತ್ತು ಪ್ರಮುಖ ನಾಯಕನಟಿ ಹೇಮಾಮಾಲಿನಿ ಇಂದು 73ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಭಾನು ಅಥಯ್ಯ ನೆನಪು

ರಿಚರ್ಡ್‌ ಅಟೆನ್‌ಬರೊ ನಿರ್ದೇಶನದ ‘ಗಾಂಧಿ’ (1982) ಇಂಗ್ಲೀಷ್‌ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಶೀರ್ಷಿಕೆ ಪಾತ್ರಧಾರಿ ಬೆನ್‌ ಕಿಂಗ್‌ಸ್ಲೇ ಅವರೊಂದಿಗೆ ವಸ್ತ್ರವಿನ್ಯಾಸಕಿ ಭಾನು ಅಥಯ್ಯ. ‘ಗಾಂಧಿ’ ಚಿತ್ರದ ಅತ್ಯುತ್ತಮ ವಸ್ತ್ರವಿನ್ಯಾಸಕ್ಕೆ ಆಸ್ಕರ್ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ವ್ಯಕ್ತಿ ಭಾನು ಅಥಯ್ಯ. ಅವರಿ ಜಾನ್ ಮೊಲ್ಲೋರೊಂದಿಗೆ ಈ ಆಸ್ಕರ್ ಪ್ರಶಸ್ತಿ ಹಂಚಿಕೊಂಡಿದ್ದರು. ‘ಲೇಕಿನ್‌’ ಮತ್ತು ‘ಲಗಾನ್‌’ ಹಿಂದಿ ಚಿತ್ರಗಳ ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ಅವರು ಎರಡು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಸಿಐಡಿ, ಪ್ಯಾಸಾ, ಕಾಗಜ್‌ ಕೆ ಫೂಲ್‌, […]