ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸ್ಥಿರಚಿತ್ರ ಛಾಯಾಗ್ರಾಹಕರ ಸಂಘ; ಒಂದು ನೆನಪು

Share this post
ಪ್ರಗತಿ ಅಶ್ವತ್ಥ ನಾರಾಯಣ
ಸ್ಥಿರಚಿತ್ರ ಛಾಯಾಗ್ರಾಹಕ

ಗಾಂಧಿನಗರದಲ್ಲಿ ‘ಪ್ರಗತಿ’ ಸ್ಟುಡಿಯೋ ಆರಂಭಿಸಿದ ನಂತರ ಸ್ಥಳೀಯ ಛಾಯಾಗ್ರಾಹಕರಿಗೆ ತರಬೇತಿ ನೀಡತೊಡಗಿದೆವು. ಕ್ರಮೇಣ ಸ್ಥಳೀಯರಿಗೆ ಅವಕಾಶಗಳು ಸಿಗತೊಡಗಿದವು. 1985ರಲ್ಲಿ ಸ್ಥಿರಚಿತ್ರ ಛಾಯಾಗ್ರಾಹಕರೆಲ್ಲರೂ ಸೇರಿ ಸಂಘಟನೆಯೊಂದನ್ನು ಆರಂಭಿಸಿದೆವು.

ಎಪ್ಪತ್ತರ ದಶಕದ ಪೂರ್ವಾರ್ಧದಲ್ಲಿ ಕನ್ನಡ ಸಿನಿಮಾ ಚಟುವಟಿಕೆಗಳು ನಿಧಾನವಾಗಿ ಕನ್ನಡ ನಾಡಿನಲ್ಲಿ ನೆಲೆಗೊಳ್ಳತೊಡಗಿದ್ದವು. ಆದರೆ ವಿವಿಧ ವಿಭಾಗಗಳ ಬಹುತೇಕ ತಂತ್ರಜ್ಞರು ಮದರಾಸಿನವರೇ ಆಗಿದ್ದರು. ಛಾಯಾಗ್ರಾಹಕರು, ಸ್ಥಿರಚಿತ್ರ ಛಾಯಾಗ್ರಾಹಕರು, ಮೇಕಪ್‌ಮ್ಯಾನ್‌, ಕಾಸ್ಟ್ಯೂಮರ್‌, ಸಂಕಲನಕಾರರು, ಕಲಾ ನಿರ್ದೇಶಕರು.. ಹೀಗೆ ಪ್ರತಿಯೊಬ್ಬರೂ ಮದರಾಸಿನಿಂದ ಬಂದು ಕೆಲಸಮಾಡಿ ಹೋಗುತ್ತಿದ್ದರು. ಈ ವಿಭಾಗದಲ್ಲಿ ಕೆಲಸ ಮಾಡುವ ಪರಿಣಿತರು ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಇರಲಿಲ್ಲ.

ನಾನು 1965ರಲ್ಲಿ ಸ್ಥಿರಚಿತ್ರ ಛಾಯಾಗ್ರಾಹಕನಾಗಲು ಮದರಾಸಿಗೆ ಹೋದಾಗ ಅದಾಗಲೇ ಕನ್ನಡಿಗರಾದ ವೃಷಬೇಂದ್ರಯ್ಯ,  ಎಂ.ಆರ್.ಕೆ.ಮೂರ್ತಿ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಹೆಸರು ಮಾಡಿದ್ದರು. ನಾನು ಮೂರನೆಯವನಾಗಿ ಪದಾರ್ಪಣೆ ಮಾಡಿದೆ. 1972ರಲ್ಲಿ ಬೆಂಗಳೂರಿಗೆ ವಾಪಸು ಬಂದು ನನ್ನ ಅಣ್ಣ, ಚಿತ್ರನಿರ್ದೇಶಕ ನಾಗೇಶ್ ಬಾಬ ಅವರ ಜೊತೆಯಲ್ಲಿ ಗಾಂಧಿನಗರದಲ್ಲಿ ಚಲನಚಿತ್ರಗಳ ಸ್ಥಿರಚಿತ್ರಗಳಿಗೆ ಮೀಸಲಾದ ‘ಪ್ರಗತಿ ಸ್ಟುಡಿಯೋ’ ಆರಂಭಿಸಿದೆವು. ಸ್ಥಳೀಯ ಛಾಯಾಗ್ರಾಹಕರನ್ನು ಸೇರಿಸಿಕೊಂಡು ಅವರಿಗೆ ತರಬೇತಿ ನೀಡಿ ಸ್ಥಳೀಯ ಛಾಯಾಗ್ರಾಹಕರನ್ನೇ ತಮ್ಮ ಚಿತ್ರಗಳಿಗೆ ನೇಮಕ ಮಾಡಿಕೊಳ್ಳುವಂತೆ ನಿರ್ಮಾಪಕರಲ್ಲಿ ಮನವಿ ಮಾಡಿದೆವು. ಮೊದಮೊದಲು ನಮಗೆ ಹೆಚ್ಚಿನ ಸಹಕಾರ ಸಿಗಲಿಲ್ಲ. ಕ್ರಮೇಣ ಚಿತ್ರನಿರ್ಮಾಪಕರು ಸ್ಥಳೀಯ ಸ್ಥಿರಚಿತ್ರ ಛಾಯಾಗ್ರಾಹಕರನ್ನು ತಮ್ಮ ಚಿತ್ರಗಳಿಗೆ ನೇಮಕ ಮಾಡಿಕೊಳ್ಳಲು ಶುರುಮಾಡಿದರು.

1985ರಲ್ಲಿ ಸ್ಥಿರಚಿತ್ರ ಛಾಯಾಗ್ರಾಹಕರೆಲ್ಲರೂ ಸೇರಿ ‘ಕರ್ನಾಟಕ ಚಲನಚಿತ್ರ ಸ್ಥಿರಚಿತ್ರ ಛಾಯಾಗ್ರಾಹಕರ ಸಂಘ’ ಸಂಘಟನೆ ಪ್ರಾರಂಭಿಸಿದೆವು. ಪರಾಗ್ ಹೋಟೆಲ್‌ನಲ್ಲಿ ಸಂಘದ ಉದ್ಘಾಟನಾ ಸಮಾರಂಭ ಬಹು ವಿಜೃಂಭಣೆಯಿಂದ ನಡೆಯಿತು. ಚಿತ್ರರಂಗದ ಬಹಳಷ್ಟು ಪ್ರಮುಖರು ಸಮಾರಂಭಕ್ಕೆ ಆಗಮಿಸಿ ನಮ್ಮನ್ನು ಹಾರೈಸಿದರು. ನಟರಾದ ಅನಂತ್ ನಾಗ್, ಶಂಕರ್ ನಾಗ್, ಚಿತ್ರನಿರ್ದೇಶಕರಾದ  ಎನ್‌.ಲಕ್ಷ್ಮೀನಾರಾಯಣ್‌, ರಾಜೇಂದ್ರ ಸಿಂಗ್ ಬಾಬು, ನಾಗಾಭರಣ, ಜೊಸೈಮನ್ ಹಾಗೂ ನಿರ್ಮಾಪಕರಾದ ಬಾಲಾಜಿ ಸಿಂಗ್, ಪ್ರಭಾಕರ ರೆಡ್ಡಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಸ್ಥಾಪಕ ಅದ್ಯಕ್ಷನಾಗಿ ನಾನು (ಅಶ್ವತ್ಥ ನಾರಾಯಣ)‌ ಉಪಾಧ್ಯಕ್ಷರಾಗಿ ನಾಗರಾಜ್, ಕಾರ್ಯದರ್ಶಿಯಾಗಿ ಜೆ.ಜೆ.ಕೃಷ್ಣ, ಖಜಾಂಚಿಯಾಗಿ ಶಂಕರ್ ಸಿಂಗ್ ಅಯ್ಕೆಯಾಗಿದ್ದೆವು.  ಹೀಗೆ ಸತತವಾಗಿ 16 ವರ್ಷ ನಾನು ಅದ್ಯಕ್ಷನಾಗಿ ಕಾರ್ಯನಿರ್ವಹಿಸಿದೆ. ಸ್ಥಿರಚಿತ್ರ ಛಾಯಾಗ್ರಾಹಣ ಕನ್ನಡದ ನೆಲದಲ್ಲಿ ಭದ್ರವಾಗಿ ನೆಲೆ ಕಂಡುಕೊಳ್ಳಲು ಈ ಸಂಘಟನೆ ನೆರವಾಗಿದ್ದು ಹೌದು. ಇಂದಿಗೂ ಸಂಘಟನೆ ಅಸ್ತಿತ್ವದಲ್ಲಿದ್ದು, ನಮ್ಮ ಬಳಗದ ಸ್ಥಿರಚಿತ್ರ ಛಾಯಾಗ್ರಾಹಕರು ಪರಸ್ಪರರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಿದ್ದಾರೆ. ಅಂದಿನ ಸಂಘಟನೆ ಉದ್ಘಾಟನಾ ಸಮಾರಂಭದ ಫೊಟೋಗಳು ಇಲ್ಲಿವೆ.

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ